ಸಂಘಟನೆಗಳ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆ ಹಾಗೂ| ಸಾಧಕರಿಗೆ ಸನ್ಮಾನ ಸಮಾರಂಭ

 ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆ | ಸಾಧಕರಿಗೆ ಸನ್ಮಾನ ಸಮಾರಂಭ
*ಸಂಘಟನೆಗಳು ನೊಂದವರಿಗೆ ನ್ಯಾಯ ಒದಗಿಸಲಿ: ಡಾ.ಲತಾ ಎಸ್.ಮುಳ್ಳೂರ*

ಧಾರವಾಡ: ಸಾಮಾಜಿಕ ಕೆಲಸಗಳನ್ನು ಮಾಡುವದರ ಮೂಲಕ ನೊಂದವರಿಗೆ ನ್ಯಾಯ ಒದಗಿಸುವದಕ್ಕೆ ಇಂತಹ ಸಂಘಟನೆಗಳು ಅವಶ್ಯಕವಾಗಿದೆ ಎಂದು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್.ಮುಳ್ಳೂರ ಹೇಳಿದರು.

ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಹಾಗೂ ದಲಿತ ಸೇನಾ ಸಮಿತಿ ಸಂಘಟನೆಗಳ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಒಂದು ಸಂಘಟನೆ ಸ್ಥಾಪನೆ ಮಾಡಿದ ಮೇಲೆ ಬಹಳಷ್ಟು ಜವಾಬ್ದಾರಿ ಕೂಡಾ ಇರುತ್ತದೆ. ಸಂಘಟನೆ ಬೆಳೆಸಿ, ಅದರ ಪ್ರಕಾರ ಕೆಲಸಗಳನ್ನು ಮಾಡಿ ತಾಲೂಕಾ ಹಾಗೂ ರಾಜ್ಯಾದ್ಯಂತ ಘಟಕಗಳನ್ನು ರಚನೆ ಮಾಡಬೇಕು. ಸಮಾಜ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ ನಾವು ಸಮಾಜಕ್ಕೆ ಏನನ್ನು ಕೊಡುಗೆ ನೀಡಿದ್ದೇವೆ ಅನ್ನುವ ಮನೋಭಾವನೆ ಎಲ್ಲರಲ್ಲೂ ಬೆಳೆಯಬೇಕು ಅಂತಾ ಹೇಳಿದರು.      

ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲಿ ವೃತ್ತಿ, ಕುಟುಂಬ ಮತ್ತು ಸಂಘಟನೆ ಈ ಮೂರನ್ನು ನಿಭಾಯಿಸುವ ಶಕ್ತಿ ಮಹಿಳೆಯರಿಗೆ ಇದೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳ ಮುಖಾಂತರ ಮಹಿಳೆಯರು ದಾಪುಗಾಲನ್ನು ಇಟ್ಟಿದ್ದಾರೆ ಅಂತಾ ಹೇಳಿದರು.    

ಅದೇ ರೀತಿ ನಾವು ಕೂಡಾ ಮಾತೆ ಸಾವಿತ್ರಿಬಾಯಿ ಪುಲೆ ಅವರ ಹೆಸರಿನಲ್ಲಿ ಸಂಘಟನೆ ರಚನೆ ಮಾಡಿ, ದಲಿತರಿಗೆ, ಮಹಿಳೆಯರಿಗೆ ಹಾಗೂ ಬಡವರಿಗೆ ಶಿಕ್ಷಣವನ್ನು ಕೊಡಿಸುವ ಮುಖಾಂತರ ಮಹಿಳೆಯರನ್ನು ಮುನ್ನೆಲೆಗೆ ತಂದಿದ್ದೇವೆ ಅಂತಾ ಹೇಳಿದರು.  

ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಹಾಗೂ ದಲಿತ ಸೇನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ಬಸವರಾಜ ಆನೆಗುಂದಿ ಅವರು ಸಂಘಟನೆ ನಡೆದು ಬಂದ ದಾರಿ ಬಗ್ಗೆ ವಿವರಿಸಿ, ಡಾ.ಲತಾ ಎಸ್. ಮುಳ್ಳೂರ ಅವರ ಹೋರಾಟದ ಬದುಕಿನ ಬಗ್ಗೆ ವಿವರಿಸಿದರು.  

ದಲಿತ ಸೇನಾ ಸಮಿತಿಯ ಮಹಿಳಾ ರಾಜ್ಯಾಧ್ಯಕ್ಷರಾದ ರಾಜೇಶ್ವರಿ ಮತ್ತೂರ್ ಮಾತನಾಡಿ, ನಿರಂತರವಾಗಿ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದೆ. ಆದ್ದರಿಂದ ನಮ್ಮ ಸಂಘಟನೆ ಮುಖಾಂತರ ನಾವುಗಳು ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೀದ್ದೇವೆ ಅಂತಾ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಮಹಿಳಾ ಸಬಲೀಕರಣಕ್ಕೆ ನೀಡುತ್ತಿರುವ ಯೋಜನೆಗಳು ಅರ್ಹ ಮಹಿಳಾ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ಕೂಡಾ ಹೋರಾಟದ ಅವಶ್ಯಕತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್.ಮುಳ್ಳೂರ ಅವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ದಲಿತ ಸೇನಾ ಸಮಿತಿ ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀನಿವಾಸ ಅವರೊಳ್ಳಿ. ರಾಜ್ಯ ಸಮಿತಿಯ ಮುಖಂಡರಾದ ಪ್ರಭು ಪಾಟೀಲ, ನೀಲಕಂಠ ಪೂಜಾರ, ಸಿದ್ದು ಹಿರೇಮಠ, ಹನಮಂತ ಬಂಡಿವಡ್ಡರ, ಸತೀಶ ಸರ್ಜಾಪೂರ ಸೇರಿಂದಂತೆ ಇನ್ನಿತರರು ಹಾಜರಿದ್ದರು.

ನವೀನ ಹಳೆಯದು

نموذج الاتصال