ಅದರಗುಂಚಿಯಲ್ಲಿ ವಿನೋದ್‌ ಅಸೂಟಿ ಪ್ರಚಾರ*

*ಅದರಗುಂಚಿಯಲ್ಲಿ ವಿನೋದ್‌ ಅಸೂಟಿ ಪ್ರಚಾರ*
=====================
ಧಾರವಾಡ, ಏಪ್ರಿಲ್‌ 27: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು, ಕುಂದಗೋಳ ವಿಧಾನಸಭಾ ಕ್ಷೇತ್ರದ ಅದರಗುಂಚಿಯಲ್ಲಿ ನಡೆದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಚುನಾವಣಾ ಸಭೆಯಲ್ಲಿ ಮಾತನಾಡಿದರು. 

ಗ್ರಾಮದ ಪ್ರಸಿದ್ಧ ಶ್ರೀ ದೊಡ್ಡಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಅಸೂಟಿ ಅವರು, ಅದರಗುಂಚಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್ ಶೋ  ನಡೆಸಿ ಮತಯಾಚನೆ ಮಾಡಿದರು. 

ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿ, ಆರೋಗ್ಯ ವಿಮಾ, ಮಹಾಲಕ್ಷ್ಮಿ ಯೋಜನೆ ಮುಂತಾದ ಜನಪರ ಕಾರ್ಯಕ್ರಮಗಳನ್ನು ದೇಶದ ಜನತೆಗೆ ಕಾಂಗ್ರೆಸ್‌ ನೀಡಲಿದೆ. ತಮ್ಮೆಲ್ಲರ ಸೇವೆ ಮಾಡಲು ಇದೊಂದು ಬಾರಿ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಅನಿಲ ಕುಮಾರ ಪಾಟೀಲ, ಷಣ್ಮುಖ ಶಿವಳ್ಳಿ, ಬಾಬಾಜಾನ್ ನದಾಫ್, ಸುರೇಶಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ಪಕ್ಷದ ಮುಖಂಡರು, ಗ್ರಾಮದ ಹಿರಿಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال