ಶ್ರೀ ರಂಭಾಪುರಿ ಜಗದ್ಗುರುಗಳ ಎಪ್ರೀಲ್ ತಿಂಗಳ ಧಾರ್ಮಿಕ ಪ್ರವಾಸ ಪ್ರವಾಸ ವಿವರ
ಹುಬ್ಬಳ್ಳಿ :
ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ 2024ನೇ ಎಪ್ರೀಲ್ ತಿಂಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಅನೇಕ ಸ್ಥಳಗಳಿಗೆ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ಅವರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಮೀಡಿರುವ ಅಚರು, ದಿನಾಂಕ 1ರಂದು ಬೈಲಹೊಂಗಲ ತಾಲೂಕ ವಣ್ಣೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಮಾರಂಭ, 2ರಂದು ತೀರ್ಥಹಳ್ಳಿ ತಾಲೂಕ ಕವಲೇದುರ್ಗ ಮಠದಲ್ಲಿ ಇಷ್ಟಲಿಂಗ ಮಹಾಪೂಜಾ, 3ರಂದು ರಾಣೆಬೆನ್ನೂರು ತಾಲೂಕ ಲಿಂಗದಹಳ್ಳಿಯಲ್ಲಿ ಇಷ್ಟಲಿಂಗ ಮಹಾಪೂಜಾ, 4ರಂದು ಅಜ್ಜಂಪುರ ತಾಲೂಕ ಗೌರಾಪುರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 5ರಂದು ಹೊನ್ನಾಳಿ ತಾಲೂಕ ಕುಳಗಟ್ಟಿಯಲ್ಲಿ ಇಷ್ಟಲಿಂಗ ಮಹಾಪೂಜಾ, 6ರಂದು ಕಡೂರು ತಾಲೂಕ ಹೊಗರೆಖಾನ್ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಕ್ಷೇತ್ರದಲ್ಲಿ ಮಂಡಲ ಪೂಜಾ ಸಮಾರಂಭ, 7ರಂದು ಚಿಕ್ಕಮಗಳೂರು ತಾಲೂಕ ಮುತ್ತಿನಪುರದ ಶ್ರೀ ವೀರಭದ್ರೇಶ್ವರ ಕ್ಷೇತ್ರದಲ್ಲಿ ಮಂಡಲ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸುವರು ಎಂದು ಅವರು ತೊಳಿಸಿದ್ದಾರೆ.
ಹುಬ್ಬಳ್ಳಿ ತಾಲೂಕ ತಿರುಮಲಕೊಪ್ಪದ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ 8ರಂದು ಧರ್ಮ ಜಾಗೃತಿ ಸಮಾರಂಭ 9ರಂದು ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ ಸಮಾರಂಭ, 10ರಂದು ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 11 ಹಾಗೂ 12ರಂದು ಧಾರವಾಡ ತಾಲೂಕ ಅಮ್ಮಿನಭಾವಿಯಲ್ಲಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು ಹಾಗೂ ನೂತನ ರಥೋತ್ಸವಕ್ಕೆ ಚಾಲನೆ ನೀಡುವರು. 13ರಂದು ಹುಬ್ಬಳ್ಳಿ ತಾಲೂಕ ಹಳ್ಳಿಯಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ ಹಾಗೂ ಧರ್ಮ ಸಮಾರಂಭ, 14ರಂದು ಹಾವೇರಿ ತಾಲೂಕ ನೆಗಳೂರಿನಲ್ಲಿ ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ ಸಮಾರಂಭ, 15ರಂದು ಕಲಘಟಗಿ ತಾಲೂಕ ಸಂಗೇದೇವರಕೊಪ್ಪದಲ್ಲಿ ನೂತನ ದೇವಾಲಯ ಉದ್ಘಾಟನಾ ಸಮಾರಂಭ, 16ರಂದು ಕಲಘಟಗಿ ತಾಲೂಕ ಬೇಗೂರು ಗ್ರಾಮದಲ್ಲಿ ಗ್ರಾಮದೇವಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವರು.
17ರಂದು ಚಡಚಣ ತಾಲೂಕ ಏಳಗಿ ಪಿ.ಎಸ್. ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿ ಮಹಾದ್ವಾರ ಉದ್ಘಾಟನಾ ಸಮಾರಂಭ, 18ರಂದು ಅಫಜಲಪುರ ತಾಲೂಕ ಕರಜಗಿಯಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಳಸಾರೋಹಣ, 19ರಂದು ಚಿತ್ತಾಪುರ ತಾಲೂಕ ಶ್ರೀ ಸಿದ್ಧೇಶ್ವರ ಜ್ಞಾನಧಾಮದಲ್ಲಿ ಧರ್ಮ ಸಮಾರಂಭ 23ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ಪೌರ್ಣಿಮೆಯ ನಿಮಿತ್ಯ ವಾಸ್ತವ್ಯ ಮಾಡಿ ಭಕ್ತಾದಿಗಳಿಗೆ ದರ್ಶನ ಆಶೀರ್ವಾದ ನೀಡುವರು.
29ರಂದು ಕುಂದಗೋಳ ತಾಲೂಕ ಪಶುಪತಿಹಾಳದಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ಆಸಕ್ತರು ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳುವಂತೆ ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.