ಶಿಕ್ಷಕರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ
ಡಿ ವಿ ಸಜ್ಜನ ಅವರಿಗೆ ಅಭಿನಂದನಿಸಿದ ಆಪ್ತ ಶಿಕ್ಷಕ ಬಳಗ,
ಧಾರವಾಡ ಮಹಾನಗರದ
ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 9 ಸರಸ್ವತಿಪುರ ಧಾರವಾಡ ಶಹರ
ವಿದ್ಯಾ ಅರ್ಹತೆ. M A ಕನ್ನಡ ಮತ್ತು ಇಂಗ್ಲಿಷ್ BEd , MEd
ಸೇವೆಗೆ ಸೇರಿದ್ದು . 2002
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ( BRP) ಯಾಗಿ ಧಾರವಾಡ ಶಹರ ದಲ್ಲಿ ಕಾರ್ಯನಿರ್ವಹಿಸಿದ್ದು - 2015- 2021 ರವರೆಗೆ
CRP, ECO ಆಗಿ ಕಾರ್ಯನಿರ್ವಹಿಸಿದ್ದು,
ನಲಿ ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿ ಹಮ್ಮಿಕೊಂಡ ಮಕ್ಕಳ ವಿಜ್ಞಾನ ಹಬ್ಬ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ,
ಗುರು ಚೇತನ ಕಾರ್ಯಕ್ರಮದ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ,
ರಾಜ್ಯ, ಜಿಲ್ಲಾ ಮತ್ತು ತಾಲೂಕು ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಶಿಕ್ಷಕರಿಗೆ ತರಬೇತಿಗಳನ್ನು ನೀಡಿದ ಅನುಭವವಿದೆ. ಇಲಾಖೆಯ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಯಶಸ್ಸನ್ನು ಕಂಡಿದ್ದಾರೆ. ತಾಲೂಕು ಮತ್ತು ಜಿಲ್ಲಾ ಹಂತದ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ,
ವಿದ್ಯಾರ್ಥಿಗಳಿಗೋಸ್ಕರ ಪಠ್ಯ ಹಾಗೂ ಸಹ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವಲ್ಲಿ ಮಾರ್ಗದರ್ಶನ ಮಾಡಿ ಯಶಸ್ಸು ಕೊಂಡುಕೊಂಡ ದಾಗಿದೆ . ಅಗಸ್ತ್ಯ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ವಿಜ್ಞಾನ ಮತ್ತು ತಂತ್ರಜ್ಞಾನ ಮಾದರಿಗಳ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಟ್ರೋಫಿ ಅನ್ನು ಪಡೆದಿರುವುದು ಸಂತೋಷದ ವಿಷಯವಾಗಿದೆ . ಅಲ್ಲದೆ ಯೂತ್ ಫಾರ್ ಸೇವಾ ಸಂಸ್ಥೆ ಹುಬ್ಬಳ್ಳಿ ಇವರು ಹಮ್ಮಿಕೊಂಡಿದ್ದ ಚಿಗುರು ಕಾರ್ಯಕ್ರಮದಲ್ಲಿ ನಮ್ಮ ಶಾಲೆ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾರ್ಗದರ್ಶನ ಮಾಡಿ ಜಾನಪದ ನೃತ್ಯ ವಿಜ್ಞಾನ ಮಾದರಿ ಪೇಪರ್ ಕಾಲೇಜ್ಹಲ ಇನ್ನು ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಹುಮಾನವನ್ನು ಪಡೆಯುವಂತೆ ಕಾಳಜಿ ವಹಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಇವರ ಈ ಸಾಧನೆಯನ್ನು ಮನಗಂಡ ಚೇತನ ಫೌಂಡೇಶನ್ ಕರ್ನಾಟಕ, ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ, ಆಯೋಜಿಸಿದ್ದ,ಅಖಿಲ ಕರ್ನಾಟಕ ಶಿಕ್ಷಕರ ಮಹಾ ಸಮ್ಮೇಳನದಲ್ಲಿ ಶಿಕ್ಷಕರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಇವರ ಈ ಸಾಧನೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯ ಕೇಂದ್ರ ಸಮಿತಿಯ ಸದಸ್ಯ ಎಲ್ ಐ ಲಕ್ಕಮ್ಮನವರ, ಅಶೋಕ ಸಜ್ಜನ, ಎಂ ಐ ಮುನವಳ್ಳಿ ಮಲ್ಲಿಕಾರ್ಜುನ ಉಪ್ಪಿನ, ಆರ್ ಎಂ ಕಮ್ಮಾರ ಶಾಂತಾ ಶೀಲವಂತ, ವೀಣಾ ಹೊಸಮನಿ, ರಮೇಶ ಲಿಂಗದಾಳ ಎಂ ಎಸ್ ಅಕ್ಕಿ ನಂದಕುಮಾರ ದ್ಯಾಪೂರ, ಬಿ ಆರ್ ಜಕಾತಿ ಬಾಬಾಜಾನ ಮುಲ್ಲಾ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿ,ಶುಭಹಾರೈಸಿದರು.