ಧಾರವಾಡ
ಧಾರವಾಡ ಲೋಕಸಭಾ ಚುನಾವಣಾ ಪ್ರಯುಕ್ತ ಇಂದು ಖ್ಯಾತ ವೈದ್ಯರು ರಾಜ್ಯ ಪ್ರಶಸ್ತಿ ವಿಜೇತ ಡಾ ಎಸ ಆರ ರಾಮನಗೌಡರ
ಅವರ ನೇತೃತ್ವದಲ್ಲಿ ಮಹಾತ್ಮ ಬಸವೇಶ್ವರ ನಗರದ ಹಿರಿಯರೊಂದಿಗೆ ಸಭೆ ನಡೆಸಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರಿಗೆ ಬೆಂಬಲ ಸೂಚಿಸುವ ಕುರಿತು ಸಭೆ ನಡೆಸಲಾಯಿತು.
ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಡಾ.ಎಸ.ಆರ್.ರಾಮನಗೌಡರ ,
ದೇಶ ಮೂರನೆ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಮತ್ತೊಮ್ಮೆ ದೇಶದ ಚುಕ್ಕಾಣಿ ನರೇಂದ್ರ ಮೋದಿಯವರು ಹಿಡಿದು, ದೇಶವನ್ನ ಮುನ್ನಡೆಸಬೇಕು ಹಾಗೂ ಧಾರವಾಡ ಲೋಕಸಭೆಯಿಂದ 5 ನೇ ಬಾರಿಗೆ ಪ್ರಲ್ಹಾದ ಜೋಶಿಯವರ ಆಯ್ಕೆ ಮಾಡಿ ಕಳಿಸಲು ಮನವಿ ಮಾಡಿದರು.
ಭಾರತ 2047 ರಲ್ಲಿ ವಿಶ್ವ ಗುರುವಾಗಲು 24/7 ಕಾರ್ಯ ನಿರ್ವಹಿಸಲು ಮೋದಿ ಸರ್ಕಾರ ಸನ್ನದ್ದಾಗಿರುವದು. ಇಂತಹ ಪ್ರಧಾನಮಂತ್ರಿ ನಮಗೆ ಸಿಕ್ಕಿರುವದೆ ನಮ್ಮ ಸೌಭಾಗ್ಯ ಇಂತಹ ಪ್ರಧಾನಮಂತ್ರಿಯನ್ನ ಆಯ್ಕೆಮಾಡಲು ಪ್ರಲ್ಹಾದ ಜೋಶಿಯವರನ್ನ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಚಂಡ ಮತಗಳಿಂದ ಗೆಲ್ಲಿಸಬೇಕೆಂದು ಕರೆನೀಡಿದರು.
ಮಾಜಿಮಹಾಪೌರರು ಈರೇಶ ಅಂಚಟಗೇರಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ ಹಾಗು ಕೇಂದ್ರ ಸಚಿವರ ಸಾಧನೆಗಳ ಕಿರುಹೊತ್ತಿಗೆಯನ್ನ ಹಿರಿಯರಿಗೆ ನೀಡಿ ದೇಶದ ಅಭಿವೃದ್ಧಿ ಹಾಗೂ ಧಾರವಾಡದ ಅಭಿವೃದ್ಧಿ ಬಗ್ಗೆ ಹಾಗು ಕೇಂದ್ರ ಸಚಿವರು ಸಿ ಎಸ ಆರ ನಿಧಿಯಡಿ ಕೈಗೊಂಡ ಕಾರ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿ ಕ್ಷೇತ್ರ ಹಾಗು ದೇಶ ಅಭಿವೃದ್ದೀಶೀಲರಾಗಲು ಮತ್ತೊಮ್ಮೆ ಮೋದಿಯವರು ದೇಶದ ಪ್ರಧಾನಿಯಾಗಬೇಕು ಮತ್ತೊಮ್ಮೆ ಪ್ರಲ್ಹಾದ ಜೋಶಿಯವರನ್ನ ಈ ಭಾಗದಿಂದ ಸಂಸದರನ್ನಾಗಿ ಆಯ್ಕೆ ಮಾಡಬೇಕೆಂದು, ತಮ್ಮ ಅತ್ಯಮೂಲ್ಯ ಮತವನ್ನ ಬಿಜೆಪಿ ಕಮಲ ಗುರುತಿಗೆ ನೀಡಬೇಕೆಂದು ಮನವಿ ಮಾಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಖ್ಯಾತ ವಕೀಲರು ಸಿ ಎಸ ಶಿವಳ್ಳಿ ಹಾಗು ರಾಜಶೇಖರ ಬೆಳ್ಳಕ್ಕಿಯವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈಬಲಪಡಿಸಲು ಕರೆ ನೀಡಿದರು. ಮಹಾಂತ ನಗರದ ಹಿರಿಯರಾದ ವಿರುಪಾಕ್ಷ ಹಾದಿಮನಿ, ಸುನೀಲ ಮೋರೆ ಹಾಗು ಗಣ್ಯರು ಉಪಸ್ಥಿತರಿದ್ದರು.