ವಿನಯ ಕುಲಕರ್ಣಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿದ್ದು ಜೋಶಿ ಅವರಲ್ಲಾ, ಸುಪ್ರೀಂಕೋರ್ಟ್ ನ ಆದೇಶ.
ಧಾರವಾಡ ಜಿಲ್ಲೆಯ ಲಿಂಗಾಯತ ಸಮಾಜದ ಮುಖಂಡರು, ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಈರೇಶ ಅಂಚಟಗೇರಿ ಹಲವಾರು ಪ್ರಶ್ನೆಗಳನ್ನ ಧಾರವಾಡ ಗ್ರಾಮೀಣ ಶಾಸಕರಿಗೆ ಕೇಳಿದ್ದಾರೆ.
ಇತ್ತೀಚಿಗೆ ಶಾಸಕರು ಸುದ್ದಿ ಮಾಧ್ಯಮವೊಂದರಲ್ಲಿ ಪಾಲಿಕೆ ಸದಸ್ಯರು ಕೇಂದ್ರ ಸಚಿವರ ಹಿಂದೆ ಇದ್ದಾರೆ ಎನ್ನುವ ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆ ಸ್ಪಷ್ಟವಾಗಿ ಸ್ಪಷ್ಠಿಕರಣ ಕೊಟ್ಟಿರುವ ಈರೇಶ ಅಂಚಟಗೇರಿ ಅವರು, ಪ್ರಕಟಣೆ ನೀಡಿದ್ದು, ವಿವರಣೆ ಹೀಗಿದೆ.
ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ, ಧಾರವಾಡ 71 ನೇ ವಿಧಾನಸಭಾ ಕ್ಷೆತ್ರದ ಶಾಸಕರು, ತಮ್ಮ ನ್ಯಾಯಾಂಗ ಹೋರಾಟದಲ್ಲಿ ವಿಫಲರಾಗಿದ್ದು , ಕೇವಲ ಹತಾಶೆ ಭಾವನೆಯನ್ನು ವ್ಯಕ್ತಪಡಿಸುವ ಪ್ರಸಂಗವಾಗಿದೆ.
ಶ್ರೀ. ವಿನಯ ಕುಲಕರ್ಣಿ ಈಗಾಗಲೇ ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯನ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿ ,ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು , ಧಾರವಾಡ ಪ್ರದೇಶದ ವ್ಯಾಪ್ತಿಯಲ್ಲಿ ಅವರ ಪ್ರವೇಶವನ್ನು ಮಾನ್ಯ ಸುರ್ಪಿಂಕೋರ್ಟ್ , ನಿಷೇಧ ಮಾಡಿ ಆದೇಶವನ್ನು ಜಾರಿಮಾಡಿದ್ದು ಇದುವರೆಗೂ ಧಾರವಾಡವನ್ನು ಪ್ರವೇಶ ಮಾಡಲು ಸಾಧ್ಯವಾಗದ ಕಾರಣ ಹತಾಶೆ ಹಾಗೂ ದ್ವೇಷದ ಭಾವನೆ ಬೆಳೆಸಿಕೊಂಡು ವೈಯಕ್ತಿಕ ತೇಜೋವಧೆ ಮಾಡುವ ಚುನಾವಣಾ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ವ್ರತಾ ಆರೋಪಗಳನ್ನು, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಯವರ ಕುರಿತು ಅತ್ಯಂತ ಕೆಳ ಮಟ್ಟದ ಮತ್ತು ವೈಯಕ್ತಿಕ ಟೀಕೆ ಟಿಪ್ಪಣಿಗಳನ್ನು ಸಾರ್ವಜನಿಕ ಸಭೆಗಳಲ್ಲಿ ಮತ್ತು ಮಾಧ್ಯಮಗಳ ಮುಖಾಂತರ ಮಾಡುತ್ತಿರುವದು ಆಕ್ಷೇಪಾರ್ಹವಾಗಿದೆ.
2) ಪಂಚಮಸಾಲಿ ಲಿಂಗಾಯತ ಸಮಾಜದ ಯುವನಾಯಕನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಭಾಗಿಯಾದಂತ ಗಂಭೀರವಾದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷನಾಗಿದ್ದ ಮಾತ್ರಕ್ಕೆ ಇಡೀ ಲಿಂಗಾಯತ ಸಮಾಜ ಅವರನ್ನು ಒಪ್ಪಿಕೊಳ್ಳುತ್ತದೆ ಎಂದು ಭಾವಿಸುವುದು ಮೂರ್ಖತನದ ಪರಮಾವಧಿಯಲ್ಲದೆ ಮತ್ತೇನು. ಲಿಂಗಾಯತ ಸಮಾಜದ ಮತದಾರ ಪ್ರಭುಗಳು ಅಷ್ಟೇನೂ ದಡ್ಡರಲ್ಲ ಎಂಬುದು ನೆನಪಿರಲಿ.
