23 ರಂದು ಧಾರವಾಡಕ್ಕೆ "ಕರ್ನಾಟಕಕ್ಕಾಗಿ ನಾವು" ರಾಜ್ಯದ 31 ಜಿಲ್ಲೆಗಳಲ್ಲಿ ಕೆ.ಆರ್.ಎಸ್. ಪಕ್ಷದ ರಾಜ್ಯ ವ್ಯಾಪ್ತಿ ಜನ ಜಾಗೃತಿ ಬೈಕ್ ಜಾಥಾ ಆಗಮನ

23 ರಂದು ಧಾರವಾಡಕ್ಕೆ "ಕರ್ನಾಟಕಕ್ಕಾಗಿ ನಾವು" ರಾಜ್ಯದ 31 ಜಿಲ್ಲೆಗಳಲ್ಲಿ ಕೆ.ಆರ್.ಎಸ್. ಪಕ್ಷದ ರಾಜ್ಯ ವ್ಯಾಪ್ತಿ ಜನ ಜಾಗೃತಿ ಬೈಕ್ ಜಾಥಾ ಆಗಮನ 
ಧಾರವಾಡ  21 : 
ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ
ತಮ್ಮ ಭ್ರಷ್ಟಾಚಾರ ಸ್ವಜನ ಪಕ್ಷಪಾತ ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತೀರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್,ಬಿಜೆಪಿ ಮತ್ತು ಜೆ.ಡಿ.ಎಸ್ ಪಕ್ಷಗಳನ್ನು ಚುನಾವಣೆಯಲ್ಲಿ ತಿರಸ್ಕರಿಸಿ ಮತ್ತು
ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ರಾಜ್ಯದ ಜನರನ್ನು ಕೋರಲು ಹಾಗೂ ಸ್ವಚ್ಛ ಪ್ರಾಮಾಣಿಕ ಜನಪರ ಪ್ರಾದೇಶಿಕ ರಾಜಕಾರಣದ ಕುರಿತು ಜನ ಜಾಗೃತಿ ಮೂಡಿಸಲು ಇದೇ 19 ರಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು "ಕರ್ನಾಟಕ್ಕಾಗಿ ನಾವು" ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದೆ.ಎಂದು ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ 
ನಾಗರಾಜ ಕರೆಣ್ಣವರ ತಿಳಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಪ್ರಾರಂಭವಾದಂತಹ ಈ ಜಾಥಾದ ನೇತೃತ್ವವನ್ನು ಕೆ.ಆ‌ರ್.ಎಸ್. ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣ ರೆಡ್ಡಿಯವರು ವಹಿಸಿರುತ್ತಾರೆ. ಬೈಕ್ ಜಾಥಾದ ತಂಡವನ್ನು ಧಾರವಾಡ ತಾಲೂಕ ಹಳ್ಳಿಗೇರಿಯಿಂದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಸ್ವಾಗತ ಮಾಡಿಕೊಂಡು ಜುಬ್ಲಿ ಸರ್ಕಲ್ ಮಾರ್ಗವಾಗಿ ವಿವೇಕಾನಂದ ವೃತ್ತ ಧಾರವಾಡದಲ್ಲಿ ದಿ 23 ರಂದು ಸಾಯಂಕಾಲ 4.00 ಗಂಟೆಗೆ "ಕರ್ನಾಟಕ್ಕಾಗಿ ನಾವು" ಬೈಕ್ ಜಾಥಾ ವಿಷಯವಾಗಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ
ಅಬ್ದುಲ್ ರೆಹಮಾನ ಮುನತಿ ಜಿಲ್ಲಾ ಕಾರ್ಯದರ್ಶಿ ಧಾರವಾಡ
 ಸಿದ್ಧಲಿಂಗೇಶ್ವರ ಬಾಗೂರ ಜಿಲ್ಲಾ ಕಾರ್ಯದರ್ಶಿ, ಧಾರವಾಡ ಹಾಗೂ ಶಂಕರ ಹುಲಮನಿ. ತಾಲ್ಲೂಕ ಅಧ್ಯಕ್ಷರು ಕಲಘಟಗಿ, ಶಿವಪ್ಪ ಮಾನಿಂಗಪ್ಪನವರ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಧಾರವಾಡ ಆನಂದ ಬಾಗಲೇ, ರಾಜೇಂದ್ರ ದೊಡ್ಡವಾಡ, ಮಡಿವಾಳಪ್ಪ ಕರೆಣ್ಣವರ, ಅಜ್ಜಪ್ಪ ತಳವಾರ ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال