ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಿ ಪ್ರಕಾಶ್ ಕರೆ.

ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಿ ಪ್ರಕಾಶ್ ಕರೆ.  
             ಧಾರವಾಡ : ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನ ಗುರುತಿಸಿ ಅವರಿಗೆ ಉನ್ನತ ಶಿಕ್ಷಣವನ್ನು ನೀಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಬಡತನವಿದೆ ಎಂದು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸುವುದನ್ನು ಬಿಡಿಸಬೇಡಿ ಬಡತನ ಶಾಪವಲ್ಲ ಎಂದು ಗರಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಿ ಪ್ರಕಾಶ್ ಹೇಳಿದರು. ಅಖಿಲ ಕರ್ನಾಟಕ ಭೋವಿ ವಡ್ಡರ್ ಯುವ ವೇದಿಕೆ ಕ್ರಾಂತಿ ಅಖಿಲ ಕರ್ನಾಟಕ ಭೋವಿ ವಡ್ಡರ ಕಲ್ಲು ಬಂಡೆ ಮಣ್ಣು ಮತ್ತು ಕಟ್ಟಡ ಕಾರ್ಮಿಕ ವೇದಿಕೆ ಹಮ್ಮಿಕೊಂಡ ಅಭಿಮಾನದ ಸನ್ಮಾನವನ್ನ ಸ್ವೀಕರಿಸಿಕೊಂಡು ಮಾತನಾಡಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳು ಯುವ ಪೀಳಿಗೆಗೆ ಮಾದರಿಯಾಗಲಿ. ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿ ಎಂದು ಕರೆ ನೀಡಿದರು 
ಈ ಸಂದರ್ಭದಲ್ಲಿ ಮಂಜುನಾಥ ತಿ. ಹಿರೇಮನಿ. ರಾಜ್ಯ ಉಪಾಧ್ಯಕ್ಷರು ಸಮಾಜ ಮುಖಂಡರು ಬಸವರಾಜ ಆನೆಗುಂದಿ. ಶ್ರೀನಿವಾಸ ಅವರೊಳ್ಳಿ .ಹರೀಶ ವಡ್ಡರ ಮಂಜುನಾಥ ಹಳ್ಯಾಳ. ಶಿಲ್ಪ ಹಿರೇಮನಿ ಲಕ್ಷ್ಮಿ ಬಂಡಿ ವಡ್ಡರ್.ದ್ಯಾಮವ್ವ ವಡ್ಡರ್ ಮಂಜುನಾಥ್ ಬಂಡಿ ವಡ್ಡರ್ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು
ನವೀನ ಹಳೆಯದು

نموذج الاتصال