ಎನ್.ಎಸ್.ಎಸ್.ಪಠ್ಯೇತರ ಚಟುವಟಿಕೆಗಳಿಂದ ಕೌಶಲ ವೃದ್ಧಿ- ವೈ.ಬಿ.ಕಡಕೋಳ

ಎನ್.ಎಸ್.ಎಸ್.ಪಠ್ಯೇತರ ಚಟುವಟಿಕೆಗಳಿಂದ ಕೌಶಲ ವೃದ್ಧಿ- ವೈ.ಬಿ.ಕಡಕೋಳ
ಮುನವಳ್ಳಿಃ  “ಎನ್.ಸಿ.ಸಿ ಮತ್ತು ಎನ್.ಎಸ್.ಎಸ್.ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲಗಳನ್ನು ವೃದ್ಧಿಸಿಕೊಳ್ಳುವರು.ತರಗತಿಗಳ ಜೊತೆಗೆ ಕ್ರೀಡೆ.ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.ಎನ್.ಸಿ.ಸಿ ಮತ್ತು ಎನ್.ಎಸ್.ಎಸ್. ಗಳ ಮೂಲಕ ಶಿಸ್ತಿನ ಮಹತ್ವ. ಮತ್ತು ಏಕತೆಯನ್ನು ಬೆಳೆಸಿಕೊಳ್ಳಲು ಸಹಕಾರಿ. ವಿದ್ಯಾರ್ಥಿ ಜೀವನದಲ್ಲಿ ಆಸಕ್ತ ವಿಷಯಗಳ ಕಲಿಕೆಯತ್ತ ಗಮನ ಹರಿಸುವ ಮೂಲಕ ಪಾಠದ ಜೊತೆಗೆ ನಾಯಕತ್ವ ಗುಣ.ವಾಕ್ ಚಾತುರ್ಯ.ಸಾಮಾನ್ಯ ಜ್ಞಾನ ವೃದ್ದಿಯಾಗುವುದು” ಎಂದು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಹೇಳಿದರು.
ಅವರು ಪಟ್ಟಣದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 2023-24 ನೇ ಸಾಲಿನ ಬಿ.ಎ.ಮತ್ತು ಬಿ.ಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ,ಪಠ್ಯೇತರ ಚಟುವಟಿಕೆಗಳು ಹಾಗೂ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಜೊತೆಗೆ ಐಕ್ಯೂಎಸಿ ಘಟಕಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಸುಸಜ್ಜಿತ ವ್ಯಕ್ತಿಗಳನ್ನು ರೂಪಿಸುವಲ್ಲಿ ಅಗತ್ಯ ಜೀವನ ಕೌಶಲ್ಯಗಳನ್ನು ಹೊಂದುವಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮಹತ್ವದ್ದಾಗಿದೆ” ಎಂದು ಅಭಿಪ್ರಾಯಪಟ್ಟರು.
  ಈ ಕಾರ್ಯಕ್ರಮದ ವೇದಿಕೆಯಲ್ಲಿ ಜನತಾ ಶಿಕ್ಷಣ ಪ್ರಸಾರಕ ಸಂಘದ ಅಧ್ಯಕ್ಷರಾದ ಎಂ.ಆರ್.ಗೋಪಶೆಟ್ಟಿ. ಕೋಶಾಧ್ಯಕ್ಷರು ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ರವೀಂದ್ರ ಯಲಿಗಾರ. ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ.ಆಡಳಿತಾಧಿಕಾರಿಗಳಾದ ಅಮೀತ ಕರೀಕಟ್ಟಿ.ಅಜ್ಜಪ್ಪ ಗಡಮಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಂ.ಎಸ್.ಬಾಗೇವಾಡಿ.ಪುನೀತ ಪ್ರಶಸ್ತಿ ವಿಭೂಷಿತ ಚಿತ್ರಕಲಾ ಶಿಕ್ಷಕ ಎಸ್.ಬಿ.ಹಿರಲಿಂಗಣ್ಣವರ.ಪ್ರೌಢಶಾಲಾ ಶಿಕ್ಷಕ ವ್ಹಿ.ಎಫ್.ಚಿಕ್ಕಮಠ.ಎಸ್.ಪಿ.ಜೆ.ಜಿ. ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಬಿ.ನಾವಲಗಟ್ಟಿ ಸೇರಿದಂತ ಕಾಲೇಜಿನ ಅಧ್ಯಾಪಕರು ವಿದ್ಯಾರ್ಥಿಗಳುಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಶ್ರೀ ಪುರಸ್ಕೃತ ವೈ.ಬಿ.ಕಡಕೋಳ. .ಪುನೀತ ಪ್ರಶಸ್ತಿ ವಿಭೂಷಿತ ಚಿತ್ರಕಲಾ ಶಿಕ್ಷಕ ಎಸ್.ಬಿ.ಹಿರಲಿಂಗಣ್ಣವರ.ಪ್ರೌಢಶಾಲಾ ಶಿಕ್ಷಕ ವ್ಹಿ.ಎಫ್.ಚಿಕ್ಕಮಠ ಇವರುಗಳನ್ನು ಸನ್ಮಾನಿಸಲಾಯಿತು.ಸನ್ಮಾನಿತರ ಪರವಾಗಿ ಮಾತನಾಡಿದ ಎಸ್.ಬಿ.ಹಿರಲಿಂಗನ್ನವರ “ನಾವು ಸೃಜನಶೀಲತೆ.ವಿಮರ್ಶಾತ್ಮಕ ಚಿಂತನೆ.ವೈಯುಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮಲ್ಲಿರುವ ಪ್ರತಿಭೆಯನ್ನು ಹೊರಗೆ ತೆರೆಯುವ ಮೂಲಕ ಉತ್ತಮ ವ್ಯಕ್ತಿತ್ವ ಹೊಂದಲು ಸಹಕಾರಿ” ಎಂದು ತಿಳಿಸಿದರು
   ಆಡಳಿತಾಧಿಕಾರಿ ಅಮಿತ್ ಕರೀಕಟ್ಟಿ ಮಾತನಾಡಿ “ ಈ ಸಂಸ್ಥೆಯ ವಿದ್ಯಾರ್ಥಿಗಳು ಇಂದು ನಾಡಿನಾದ್ಯಂತ ತಮ್ಮದೇ ಸೇವೆ ನೀಡುತ್ತಿರುವರು.ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗುವ ಮತ್ತು ಅವರ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯª ಸಹಕಾರ ನೀಡಲಾಗುವುದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ಪ್ರೊ.ಎಸ್.ಎ.ಯಲಿಗಾರ.ಪಿ.ಎಫ್.ಪಟ್ಟಣಶೆಟ್ಟಿ.ಪ್ರೊ.ಪೃಥ್ವಿರಾಜ ಪಾಟೀಲ.ಪ್ರೊ.ಶ್ರೀಶೈಲ.ಗೋಪಶೆಟ್ಟಿ.ಎಸ್.ಪಿ.ಕಾಮನ್ನವರ.ಡಿ.ಎಂ.ಅಗಸಿನಮನಿ.ಟಿ.ಎ.ತುಪಳಿ.ಬಿ.ಎಲ್.ರಾಯನಗೌಡ.ಎಸ್.ಎಚ್.ಮುದ್ದಾಪುರ.ಹಣಮಂತ ಗೂಟಿ. ಲಕ್ಷ್ಮೀ ಅಬ್ಬಾರ.ರತ್ನಾ ಮೇಟಿ.ಕಾಲೇಜು ವಿದ್ಯಾರ್ಥಿ ಒಕ್ಕೂಟದ ತುಕಾರಾಮ.ನೇಗಿನಾಳ.ಆದರ್ಶ ಕರದಿನ.ಮುತ್ತು ಮೇಟಿ.ಅಭಿಷೇಕ ಹಡಗಿನಾಳ ಯಲ್ಲಪ್ಪ ನರಿ ಸೇರಿದಂತೆ ಬಿ.ಎ. ಹಾಗೂ ಬಿ.ಕಾಂ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
   ಕಾರ್ಯಕ್ರಮವನ್ನು ಸುಮಾ ಚವಡಪ್ಪನವರ ನಿರೂಪಿಸಿದರು.ಪ್ರಾಚಾರ್ಯ ಡಾ.ಎಂ.ಎಸ್.ಬಾಗೇವಾಡಿ ಸ್ವಾಗತಿಸುವ ಜೊತೆಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಿಂಧೂ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಜರುಗಿತು.ಕಾಲೇಜು ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತುಕಾರಾಮ ನೇಗಿನಾಳ ವಂದಿಸಿದರು.
ನವೀನ ಹಳೆಯದು

نموذج الاتصال