ನಗರದ ಆಲೂರ ವೆಂಕಟರಾವ್ ಭವನದಲ್ಲಿ ಮಂಗಳವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ೧೦ನೇ ಸಮ್ಮೇಳನದ ಸಾಂಸ್ಕೃತಿಕ

ಧಾರವಾಡ: ನಗರದ ಆಲೂರ ವೆಂಕಟರಾವ್ ಭವನದಲ್ಲಿ ಮಂಗಳವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ೧೦ನೇ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆದವು. 
ಶಾಂಭವಿ ದೇಗಾವಿಮಠ-ಪ್ರಣವ್ ದೇಗಾವಿಮಠ ವಚನ ಗಾಯನ, ಲಕಮಾಪೂರ ಶಾಲೆ ಮಕ್ಕಳಿಂದ ಸೀರೆ ನೃತ್ಯ, ಶ್ರೀನಿಧಿ ಚಿಕ್ಕಣವರ ಏಕಪಾತ್ರಾಭಿನಯ ಮನಸೂರೆಗೊಂಡಿತು.
ಮಹಾದೇವ ಸತ್ತಿಗೇರಿ ಹಾಸ್ಯ ಕಾರ್ಯಕ್ರಮ, ವಿವಿಧ ಸಂಸ್ಥೆಗಳ ಮಕ್ಕಳಿಂದ ನೃತ್ಯ, ಸಾಂಸ್ಕೃತಿಕ ಲೋಕ ಆರ್ಟ್ ಅಕ್ಯಾಡಮಿ ಮಕ್ಕಳ ಜನಪದ ನೃತ್ಯಗಳು ಸಮ್ಮೇಳನಕ್ಕೆ ಮೆರಗು ತುಂಬಿದವು.
ಚಾಲನೆ ನೀಡಿದ ಮಾಜಿ ಸಚಿವೆ ಡಾ.ಲೀಲಾದೇವಿ ಪ್ರಸಾದ, ಧಾರವಾಡ ನನ್ನ ತವರು ಮಾತ್ರವಲ್ಲ, ಸಾಂಸ್ಕೃತಿಯ ತವರೂರು. ಅನೇಕ ಕಲಾವಿದರಿಗೆ ಜನಿಸಿದ ಪುಣ್ಯ ಭೂಮಿ ಎಂದು ಹೇಳಿದರು. 
ಸವಾಯಿ ಗಂದರ್ವರು, ಪಂ. ಭೀಮಸೇನ ಜೋಶಿ ಡಾ.ಮಲ್ಲಿಕಾರ್ಜುನ ಮನಸೂರು, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು, ಜನಿಸಿದ ನಾಡಿದು ಎಂದು ತಿಳಿಸಿದರು. 
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಸಂತೋಷ ಹಾನಗಲ್ಲ, ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ತಾಲೂಕಾಧ್ಯಕ್ಷ ಮಹಾಂತೇಶ ನೆರೇಗಲ್ಲ, ಎಂ.ಎA.ಚಿಕ್ಕಮಠ, ನಿಂಗಣ್ಣ ಕುಂಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ನವೀನ ಹಳೆಯದು

نموذج الاتصال