ವನಿತಾ ಸೇವಾ ಸಮಾಜ 1928 ರಲ್ಲಿ ಮಾತೋಶ್ರೀ ಭಾಗೀರಥಿಬಾಯಿ ಸ್ಥಾಪಿಸಲ್ಪಟ್ಟಿತು ನಿರ್ಗತಿಕ ಹೆಣ್ಣುಮಕ್ಕಳ ಪಾಲಿನ ಮಾಯಿಯಾಗಿ ಹೆಣ್ಣುಮಕ್ಕಳ ಶಿಕ್ಷಣ,

ಮಾತೋಶ್ರೀ ಭಾಗೀರಥಿಬಾಯಿ ಅವರ ಮಾಹಿತಿ
ವನಿತಾ ಸೇವಾ ಸಮಾಜ 1928 ರಲ್ಲಿ ಮಾತೋಶ್ರೀ ಭಾಗೀರಥಿಬಾಯಿ ಸ್ಥಾಪಿಸಲ್ಪಟ್ಟಿತು ನಿರ್ಗತಿಕ ಹೆಣ್ಣುಮಕ್ಕಳ ಪಾಲಿನ
ಮಾಯಿಯಾಗಿ ಹೆಣ್ಣುಮಕ್ಕಳ ಶಿಕ್ಷಣ,
ಸಬಲೀಕರಣಕ್ಕಾಗಿ ತಮ್ಮ ಆಸ್ತಿಯನ್ನೇ ಮಾರಿ ಸಂಸ್ಥೆ ಕಟ್ಟಿ ಬೆಳೆಸಿದವರು ಮಾಯಿ.ಕೇವಲ ವರ್ಷಕ್ಕೆ ವಿಧವೆಯಾಗಿ ತನ್ನಂತೆ 13  ಯಾವ ಹೆಣ್ಣುಮಕ್ಕಳಿಗೂ ತೊಂದರೆ ಬರಬಾರದೆಂಬ ಸದಿಚ್ಛೆಯಿಂದ ನಿರ್ಗತಿಕ ಹೆಣ್ಣುಮಕ್ಕಳಿಗಾಗಿ ಅನಾಥಾಶ್ರಮ, ಶಿಕ್ಷಣಕ್ಕಾಗಿ ಶಾಲೆ ನಿರ್ಮಿಸಿ ಹೆಣ್ಣುಮಕ್ಕಳು ಸಬಲೆಯರಾಗಬೇಕೆಂದು ಅವರಿಗಾಗಿ ಕಸೂತಿ, ನೂಲುವುದು, ಟೇಲರಿಂಗ,ಬೊಂಬೆ ತಯಾರಿ ಮಾಡುವುದು, ಪುಸೂತಿ ಗೃಹ, ಪ್ರಿಂಟಿಂಗ್ ಮುಂತಾದ 25 ವೃತ್ತಿ ತರಬೇತಿ ಕೇಂದ್ರಗಳನ್ನು ನಿರ್ಮಿಸಿ ಸಾವಿರಾರು ಮಹಿಳೆಯರ ಪಾಲಿನ ಮಾಯಿಯಾದರು.ಇಲ್ಲಿ ಆಶ್ರಯ ಕೋರಿ ಬರುವ ಹೆಣ್ಣುಮಕ್ಕಳಿಗೆ ಶಿಕ್ಷಣ, ಉದ್ಯೋಗ ಮಾತ್ರವಲ್ಲದೇ ಸಂಸ್ಕಾರದ ಪಾಠವನ್ನು ಜೀವನದ ಮೌಲ್ಯವನ್ನು ತಿಳಿಸಿಕೊಡಲಾಗುತ್ತಿತ್ತು.ವರಕವಿ ಬೇಂದ್ರೆಯವರ ಪೌರೋಹಿತ್ಯದಲ್ಲಿ ವಿಧವಾ ವಿವಾಹ ನಡೆಸಲಾಗುತ್ತಿತ್ತು.ಸರೋಜಿನಿ
 ಮಹಿಷಿಯವರ ಸಂಪಾದಕತ್ವದಲ್ಲಿ
ವೀರಮಾತಾ ಪತ್ರಿಕೆ ಪ್ರಕಟವಾಗುತ್ತಿತ್ತು. ಆಗಿನ ಪಧಾನ ಮಂತ್ರಿಗಳಾದ ಇಂದಿರಾಗಾಂಧಿ, ಅಂದಿನ ಮುಖ್ಯ ಮಂತ್ರಿ ನಿಜಲಿಂಗಪ್ಪ, ಗಾಂಧಿವಾದಿ ಗುದ್ದೇಪ್ಪ ಹಳ್ಳಿಕೇರಿ, ಆಗಿನ ಮುಂಬೈ ಪ್ರಾಂತದ ಗವರ್ನರಗಳು, ನ್ಯಾಯಾಧೀಶರು