27 ರಂದು ಉಚಿತ ಕಣ್ಣಿನ ತಪಾಸಣೆ, ಶಿಬಿರ .

27 ರಂದು ಉಚಿತ ಕಣ್ಣಿನ ತಪಾಸಣೆ, ಶಿಬಿರ .
ಧಾರವಾಡ 22 :
ಪ್ರತಿವರ್ಷದಂತೆ ಸನ್ನಿದಿ ಮಹಿಳಾ ಮಂಡಳ. ಅಂಜುಮನ್ ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕ, ಲಾಯನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ ಮತ್ತು ಶ್ರೀ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಧಾರವಾಡ ಮತ್ತು ಹರೀಶ ಮೆಡಿ ಲ್ಯಾಬ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ,
 ಕಣ್ಣಿನ ಪೊರೆ ಚಿಕಿತ್ಸೆ ಮತ್ತು ರಕ್ತ ತಪಾಸಣೆಯನ್ನು ದಿ 27 ಮಂಗಳವಾರದಂದು ಮುಂಜಾನೆ 10.00 ಘಂಟೆಗೆ ಕುಮಾರೇಶ್ವರನಗರ, ಧಾರವಾಡದ ಈಶ್ವರ ದೇವಾಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು 
ಸನ್ನಿದಿ ಮಹಿಳಾ ಮಂಡಳದಿಂದ ನಂದಾ ಗುಳೇದಗುಡ್ಡ,  ರಾಜೇಶ್ವರಿ ಕಲ್ಲೂರ, ಜಂಟಿಯಾಗಿ ತಿಳಸಿದರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಕಣ್ಣು ದೇಹದ ಅವಿಭಾಜ್ಯ ಅಂಗವಾಗಿದೆ. ಜೀವನ ನಿರ್ವಹಿಸಲು ಕಣ್ಣುಗಳು ಅತ್ಯಗತ್ಯ. ನಮ್ಮ ದೈನಂದಿನ ಕಾರ್ಯಗಳನ್ನು ಯಾವುದೇ ದುರ್ಬಲತೆಯು   ಕುಟುಂಬದ ಮೇಲೆ  ದುಷ್ಪಪರಿಣಾಮ ಬೀಳುತ್ತದೆ. ಕಣ್ಣಿನ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಆಗಿದೆ ಎಂದರು.
ಈಗಾಗಲೇ ಸುತ್ತಮುತ್ತಲಿನ ಗ್ರಾಮಗಳಾದ ಚಿಕ್ಕಮಲ್ಲಿಗವಾಡ, ನರೇಂದ್ರ, ಯಾದವಾಡ ಮತ್ತು ಮರೇವಾಡ ಗ್ರಾಮಗಳಲ್ಲಿ ಈ ಶಿಬಿರದ ಪ್ರಚಾರ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಣ್ಣಿನ ತಪಾಸಣಾ ಶಿಬಿರದ ಲಾಭ ಪಡೆದುಕೊಳ್ಳಲು ಕೋರಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ  ಅಂಜುಮನ್ ಪದವಿ ಮಹಾವಿದ್ಯಾಲಯದಿಂದ ಡಾ: ಎನ್. ಎಂ. ಮಕಾಂದಾರ, ಡಾ: ನಾಗರಾಜ ಗುದಗನವರ, ಲಾಯನ್ಸ್ ಕ್ಲಬ್ ಗ್ಯಾಲಕ್ಸಿ ವತಿಯಿಂದ ಡಾ: ಎಸ್. ಎಂ. ಶೇಖ್, . ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿಂದ  ಹರೀಶ ಮುಂಜಿ ಇದ್ದರು.

ನವೀನ ಹಳೆಯದು

نموذج الاتصال