ಧಾರವಾಡದ ಕೆಲಗೇರಿ ಕೆರೆ/44 ಪ್ರಜಾತಿಯ 250ಕ್ಕೂ ಹೆಚ್ಚು ಹಕ್ಕಿಗಳ ಗಣತಿ/ ಇ-ಬರ್ಡ್‌ಗೆ ದಾಖಲೆ
ಕೆರೆ ಅಂಗಳದ ಹಕ್ಕಿಗಳ ಗಣತಿ 2024
ಧಾರವಾಡ :
ನಗರದ ಐತಿಹಾಸಿಕ ಕೆಲಗೇರಿ ಕೆರೆ ಆವಾರದಲ್ಲಿ, ಶುಕ್ರವಾರ (ಫೆ.16, 2024) ಅಂಗಳದ ಹಕ್ಕಿಗಳ ಗಣತಿ ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್ ಕೌಂಟಿಂಗ್ -2024, #GBYBC -2024 ಕಾರ್ಯ ಜನವಿಜ್ಞಾನಿಗಳಿಂದ ನಡೆಯಿತು.
ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್, ಧಾರವಾಡದ ನೇಚರ್ ರಿಸರ್ಚ್ ಸೆಂಟರ್ ಜಂಟಿಯಾಗಿ, ಮುಂಬಯಿಯ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸಾಯಿಟಿ (ಬಿ.ಎನ್.ಎಚ್.ಎಸ್) ಸಹಯೋಗದಲ್ಲಿ, ನಾಲ್ಕು ದಿನಗಳ ಕೆರೆ ಅಂಗಳದ ಹಕ್ಕಿಗಳ ಗಣತಿ – 2024 ವಿಶ್ವ ಆಂದೋಲನದ ಹಿನ್ನೆಲೆ, ಮೊದಲ ದಿನ 32 ಜನ ಪಕ್ಷಿ ವೀಕ್ಷಕರು ಪಾಲ್ಗೊಂಡು, 44 ಪ್ರಜಾತಿಯ 250ಕ್ಕೂ ಹೆಚ್ಚು ಹಕ್ಕಿಗಳ ಗಣತಿ ಕೈಗೊಂಡು, ಜನವಿಜ್ಞಾನದ ಭಾಗವಾಗಿ ಇಬರ್ಡ್‌ಗೆ ದಾಖಲಿಸಿದರು.
ಬ್ರಾಂಜ್ ವಿಂಗ್ ಜಕಾನಾ, ಲಿಟಲ್ ರಿಂಗ್ ಗ್ಲೋವರ್, ಕಾಪರ್ ಸ್ಮಿಥ್ ಬಾರ್ಬೆಟ್, ಕ್ಲಾಮರಸ್ ರೀಡ್ ವಾರ್ಬಲರ್, ಬ್ಲ್ಯಾಕ್ ವಿಂಗ್ ಸ್ಪಿಲ್ಸ್, ಇಂಡಿಯನ್ ಸ್ಪಾಟ್ ಬಿಲ್ಡ್ ಡಕ್, ಬ್ರೌನ್ ಪ್ರೈಕ್, ಡಸ್ಕಿ ಕ್ರೇಗ್ ಮಾರ್ಟಿನ್, ವೆಸ್ಟರ್ನ್ ಮಾರ್ಷ ಹ್ಯಾರಿಯರ್ ವಿಶೇಷವಾಗಿ ದಾಖಲಾದ ಹಕ್ಕಿಗಳು,