ಸಂಸ್ಥೆಗೆ ಭೇಟಿ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದ್ದಾರೆ. ಮಾಯಿಯವರ ಘನ ಕಾರ್ಯಕ್ಕೆ ಅಂದಿನ ಬ್ರಿಟಿಷ್ ಸರಕಾರದ ಕೈಸ್ತರ ಇ ಹಿಂದ್ ಪ್ರಶಸ್ತಿ ಅಲ್ಲದೆ ಸ್ವದೇಶಿ ಚಟುವಟಿಕೆಗಳಿಗಾಗಿ ಪ್ರಥಮ ರಾಜ್ಯೋತ್ಸವ ಪ್ರಶಸ್ತಿಯೂ ನೀಡಲಾಗಿದೆ. ನೀಡಿ ಮಹರ್ಷಿ ಕರ್ವೇಯವರು ಧಾರವಾಡ ಭೇಟಿ ನೀಡಿದಾಗ ಅವರ ಭಾಷಣ 
ತುರ್ಜುಮೆಯನ್ನು ಮಾಯಿ ಭಾಗೀರಥಿಬಾಯಿಯವರೇ
ಮಾಡುತ್ತಿದ್ದರು
 ಅಲ್ಲಿಯವರೆಗೆ .1971 ರಲ್ಲಿ ನಿಧನರಾದರು. ಉಚ್ಛಾಯ ಸ್ಥಿತಿಯಲ್ಲಿದ್ದ ಸಂಸ್ಥೆ ನಂತರ ಸರಕಾರಿ ವ್ಯವಸ್ಥೆಯಲ್ಲಿ ನಲುಗಿ ಮಾಯಿ ಪ್ರಾರಂಭಿಸಿದ ಪುಕಲ್ಪಗಳು ಬಾಗಿಲು ಮುಚ್ಚಿದವು. 2011 ರಲ್ಲಿ ಮಾತೋಶ್ರೀ ನಿರ್ಮಲಾತಾಯಿ ಗೋಖಲೆಯವರ ಅಧ್ಯಕ್ಷತೆಯ ಆಡಳಿತ ಮಂಡಳಿಗೆ ಸರಕಾರ ಸಂಸ್ಥೆಯನ್ನು ಹಸ್ತಾಂತರಿಸಿತು.ದುರಾದೃಷ್ಟ ಸಂಸ್ಥೆ ಮುಚ್ಚುವ ಸ್ಥಿತಿಯಲ್ಲಿತ್ತು. ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿದ್ದ ಪ್ರಾಥಮಿಕ ಕನ್ನಡಕ್ಕೆ
ಪ್ರೌಢಶಾಲೆ ಹಾಗೂ ಶಿಕ್ಷಕಿಯರ ತರಬೇತಿ ಕೇಂದ್ರ ಸೇರಿದಂತೆ ಒಟ್ಟು ಕೇವಲ 250 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು. ಆಡಳಿತ ಮಂಡಳಿ ಹೊಸದಾಗಿ ಪೂರ್ವ ಪ್ರಾಥಮಿಕ ಶಾಲೆ ಪದವಿಪೂರ್ವ ಮಹಾವಿದ್ಯಾಲಯ ಪ್ರಾರಂಭಿಸಿ ಕಡಿಮೆ
ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಸಂಸ್ಥೆಯ ಆವರಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯಸಿಸುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಸತಿ ಒದಗಿಸಿ ಮೂಲಸೌಕರ್ಯ ನೀಡಲಾಗಿದೆ.