ಇಂದು ಶ್ರೀ ಮುರುಘಾಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು,ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯರಿಗೆ ಸನ್ಮಾನಿಸಿದರು

ಶ್ರೀ ಮಧಥನಿ‌ ಮುರುಗೇಂದ್ರ ಮಹಾ ಶಿವಯೋಗಿಗಳ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿದ ಹಿನ್ನೆಲೆಯಲ್ಲಿ,ಇಂದು ಶ್ರೀ ಮುರುಘಾಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು,ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯರಿಗೆ ಸನ್ಮಾನಿಸಿದರು.
    ಸನ್ಮಾನಿಸಿ ಮಾತನಾಡಿದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು,ಶ್ರೀ‌ಮಠದ ಕಾರ್ಯಾಧ್ಯಕ್ಷರಾದ ಶ್ರೀ ವಿನಯ ಕುಲಕರ್ಣಿಯವರ ಅನುಪಸ್ಥಿತಿಯಲ್ಲಿ,ಶ್ರೀ‌ಮಠದ ಭಕ್ತರ ಆಶಯ ಹಾಗೂ ಆಡಳಿತ ಮಂಡಳಿಯ ಕೋರಿಕೆಯಂತೆ ಜಾತ್ರೆಯ ಜವಾಬ್ದಾರಿಯನ್ನು ತೆಗೆದುಕೊಂಡು,ನಿಷ್ಠಾವಂತ ಪಡೆ ಕಟ್ಟಿಕೊಂಡು ಹಗಲಿರುಳೆನ್ನದೆ ಶ್ರಮಿಸಿ,ನಿರಂತರ ಐದು ದಿವಸಗಳವರೆಗೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ,ಮಠದ ಗತವೈಭವ ಮರಕಳಿಸುವಂತೆ ಜಾತ್ರಾಮಹೋತ್ಸವಕ್ಕೆ ಮೆರಗು ನೀಡುವಲ್ಲಿ ಅವರ ಶ್ರಮ‌ ಶ್ಲಾಘನೀಯ.
     ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ,ರಾಜ್ಯಮಟ್ಟದ ಖಾಲಿ‌ ಗಾಢಾ ಓಡಿಸುವ ಸ್ಪರ್ಧೆ,ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಗಳನ್ನು ಸಂಘಟಿಸಿ ಶ್ರೀ ಮಠದ ಪರಂಪರೆಯನ್ನು ಎತ್ತಿ ಹಿಡಿದರು.
    ಮುರುಘೇಂದ್ರ ಮಹಾಶಿವಯೋಗಿಗಳ ಆಶಯದಂತೆ,ಕ್ರೀಡೆಗಳು,ನಾಟಕ ಕಲಾವಿದರು,ಭಜನಾ ಸ್ಪರ್ದೆಗಳು ಹಾಗೂ ಭರತನಾಟ್ಯದಂತಾ ಕಲೆಗಳಿಗೆ ಪ್ರೋತ್ಸಾಹ ನೀಡಿ ಅವರೆಲ್ಲರಿಗೂ ತಮ್ಮ‌ಕಲೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟು ಜಾತ್ರಾಮಹೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳು ಸಂತಸದ ಕಡಲಲ್ಲಿ ತೇಲುವಂತೆ ಮಾಡಿದರು.
     ಈ ವರ್ಷ ವಿಶೇಷವೆಂದರೆ ಐದು ದಿವಸಗಳ ಪ್ರಸಾದ ಸೇವೆಗೆ ಸ್ವಯಂ ಪ್ರೇರಿತರಾಗಿ ಧಾರವಾಡದ ಪ್ರಸಿದ್ದ ಅಡುಗೆ ಭಟ್ಟರು ಮೃಷ್ಟಾನ್ ಭೋಜನವನ್ನು ಭಕ್ತಾದಿಗಳು ಸವಿಯುವಂತೆ ಮಾಡುವಲ್ಲಿ ಶಿವಲೀಲಾ ಕುಲಕರ್ಣಿಯವರ ಪಾತ್ರ ದೊಡ್ಡದು ಎಂದರು.
ಆ ಕಾರಣಕ್ಕಾಗಿ ಅವರಿಗೆ ಶ್ರೀಮಠದ ಆಡಳಿತ ಮಂಡಳಿಯೊಂದಿಗೆ ಅವರಿಗೆ ಸನ್ಮಾನ ಗೌರವ ಸಲ್ಲಿಸಿ,ದೇವರು ಅವರಿಗೆ ಇನ್ನೂ ಹೆಚ್ಚಿನ  ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ ಎಂದು ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಈ ಸಂದರ್ಭದಲ್ಲಿ  ನಾಗರಾಜ ಪಟ್ಟಣಶೆಟ್ಟಿ,ಡಿ.ಬಿ ಲಕಮನಹಳ್ಳಿ,ವಿರೂಪಾಕ್ಷಪ್ಪ ಕಟಗಿ,ಅರವಿಂದ ಏಗನಗೌಡರ,ರಾಜಶೇಖರ ಕಮತಿ,ಸಂಜೀವ ಲಕಮನಹಳ್ಳಿ,,ಚನಬಸಪ್ಪ ಮಟ್ಟಿ,ಭೀಮು ಗಿರಿಯಪ್ಪನವರ,ರವಿ ಮುತ್ನಾಳ,ನವೀನ‌ ಕದಂ ಮುಂತಾದವರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال