ಬಸವೇಶ್ವರ ರೂರಲ್ ಎಜುಕೇಷನ್ ಆಂಡ್ ಡೆವಲಪ್ಮೆಂಟ್ ಟ್ರಸ್ಟ್ ಸೇವೆ ಶ್ಲಾಘನೀಯ --ಸಚಿವ ಗುಂಡೂರಾವ್.

ಬಸವೇಶ್ವರ ರೂರಲ್ ಎಜುಕೇಷನ್ ಆಂಡ್ ಡೆವಲಪ್ಮೆಂಟ್ ಟ್ರಸ್ಟ್  ಸೇವೆ ಶ್ಲಾಘನೀಯ --ಸಚಿವ ಗುಂಡೂರಾವ್. 
  ಧಾರವಾಡ : ಸತ್ತೂರಿನಲ್ಲಿರುವ  ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲೊಂದದ ಶ್ರೀ ಬಸವೇಶ್ವರ ರೂರಲ್ ಎಜುಕೇಷನ್ ಆಂಡ್ ಡೆವಲಪ್ಮೆಂಟ್ ಟ್ರಸ್ಟ್ ನ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸತ್ಯ ಸಾಯಿ ಕಾಲೇಜ್ ಆಫ್ ಹೊಮಿಯೋಪಾತಿಕ ಮೆಡಿಕಲ್ ಸಾಯನ್ಸ್ ಆಂಡ್ ಹಾಸ್ಪಿಟಲ್, ರೂರಲ್ ಬಿ. ಇಡಿ ಕಾಲೇಜು, ವಿ ಹೆಚ್ ಮರದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗ, ಶ್ರೀ ಬಸವೇಶ್ವರ ಪರ್ಮಸಿ ಕಾಲೇಜ್, ಶ್ರೀ ವಿ ಎ ಮತ್ತಿಕಟ್ಟಿ ಪದವಿ ಪೂರ್ವ ಕಾಲೇಜ್ ಮತ್ತು ಶ್ರೀ ಬಸವೇಶ್ವರ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜ ಗೆ ಭೇಟಿ ನೀಡಿ, 
ಅತ್ಯುತ್ತಮ ಶಿಕ್ಷಣ ನೀಡುತ್ತಾ ಬಂದಿರುವ ಸಂಸ್ಥೆಗೆ ಅರೋಗ್ಯ ಸಚಿವರಾದ ದಿನೇಶ ಗುಂಡೂರಾವ  ಭೇಟಿ ನೀಡಿದ್ದರು.
   ಸಚಿವರು  ಶಿಕ್ಷಣ ಸಂಸ್ಥೆಯ ಕಾರ್ಯಗಳನ್ನು ಶ್ಲಾಘೀಸುವದರೊಂದಿಗೆ ಇಂತಹ ಶಿಕ್ಷಣ ಸಂಸ್ಥೆಗೆ ಹೆಚ್ಚು ಹೆಚ್ಚು ಅವಕಾಶ ದೊರಕಲಿ ಕೋವಿಡ್ ಕರಾಳ ಛಾಯಾಲ್ಲಿಯೋ ಕೂಡ ಪೂರ್ತಿ ಸಂಸ್ಥೆಯನ್ನೇ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ರೋಗಿಗಳ ಅರೋಗ್ಯ ಕಡೆ ಹೆಚ್ಚು ಕಾಳಿಜಿ ವಹಿಸಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು.
   
ಸಂಸ್ಥೆಯ ಅಧ್ಯಕ್ಷರಾದ ಡಾ ಶರಣಪ್ಪ ಎಂ ಕೊಟಗಿ ಯವರು ಸಚಿವರನ್ನು ಸ್ವಾಗತಿಸಿ ಸನ್ಮಾನಿಸಿದರು.

     ಸಂಸ್ಥೆಯ ಟ್ರಸ್ಟಿಗಳಾದ ನಾಗರಾಜ್ ಕೊಟಗಿ,ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಹಿರಿಯ ಕಾಂಗ್ರೆಸ್ ನಾಯಕ ಪಾರಾಸ್ ಮಾಲ್ ಜೈನ, ಜಯಂತ ಸಾಗರ್, ಮಾಜಿ ಸೈನಿಕರದ ಎಫ್ ಹೆಚ್ ಚಲಾಮರದ, ರವಿ ಬದ್ನಿ,  ರೂರಲ್ ಬಿ. ಇಡಿ ಕಾಲೇಜ್ ಮತ್ತು ವಿ ಹೆಚ್ ಮರದ ಸ್ನಾತಕೋತ್ತರ ಶಿಕ್ಷಣ ವಿಭಾಗದ ಪ್ರಚಾರ್ಯರಾದ ಡಾ ಮಹಾಂತೇಶ ಹಿರೇಮಠ, ಫಾರ್ಮಸಿ ಕಾಲೇಜಿನ ಪ್ರಚಾರ್ಯರಾದ ನವೀನ್ ಕರೆರ್ ಹೊಮಿಯೋಪತಿ ಕಾಲೇಜಿನ ಪ್ರಧ್ಯಾಪಕರಾದ ಡಾ ಸಂಜನಾ ನಾಯಕ್, ಪಿ ಯು ಸಿ ಕಾಲೇಜಿನ ಉಪನ್ಯಾಸಕರಾದ ಉಮೇಶ ಜಾವುರ, ಡಿಗ್ರಿ ಕಾಲೇಜಿನ ಉಪನ್ಯಾಸಕರಾದ ಪ್ರವೀಣ್ ಪೂಜಾರ ಮತ್ತು ಎಲ್ಲ ಕಾಲೇಜಿನ ಬೋದಕ ಹಾಗೂ ಬೋದಕೇತರ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال