17 ರಂದು ಪರಿಸರ ಸಮಿತಿಯಿಂದ ಕಸದಿಂದ ರಸ ಕಾರ್ಯಕ್ರಮ.
ಧಾರವಾಡ 28 :
ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿಯಿಂದ ಆರನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡಲು ಎಲ್ಲಾ ವಯೋಮಾನದವರು ಪಾಲ್ಗೊಳ್ಳುವಂತೆ ಮಾಚ೯
ದಿ 17 ರಂದು ಸಮಯ ಬೆಳಿಗ್ಗೆ 10:00 ರಿಂದ ಬೇಂದ್ರೆ ಭವನ, ಸಾಧನಕೇರಿಯಲ್ಲಿ ಸ್ಪರ್ಧೆಗಳು ಮತ್ತು ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ ಎಂದು
ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಗೌಳಿಯವರು ತಿಳಸಿದರು .
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಒಟ್ಟು 2 ಸ್ಪರ್ಧೆಗಳು, ಪ್ರವೇಶ ಶುಲ್ಕ - 30 ರೂ, ಒಬ್ಬರಿಗೆ ಒಂದು ಆಯ್ಕೆ ಮಾತ್ರ
ಸ್ಪರ್ಧೆ 1 – 'ಕಸದಿಂದ ರಸ' (Best out of waste)
ನಿಯಮಗಳು
ಗುಂಪಿನಲ್ಲಿ 2 ರಿಂದ 3 ಜನ ಕುಟುಂಬ ಸದಸ್ಯರಿರಬೇಕು, ಕರಕುಶಲ ಮಾದರಿಗಳನ್ನು ಮನೆಯಿಂದಲೇ ತಯಾರಿಸಿ ತರಬೇಕು.
ಸ್ಪರ್ಧೆ 2 - 'ಹಳೇ ಬಟ್ಟೆಗೆ ಹೊಸ ಮೆರಗು' (Use & reuse)
30 ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸಬೇಕು.
ಸ್ಪರ್ಧಿಗಳು 2 ಮಾದರಿ ಬಟ್ಟೆಯನ್ನು ಮಿಡಿಯಂ ಸೈಜ್‌ನಲ್ಲಿ ಇರುವಂತೆ, ಮನೆಯಿಂದಲೇ ಹೊಲೆದು ತರಬೇಕು.
ಬಟ್ಟೆಗಳು ಶುಭ್ರ ಮತ್ತು ಇಸ್ತ್ರಿ ಮಾಡಿರತಕ್ಕದ್ದು ಅತೀ ಚಿಕ್ಕ ಅಳತೆಗಳನ್ನು ಪರಿಗಣಿಸುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು.
ನಿಯಮಗಳು
ಕೈ ಹೊಲಿಗೆ ಅಥವಾ ರಾಟಿಯಲ್ಲಿ ಬಟ್ಟೆಗಳನ್ನು ಹೊಲೆಯಬಹುದು.
) ಹೆಸರು ನೊಂದಾಯಿಸಲು ಸಂಪರ್ಕಿಸುವ ದೂರವಾಣಿ ಸಂಖ್ಯೆ 8618941684 ಮತ್ತು ಹೆಸರು ನೊಂದಾಯಿಸಲು ಕೋನೆಯ ಮಾಚ೯ ದಿ11 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ , ದೂ ಸಂಖ್ಯೆ 9900335236,
ಅಂದು ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಕಸವನ್ನು ಸಂಪನ್ಮೂಲವಾಗಿ ಪರಿಗಣಿಸುವ ಕುರಿತು ಜಾಗೃತಿ ಕಾರ್ಯಕ್ರಮವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಅಭಿಯಾನಕ್ಕೆ ಕೈ ಜೋಡಿಸಬೇಕೆಂದು ಸಮಿತಿಯ ಅಧ್ಯಕ್ಷರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ
ಶಶಿಕಲಾ ಪಾಟೀಲ,ಸರಸ್ವತಿ ಭೋಸಲೆ
ಇದ್ದರು.