**ಕೇಂದ್ರ ಸಚಿವರ ಮೂಲಕ ಅಯೋಧ್ಯೆಗೆ ಪೂಜೆಗಾಗಿ ತೆರಳುತ್ತಿದೆ ಧಾರವಾಡದ ಕುರುಬರ ಕಂಬಳಿ**
ಧಾರವಾಡ
ಜನವರಿ 22/1/2024 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ಪ್ರಭು ಶ್ರೀರಾಮನ ಮೂರ್ತಿ ಹಾಗೂ ಭವ್ಯ ಮಂದಿರ ನಿರ್ಮಾಣ ಸುಸಂದರ್ಭದಲ್ಲಿ ಧಾರವಾಡದ ಕಮಲಾಪುರದ ಪ್ರಗತಿಪರ ರೈತರಾದ ಸುಭಾಷ ಬಸಪ್ಪ ರಾಯಪ್ಪನವರ ಕೈಯಾರೆ ಹೊಲಿಗೆ ಮಾಡಿದ ಕಂಬಳಿಗಳನ್ನ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಲ್ಹಾದ ಜೋಶಿಯವರ ಮುಖಾಂತರವಾಗಿ ಅಯೋಧ್ಯೆಯ ಶ್ರೀರಾಮನ ಮಂದಿರಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಮಾತನಾಡಿ, ಈ ಪವಿತ್ರ ಕಂಬಳಿಗಳನ್ನು ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ತಲುಪಿಸಿ ಕುರುಬರ ಬೋಣಿಗೆಯನ್ನ ನೀಡಿ ಪ್ರಾರ್ಥಿಸಲಾಗುವುದು.
ಈ ಭಾಗದ ಸಮಸ್ತ ಕುರುಬ ಸಮಾಜದ ಪರವಾಗಿ ಕಂಬಳಿಗಳನ್ನ ಅಯೋಧ್ಯೆಗೆ ತಲುಪಿಸಲಾಗುವದು ಎಂದರು.
ಕೇಂದ್ರ ಸಚಿವರು ಕಂಬಳಿ ನೀಡಿದ ಸುಭಾಷ ರಾಯಪ್ಪನವರ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಈರೇಶ ಅಂಚಟಗೇರಿ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಬಿಜೆಪಿ ಮುಖಂಡರಾದ
ಸಂಜಯ್ ಕಪಟಕರ, ಮುರಗೋಡ ,ರಾಜೇಶ್ವರಿ ಸಾಲಗಟ್ಟಿ, ಸೋಮು ಉಡಕೇರಿ, ಮಂಜು ನಡಟ್ಟಿ, ಪಾಲಿಕೆ ಸದಸ್ಯರು ಮಂಜುನಾಥ ಬಟ್ಟಣ್ಣವರ, ಶ್ರೀನಿವಾಸ ಕೋಟ್ಯಾನ, ಬಸು ಬಾಳಗಿ, ಕಮಲಾಪುರ ಭಾಗದ ಗುರುಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.