ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರಿಗೆ ಅಪಮಾನ ಅಗೌರವ ಸಲ್ಲಿಕೆ- ಬಿಜೆಪಿ‌ ಮುಖಂಡ ಅಂಚಟಗೇರಿ ಅಸಮಾಧಾನ

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರಿಗೆ ಅಪಮಾನ ಅಗೌರವ ಸಲ್ಲಿಕೆ- ಬಿಜೆಪಿ‌ ಮುಖಂಡ ಅಂಚಟಗೇರಿ ಅಸಮಾಧಾನ

ಹುಬ್ಬಳ್ಳಿ

 ಹುಬ್ಬಳ್ಳಿಯಲ್ಲಿ ಕಾಂಗ್ರೆಸ ಪಕ್ಷದ ಪ್ರಧಾನಕಾರ್ಯದರ್ಶಿ  ಸುರ್ಜೆವಾಲ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ  ಮಾಜಿ ವಿಧಾನಪರಿಷತ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹಾಗೂ ಮಾಜಿ ಸಂಸದರು ಪ್ರೊ ಐ ಜಿ ಸನದಿ ಅವರನ್ನ ವೇದಿಕೆ ಮುಂಭಾಗದಲ್ಲಿ ಕೆಳಗಡೆ ಕುರ್ಚಿಗಳ ಮೇಲೆ ಅವರನ್ನ ಕೂಡಿಸಿದ್ದು ಹಿರಿಯ ರಾಜಕಾರಣಿಗಳಿಗೆ ಮಾಡಿದ ಅಗೌರವ ಹಾಗು ಅಪಮಾನ. ಇದು  ಕಾಂಗ್ರೆಸ ಪಕ್ಷ ಹಿರಿಯರನ್ನು ನಡೆಸುಕೊಂಡುವ‌ ಹೋಗುವ ಪರಿ‌ ಎಂದು‌ ಮಾಜಿ ಮೇಯರ್ ಅಂಚಟಗೇರಿ ಅಸಮಾಧಾನ ವ್ಯಕ್ತಪಡಿಸಿದರು. 
ಪಕ್ಷಕ್ಕೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ಶಾಸಕರಾಗಿ ವಿಧಾನಪರಿಷತ ಸಭಾಪತಿಗಳಾಗಿ ಜನಸೇವೆಗೈದ ಜಿಲ್ಲೆಯ‌ ಲಿಂಗಾಯತ ಸಮಾಜದ‌ ಹಿರಿಯ ಮುಖಂಡರಾದ ವೀರಣ್ಣ ಮತ್ತಿಕಟ್ಟಿ ಹಾಗೂ  ಅಲ್ಪಸಂಖ್ಯಾತ ಸಮಾಜದ ಹಿರಿಯ ಮುಖಂಡರಾದ ಮಾಜಿ ಸಂಸದರು ಹಿರಿಯರಾದ ಪ್ರೊ ಐ ಜಿ ಸನದಿ ಅವರನ್ನ ಕನಿಷ್ಠ ಸೌಜನ್ಯಕ್ಕಾದರು ವೇದಿಕೆ ಮೇಲೆ ಕುಳ್ಳರಿಸದೆ ತಮ್ಮ  ಹಿಂದೆ ಮುಂದೆ ಸುತ್ತಾಡುವ ಹಿಂಬಾಲಕರನ್ನ ವೇದಿಕೆ ಮೇಲೆ ಕೂಡಿಸಿ ಸುರ್ಜೆವಾಲಾ ಹಾಗು ಜಿಲ್ಲಾ ಉಸ್ತುವಾರಿ ಮಂತ್ರಿ ಸಂತೋಷ ಲಾಡ ಹಿರಿಯರ ಅಪಮಾನ ಮಾಡಿದ್ದಾರೆ.

ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅಪಮಾನವಲ್ಲ ಇದು ಸಮಸ್ತ ಲಿಂಗಾಯತ ಹಾಗು ಅಲ್ಪಸಂಖ್ಯಾತ ಸಮಾಜದ ಜನತೆಗೆ ಮಾಡಿದ ಅಪಮಾನವಾಗಿದೆ.
 ಇಂತಹ ಅಗೌರವ ಹಿರಿಯ ರಾಜಕಾರಣಿಗಳಿಗೆ ತೋರಿದ್ದನ್ನ ಮಾಜಿಮಹಾಪೌರರು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ಈರೇಶ ಅಂಚಟಗೇರಿ ನಾನು  ತೀವ್ರವಾಗಿ ಖಂಡಿಸುತ್ತೇನೆ.  ಸುರ್ಜೆವಾಲಾ ಹಾಗು ಸಂತೋಷ ಲಾಡ ಅವರು ಹಿರಿಯರ ಹಾಗೂ  ಸಮಾಜದ ಕ್ಷಮಾಪಣೆ ಕೋರಬೇಕೆಂದು ಆಗ್ರಹಿಸುತ್ತೇನೆ.
ಈರೇಶ ಅಂಚಟಗೇರಿ
ಮಾಜಿಮಹಾಪೌರರು
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು.
ನವೀನ ಹಳೆಯದು

نموذج الاتصال