20 ಮತ್ತು 21 ರಂದು ಕಬಡ್ಡಿ ಪಂದ್ಯಾವಳಿ ಆಯೂಜನೆ,ಕ್ರೀಡಾ ಮಹೋತ್ಸವದ ಅಂಗವಾಗಿ.

20 ಮತ್ತು 21 ರಂದು  ಕಬಡ್ಡಿ ಪಂದ್ಯಾವಳಿ ಆಯೂಜನೆ,
ಕ್ರೀಡಾ ಮಹೋತ್ಸವದ ಅಂಗವಾಗಿ.
ಧಾರವಾಡ : 
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಪ್ರಸ್ತುತ ಪಡಿಸುವ ಸಂಸದ ಕ್ರೀಡಾ ಮಹೋತ್ಸವದ ಅಂಗವಾಗಿ ಧಾರವಾಡ- 71 ಕ್ಷೇತ್ರದ ನರೇಂದ್ರ ಗ್ರಾಮದಲ್ಲಿ ಫೆ.20 ಮತ್ತು 21 ರಂದು  ಕಬಡ್ಡಿ ಪಂದ್ಯಾವಳಿ
ಆಯೋಜಿಸಲಾಗಿದೆ.

ನಗರದಲ್ಲಿ ಗ್ರಾಮಾಂತರ  ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಂಕರ ಕೊಮಾರದೇಸಾಯಿ 
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಂದ್ಯಾವಳಿಯ ಮಾಹಿತಿ ನೀಡಿದರು‌.

ಧಾರವಾಡ ಜಿಲ್ಲಾ ಅಮೇಚೂರ್ ಕಬಡ್ಡಿಅಸೋಸಿಯೇಷನ್ ಸಹಯೋಗದಲ್ಲಿ
ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ.

ಪಂದ್ಯಾವಳಿಯಲ್ಲಿ ಟ್ರೋಫಿ ಸಹಿತ 
ಪ್ರಥಮ ಬಹುಮಾನ 40 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 20 ಸಾವಿರ ರೂಪಾಯಿ, ತೃತೀಯ ಮತ್ತು ಚತುರ್ಥ
10 ಸಾವಿರ ರೂಪಾಯಿ‌  
ಬಹುಮಾನ ನೀಡಲಾಗುತ್ತದೆ.
ಅಲ್ಲದೇ ವೈಯಕ್ತಿಕ ಬೆಸ್ಟ್ ರೈಡರ್, ಕ್ಯಾಚರ್ ಮತ್ತು ಆಲರೌಂಡರ್ ಗಳಿಗೆ ಐದು ಸಾವಿರ ರೂಪಾಯಿ ಬಹುಮಾನ  ನೀಡಲಾಗುತ್ತದೆ.
ಭಾಗವಹಿಸುವ ಎಲ್ಲ ಆಟಗಾರರಿಗೂ ಪ್ರಶಸ್ತಿ ಪತ್ರ ಮತ್ತು ಟಿ 
ಶಟ್೯ಗಳನ್ನು ವಿತರಿಸಲಾಗುವುದು.
ಮುಂದೆ ಮಹಿಳಾ ಪಂದ್ಯಾವಳಿಗಳನ್ನು ನೇರವಾಗಿ ಧಾರವಾಡ ಲೋಕಸಭಾ ಮಟ್ಟದಲ್ಲಿ ನಡೆಸಲಾಗುವುದು.
ಪಂದ್ಯಾವಳಿಯಲ್ಲಿ 18 ವರ್ಷ ವಯಸ್ಸಿನ ಮೇಲ್ಪಟ್ಟವರು ಭಾಗವಹಿಸಬಹುದು ಎಂದರು.

ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಯುವಕರನ್ನು ಪ್ರೋತ್ಸಾಹಿಸುವ ಸಲುವಾಗಿ ಪಂದ್ಯಾವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

ದಿ.20 ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಸಂಜೆ 7 ಗಂಟೆಗೆ ಚಲನಚಿತ್ರ‌ ಸಂಗೀತ ನಿರ್ದೇಶಕ ಗುರುಕಿರಣ ನೇತೃತ್ವದ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.ಜಾನಪದ ಗಾಯಕ ಮಾಳು ನಿಪ್ನಾಳ ಅವರು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸುವರು ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮೇಯರ ಈರೇಶ ಅಂಚಟಗೇರಿ, ಶಂಕರ ಮುಗದ ಇತರರು ಪಂದ್ಯಾವಳಿಯ ಲಾಂಛನ ಅನಾವರಣ ಮಾಡಿದರು.


ಪಕ್ಷದ ಮುಖಂಡರಾದ  ರುದ್ರಪ್ಪ ಅರಿವಾಳ, ಸಂಗನಗೌಡ ರಾಮನಗೌಡ್ರ,
ನಿಜನಗೌಡ ಪಾಟೀಲ, ಗುರುನಾಥಗೌಡ ಗೌಡರ, ಶಂಕರ ಶೇಳಕೆ, ಸುನೀಲ‌ ಮೋರೆ, ಶಿವು ಬೆಳಾರದ, ಯಲ್ಲಪ್ಪ ಜಾನಕೂನವರ, ಮಡಿವಾಳಪ್ಪ ಸಿಂದೋಗಿ,
ರಾಕೇಶ ನಾಝರೆ, ಶ್ರೀನಿವಾಸ ಕೋಟ್ಯಾನ್, ಸಂಭಾಜಿ ಜಾಧವ
ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ನವೀನ ಹಳೆಯದು

نموذج الاتصال