ಕರ್ನಾಟಕ ಕಲಾ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ.
ಧಾರವಾಡ;
ಕಳೆದ ಮಾರ್ಚ್ ನಲ್ಲಿ ನಡೆದ ದ್ವೀತಿಯ ಪಿಯುಸಿ ಕಲಾ ವಿಭಾಗದಲ್ಲಿ ಕರ್ನಾಟಕ ಕಲಾ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ ಮಾಡಿದ್ದಾರೆ.
ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಪಿ.ಯು.ಸಿ ವಿಭಾಗದ ವಿದ್ಯಾರ್ಥಿ ಗಳು 600 ಅಂಕಗಳಿಗೆ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಅವರಲ್ಲಿ ರಾಜಶ್ರೀ ಹೊಳೆಯಣ್ಣವರ (588) ,ನಿಂಗಪ್ಪ ಕಾಟಿ ಮತ್ತು ರಾಹುಲ ಮಾದರ (586), ರಮೇಶ್ .ಎಸ್ ಮತ್ತು ನವೀನ ಕಲಕೇರಿ (583), ಪೂಜಾ, ಆರ್ ಲಮಾಣಿ (579) ಹೆಚ್ಚು ಅಂಕಗಳನ್ನು ಪಡೆದವರಾಗಿದ್ದಾರೆ.
ಕಾಲೇಜಿನ ಪಿಯುಸಿ ಕಲಾ ವಿಭಾಗದ ಭೂಗೋಳ ಶಾಸ್ತ್ರ ಮತ್ತು ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ.
ಭೂಗೋಳ ಶಾಸ್ತ್ರ ವಿಷಯದಲ್ಲಿ 100 ಅಂಕಗಳನ್ನು ಪಡೆದವರ ವಿವರ
ಅಶ್ವಿನಿ ಕಾಂಬಳೆ, ಆಯುಷ್ಯಾ ನಧಾಫ್, ಬಸವರಾಜ ಹೂಲಿಕಟ್ಟಿ, ಚನ್ನಗೌಡ, ಲಕ್ಷ್ಮಿ ಮಡಿವಾಳರ,ಲಕ್ಷ್ಮಿ ಕಮ್ಮಣ್ಣವರ,ಮಮತಾ ಲಕ್ಷ್ಮೇಶ್ವರ, ಮಮತಾ ಶರಣ್ಣಪ್ಪಾ, ನಂದಾ ಪೂಜಾರ,ಪೂಜಾ ಲಮಾಣಿ, ಪ್ರತಿಭಾ ಪೂಜಾರ, ರಾಹುಲ್ ಮಾದರ, ರಾಜಶ್ರೀ ಹೊಳೆಯಣ್ಣವರ, ರಮೇಶ್.ಎಸ್, ಶಿವರಾಜ್, ಶೌರ್ಯ ಮುತಕ್ಕಣ್ಣವರ, ಶ್ರದ್ಧಾ ಪರೀಟ್, ಸುದರ್ಶನ ಧಾಲಿ, ಸುಪ್ರೀತಾ ಮಟ್ಟಿ, ಸುರೇಖಾ ಜಾಡರ, ಸುರೇಶ್ ನಂದಿವಾಳಿ ಅವರು ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಿದ್ದಾರೆ.
ಇತಿಹಾಸ ವಿಷಯದಲ್ಲಿ 100 ಅಂಕಗಳನ್ನು ಗಳಿಸಿದವರ ವಿವರ:
ಆಕಾಶ, ದೇವರಾಜ, ಮಮತಾ, ನಿಂಗಪ್ಪ ಕಟ್ಟಿ, ಪೂಜಾ ಲಮಾಣಿ, ಪ್ರತಿಭಾ ಪೂಜಾರ, ಪುಷ್ಪಾ ಯರಮಾಸಳ, ರಾಹುಲ್ ಮಾದರ, ರಾಜಶ್ರೀ, ರಮೇಶ, ಸುಕನ್ಯಾ ಸುಣಗಾರ, ಸುವರ್ಣಾ.ಬಿ, ಮತ್ತು ಯಲ್ಲಪ್ಪ ಅವರು ಇತಿಹಾಸ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದಿದ್ದಾರೆ.
ರಾಜ್ಯ ಶಾಸ್ತ್ರ ವಿಷಯದಲ್ಲಿ ಕೀರ್ತಿ ಪೂಜಾರ 100 ಅಂಕಗಳನ್ನು ಪಡೆದು ಮೆಚ್ಚುಗೆ ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ, ಕುಲಸಚಿವರಾದ ಡಾ.ಎ ಚನ್ನಪ್ಪ, ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ, ಪಿಯುಸಿ ವಿಭಾಗದ ಸಂಯೋಜಕರಾದ ಡಾ.ಮುಕುಂದ ಲಮಾಣಿ, ಐಕ್ಯೂಎಸಿ ಸಂಯೋಜಕರಾದ ಡಾ.ಈರಣ್ಣ ಮುಳಗುಂದ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ವಿರೇಂದ್ರ ಯಾದವ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಜಗದೀಶ್. ಕೆ ಮತ್ತು ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಡಾ.ಜಿ.ಎನ್.ಕುಮ್ಮೂರ ಅವರು ಪಿಯುಸಿ ಕಲಾ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಮತ್ತು ಪಿಯುಸಿ ವಿಭಾಗದ ಮತ್ತು ಕಾಲೇಜಿನ ಇತರೆ ಶಿಕ್ಷಕರನ್ನು ಅಭಿನಂದಿಸಿದ್ದಾರೆ.