ಕಳೆದ ಬಾರಿ ಜರುಗಿದ ಹಕ್ಕಿಗಳ ಗಣತಿ ವೇಳೆ ಕಂಡು ಬಂದಿದ್ದ ಬಹುತೇಕ ವಲಸೆ ಹಕ್ಕಿಗಳು ಈ ಬಾರಿ ಕಾಣಸಿಕ್ಕಿಲ್ಲ. ನಾರ್ದನ್್ರ ಪಿನ್ ಟೇಲ್ ಹಾಗೂ ನಾರ್ದನ್್ರ ಶಾವೆಲರ್ ಮತ್ತು ಐಬಿಸ್‌ಗಳು ಬೆಳಗ್ಗೆ 6 ರಿಂದ 9 ಗಂಟೆಯ ಮಧ್ಯದ ಅವಧಿಯ ಗಣತಿ ವೇಳೆ ಕಂಡುಬರಲಿಲ್ಲ. ಓಪನ್ ಬಿಲ್ಡ್ ಸ್ಟಾರ್ಕ್ ಕಂಡಿದ್ದು ವಿಶೇಷ.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ, ಪಂಡಿತ ಮುಂಜಿ, ಹೇಮನ್ ಜೈನ್, ಎಸ್.ಎಂ. ಪಾಟೀಲ, ಆರ್.ಜಿ. ತಿಮ್ಮಾಪುರ, ಡಾ. ಧೀರಜ್ ವೀರನಗೌಡರ,
ಪಿ.ವಿ. ಹಿರೇಮಠ, ಕೃಷ್ಣಕುಮಾರ ಭಾಗವತ್, ಅನಿಲ ಅಳ್ಳಿ ಹಾಗೂ ಹರ್ಷವರ್ಧನ ಶೀಲವಂತ ಎರಡು ತಂಡಗಳನ್ನು ಮುನ್ನಡೆಸಿದರು.
ಅನಿಸಿಕೆ
ಶುಕ್ರವಾರ ನಡೆದ ಪಕ್ಷಿ ವೀಕ್ಷಣೆ ವೇಳೆ ಅಸಹನೀಯ ಗಬ್ಬು ನಾತ ತ್ತು ಸೊಳ್ಳೆಗಳ ಹಾವಳಿ, ಕೆರೆ ಆವಾರದ ತರೀಭೂಮಿ ಸುತ್ತ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು, ಒಡೆದ ಗಾಜಿನ ಚೂರು, ಅಂತರ ಗಂಗೆ ಹಬ್ಬಿ ಹರಡಿದ ಪರಿ, ಒಂದೂ ದೀಪ ಹತ್ತದ ಜಾಗರ್ಸ್ ಪಾಥ್ ಮೇಲೆ ಪಕ್ಷಿ ವೀಕ್ಷಕರು ಬಹು ಪ್ರಯಾಸದಿಂದ ಗಣತಿ ಕಾರ್ಯ ನಡೆಸಿದರು. ಧಾರವಾಡದ ಪಾಲಿಗೆ ಅಳಿದು ಉಳಿದಿರುವ ಏಕೈಕ ಕೆರೆ ಉಳಿಸಿಕೊಳ್ಳಲು ಸಮುದಾಯದ ಸಹಭಾಗಿತ್ವದಲ್ಲಿ ಜನಾಂದೋಲನ ನಡೆಸಲು ಇದು ಸಕಾಲ. ವಲಸೆ ಹಕ್ಕಿಗಳು ಹೇಗೆ ತಾನೇ ಇಲ್ಲಿ ಬದುಕುಳಿಯಲು ಸಾಧ್ಯ?!
ಪಿ.ವಿ. ಹಿರೇಮಠ, ಕಾರ್ಯಾಧ್ಯಕ್ಷರು, ನೇಚರ್ ರಿಸರ್ಚ್ ಸೆಂಟರ್ (ನೊಂ.), ಧಾರವಾಡ.
ಚಿತ್ರ ಶೀರ್ಷಿಕೆ:
ಶುಕ್ರವಾರ (ಫೆ.16, 2024) ಕೆಲಗೇರಿ ಕೆರೆ ಅಂಗಳದ ಹಕ್ಕಿಗಳ ಗಣತಿ, #GBYBC -2024 ಕಾರ್ಯ ಜನವಿಜ್ಞಾನಿಗಳಿಂದ ನಡೆಯಿತು. ಪಕ್ಷಿ ತಜ್ಞರು ಪಾಲ್ಗೊಂಡು ಮಾರ್ಗದರ್ಶನ ಮಾಡಿದರು.