3) ವಿನಾಕಾರಣ ಶ್ರೀ. ಜೋಶಿಯವರನ್ನು ಲಿಂಗಾಯತರ ವಿರೋಧಿ ಎನ್ನುವಂತೆ ಹೇಳಿಕೆಗಳನ್ನು ಕೊಡುತ್ತಾ ಜಾತಿಯಾಧಾರಿತ ರಾಜಕಾರಣವನ್ನು ಪುರಸ್ಕರಿಸುತ್ತಿದ್ದಾರೆ .
ಮಾಜಿ ಸಚಿವ ಕೂಡ ಷರತ್ತು ಬದ್ಧ ಜಾಮೀನಿಗೆ ಒಪ್ಪಿದ ನಂತರವೇ ಒಂಬತ್ತು ತಿಂಗಳ ನಂತರ ಬೆಳಗಾವಿ ಹಿಂಡಲಗಾ ಜೈಲಿನಿಂದ ಹೊರಗಡೆ ಬಂದಿದ್ದಾರೆ. ಆದರೆ, ಇಂದಿಗೂ ಅವರ ನಡೆ ನುಡಿ ನೋಡಿದರೆ ಅವರು ಇನ್ನು ಗೂಂಡಾ ಪ್ರವೃತ್ತಿಯಿಂದ ಹೊರಬಂದಂತೆ ಕಾಣುತ್ತಿಲ್ಲ.
ಯೋಗೀಶಗೌಡ ಗೌಡರ ಸಾವಿನ ಮನೆಯಲ್ಲಿ ರಾಜಕೀಯ ಮಾಡಿದ್ದು ಇದೇ ಲಿಂಗಾಯತ ನಾಯಕನೆಂದು ಬಿಂಬಿಸಿಕೊಳ್ಳುವವರು ಅಲ್ಲವೇ,
ಯೋಗೀಶಗೌಡ ಗೌಡರ ಪತ್ನಿಯನ್ನು ಸೆಳೆದಿದ್ದು, ಅದೇ ಲಿಂಗಾಯತ ಸಮಾಜದ ನಾಯಕರೆಂಬುದು ಜಿಲ್ಲೆಯ ಜನತೆ ಮರೆತಿಲ್ಲ. 99 ಲಿಂಗಾಯತ ಒಳಪಂಗಡಗಳ ಪೈಕಿ ಒಂದಾಗಿರುವ ಬಸವಣ್ಣನವರ ವಚನ ಚಳುವಳಿ ಸಂದರ್ಭದಲ್ಲಿಯೇ, ಕಾಯಕವೇ ಕೈಲಾಸ ಎಂಬ ಸಂದೇಶ ಸಾರಿದ ನೂಲಿ ಚಂದಯ್ಯನವರ ಸಮಾಜಕ್ಕೆ ಸೇರಿದ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರು ಪ್ರಬುದ್ದರಿದ್ದಾರೆ. ಗೂಂಡಾಮುಕ್ತ ಧಾರವಾಡ ಜಿಲ್ಲೆಗಾಗಿ ಮತ್ತೊಮ್ಮೆ
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಗೆಲುವು ಸಾಧಿಸುವುದು ಅನಿವಾರ್ಯ ಹಾಗೂ ಅಗತ್ಯ ಎಂಬುದನ್ನು ಮರೆಯದಿರಿ ಮರೆತು ನಿರಾಶರಾಗದಿರಿ.
4) ಈ ಹಿಂದೆ ಮಂತ್ರಿ ಹುದ್ದೆಯಲ್ಲಿ ನಡೆಸಿಕೊಂಡು ಬಂದ ದುರಾಡಳಿತ ಮತ್ತು ಭ್ರಷ್ಟಾಚಾರ ಜನತೆಯ ಮನಸಿನಲ್ಲಿ ಈಗಲೂ ಇದ್ದು,
ಈ ರೀತಿಯ
ಬಿಜೆಪಿ ಅಭ್ಯರ್ಥಿ ಶ್ರೀ. ಜೋಶಿಯವರ ಮೇಲೆ ಮಾಡುವ ಯಾವುದೇ ಆರೋಪಗಳಿಗೆ ಸೂಕ್ತ ಉತ್ತರವನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ನಿಶ್ಚಿತವಾಗಿಯೂ ನೀಡುತ್ತಾರೆ ಎಂದು ಅಂಚಟಗೇರಿ ಅವರು ಪ್ರಕಟಣೆಯ ಮೂಲಕ ಸತ್ಯವನ್ನು ಹೊರಗೆ ತಂದಿದ್ದಾರೆ.