ಧಾರವಾಡ: ಮಾನವ ಹಕ್ಕುಗಳ ರಕ್ಷಣೆಗೆ ಆಯೋಗ ಬದ್ಧ. ಉಲ್ಲಂಘನೆ ವಿರುದ್ಧ ಆಯೋಗಕ್ಕೆ ದೂರು ನೀಡಿದರೆ, ನ್ಯಾಯ ಒದಗಿಸುವ ಕೆಲಸ ಮಾಡಲಿದೆ
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುರೇಶ ಒಂಟಿಗೋಡಿ ಭರವಸೆ ನೀಡಿದರು.
ನಗರದ ಜನತಾ ಶಿಕ್ಷಣ ಸಮಿತಿ ಸನ್ನಿಧಿ ಕಲಾಕ್ಷೇತ್ರದ ಪ್ರೊ. ಹಸನಬಿ ಬೀಳಗಿ ವೇದಿಕೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ೧೬ನೇ ಸಮ್ಮೇಳನದಲ್ಲಿ ಗುರುವಾರ ಮಾನವ ಹಕ್ಕುಗಳು-ಸಂವಿಧಾನ ಗೋಷ್ಠಿಯಲ್ಲಿ ಮಾತನಾಡಿದರು.
ಸರ್ವರು ಮಾನವ ಹಕ್ಕುಗಳು ರಕ್ಷಣೆ ಜೊತೆ ಗೌರವಿಸಬೇಕು. ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಉಲ್ಲಂಘನೆ ಸಲ್ಲ. ಹಕ್ಕುಗಳ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಿದೆ. ಹೀಗಾಗಿ ನೊಂದವರ ಧೈರ್ಯವಾಗಿ ದೂರು ನೀಡುವಂತೆ ತಿಳಿಸಿದರು.
ಮಾನವ ಹಕ್ಕು ಸಂರಕ್ಷಣೆ, ಉಲ್ಲಂಘನೆ ತಡೆ, ಉಲ್ಲಂಘನೆಯಲ್ಲಿ ನೊಂದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ಆಯೋಗ ಕೆಲಸ ಮಾಡುತ್ತಿದೆ. ಪ್ರತಿ ನಾಗರಿಕರು ಮಾನವ ಹಕ್ಕುಗಳ ಬಗ್ಗೆ ಮಹತ್ವ ಅರಿತು ನಡೆಯುವಂತೆ ಸಲಹೆ ನೀಡಿದರು.
ದ್ವಿತೀಯ ಮಹಾಯುದ್ಧದಲ್ಲಿ ಸಂಭವಿಸಿದ ಅಪಾರ ಪ್ರಮಾಣದ ಸಾವು-ನೋವು ಪರಿಗಣಿಸಿದ ವಿಶ್ವದ ಸಮಾನ ಮನಸ್ಕ ರಾಷ್ಟçಗಳು ಒಗ್ಗೂಡಿ ೧೯೪೮ ಡಿಸೆಂಬರಲ್ಲಿ ಮಾನವ ಹಕ್ಕುಗಳ ಸಂರಕ್ಷಣಗೆ ಒಡಂಬಡಿಕೆ ಮಾಡಿಕೊಂಡವು ಎಂದು ಮಾಹಿತಿ ನೀಡಿದರು.
ಅಲ್ಲದೇ, ೧೯೯೩ರಲ್ಲಿ ರಾಷ್ಟಿçÃಯ ಮಾನವ ಹಕ್ಕುಗಳ ಕಾಯ್ದೆ ಜಾರಿಗೆ ಬಂತು. ರಾಜ್ಯದಲ್ಲಿ ೨೦೦೭ರಲ್ಲಿ ರಾಜ್ಯ ಮಾನವ ಹಕ್ಕು ಆಯೋಗ ಸ್ಥಾಪಿಸಿತು. ಇದು ನಿವೃತ್ತ ನ್ಯಾಯಾಧೀಶರು ಅಧ್ಯಕ್ಷ, ಇಬ್ಬರು ಸದಸ್ಯರನ್ನು ಒಳಗೊಂಡಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನವ ಹಕ್ಕುಗಳ ಆಯೀಗದ ಸದಸ್ಯ ಡಾ. ಟಿ.ಶ್ಯಾಮ ಭಟ್ಟ ಮಾತನಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆ.ಎ.ಎಸ್.ಶರ್ಮಾ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಪೊಲೀಸಪಾಟೀಲ, ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ, ಡಾ. ಡಿ.ಪಿ.ಚೌರಿ, ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಲಿಂಗಯ್ಯ ಹಿರಮೇಠ ಇದ್ದರು.
ಗುರುರಾಜ ಸಬನಿಸ್ ಸ್ವಾಗತಿಸಿದರು. ಪೂರ್ಣಿಮಾ ಮುತ್ನಾಳ ನಿರೂಪಿಸಿದರು. ಏಕನಾಥ ಸಿಂಪಿ ನಿರ್ವಹಿಸಿದರು. ಪ್ರವೀಣ ಪವಾರ ವಂದಿಸಿದರು.