ಪುಸ್ತುತ ಮಾಯಿಯ ಆಶಯದಂತೆ 800 ಮಕ್ಕಳು ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಜನ ಮಾಡುತ್ತಿದ್ದಾರೆ.ಇತ್ತೀಚೆಗೆ ಮಂಗಳೂರು ಲಿಟರೇಚರ್ ಫೆಸ್ಟ್ ನಲ್ಲಿ ಗುರುತಿಸಿ ಭಾಗೀರಥಿಬಾಯಿ ಪುರಾಣಿಕರವರ ಜೀವಮಾನ ಸಾಧನೆಗಾಗಿ ಭಾರತ ಫೌಂಡೇಶನ್ ವನಿತಾ ಸೇವಾ ಸಮಾಜಕ್ಕೆ ಪ್ರಶಸ್ತಿ ನೀಡಿ ಗೌರವಿಸಿರುವುದು ನಮಗೆ ಅತೀವ ಸಂತೋಷ ತಂದಿದೆ ಅಲ್ಲದೇ ಸಂಸ್ಥೆಯ ಕಾರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರತಿದೆ.

2022 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ನೆನೆ ನೆನೆ ಆದಿನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗೀರಥಿಬಾಯಿ ಅವರ ಕುರಿತು ಉಪನ್ಯಾಸ ಕಾರ್ಯಕ್ರಮದ ನಂತರ ವನಿತಾ ಸೇವಾ ಸಮಾಜದ ಮತ್ತು ಸಂಸ್ಥಾಪಕರ ಬಗ್ಗೆ ವಿಚಾರಗಳನ್ನು ತಿಳಿದ ಮಕ್ಕಳ ಸಾಹಿತಿ ಶಆನಂದ ಪಾಟೀಲ ಮತ್ತು ಸಿ ಯು ಬೆಳ್ಳಕ್ಕಿ ಅವರು ಸಂಸ್ಥೆಯನ್ನು ಸಂಪರ್ಕಿಸಿ ಸ್ವಯಂ ಪ್ರೇರಿತರಾಗಿ ಭಾಗೀರಥಿಬಾಯಿ ಅವರ ಕುರಿತು ಪುಸ್ತಕ ರಚಿಸುವುದಾಗಿ ಸಂಸ್ಥೆ ಹಾಗೂ ಭಾಗೀರಥಿಬಾಯಿಯವರ ದಾಖಲೆಗಳನ್ನು ಸಂಗ್ರಹಿಸಿ ಭಾಗೀರಥಿಬಾಯಿಯವರಿಂದ ಆಶ್ರಯ ಪಡೆದ 25 ಕ್ಕೂ ಹೆಚ್ಚು ಆಶ್ರಯಿತ ನೆಲೆಕಂಡವರ ಜೊತೆ ಸಂವಾದ ನಡೆಸಿ ಅತ್ಯುತ್ತಮವಾದ ಪುಸ್ತಕಗಳನ್ನು ರಚಿಸಿದ್ದಾರೆ. ಈ ಪುಸ್ತಕ ಬಿಡುಗಡೆಯ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದು ವನಿತಾ ಸೇವಾ ಸಮಾಜ ಮಾಹಿತಿಯನ್ನು ನೀಡಿದೆ.
ನವೀನ ಹಳೆಯದು

نموذج الاتصال