“ಕನಕ ಪ್ರಶಸ್ತಿಗೆ” ಬಸವರಾಜ ಆನೆಗುಂದಿ ಆಯ್ಕೆ.
ಧಾರವಾಡ : ವಿದ್ಯಾಕಾಶಿ,ಸಾಂಸ್ಕೃತಿಕ ನಗರಿ ಧಾರವಾಡದ ಮನಸೂರ ಸುಕ್ಷೇತ್ರ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾಮಠದ ವಿದ್ಯಾಪೀಠದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಕನಕ ಜಯಂತಿ ಅಂಗವಾಗಿ ಜ.23 ರಿಂದ ಜ. 27ರವರೆಗೆ ಏರ್ಪಡಿಸಿರುವ ಐದು ದಿನಗಳ ರಾಜ್ಯ ಮಟ್ಟದ ಕನಕ ಪಂಚ ಸಾಂಸ್ಕೃತಿಕ ಉತ್ಸವ-2023 ಸಮಾರಂಭದಲ್ಲಿ ಬಸವರಾಜ ಆನೆಗುಂದಿ ಕಾರ್ಯಾಧ್ಯಕ್ಷರು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಜ.26 ರ ಶುಕ್ರವಾರದಂದು ಬೆಳಿಗ್ಗೆ 11-00 ಗಂಟೆಗೆ ರಾಜ್ಯಮಟ್ಟದ ಪ್ರತಿಷ್ಠಿತ 'ಕನಕ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಮನಸೂರಿನ ಸುಕ್ಷೇತ್ರ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾಮಠದ ವಿದ್ಯಾಪೀಠದ ಪೂಜ್ಯ ಶ್ರೀ ಡಾ. ಬಸವರಾಜ ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.