ಧಾರವಾಡ ಶಹರದ ಸಾರ್ವಜನಿಕ ಸಮಸ್ಯೆಗಳ ಕುರಿತು ಹೋರಾಟ ಕೈಕೊಳ್ಳುವ ಸಲುವಾಗಿ ನೂತನ ಸಂಘಟನೆಯೊಂದನ್ನು ಅಸ್ತಿತ್ವಕ್ಕೆ

ನೂತನ ಸಂಘಟನೆಯೊಂದನ್ನು ಅಸ್ತಿತ್ವಕ್ಕೆ ಸಿದ್ದತೆ. 
 
ಧಾರವಾಡ : 
ಧಾರವಾಡ ಶಹರದ ಸಾರ್ವಜನಿಕ ಸಮಸ್ಯೆಗಳ ಕುರಿತು ಹೋರಾಟ ಕೈಕೊಳ್ಳುವ ಸಲುವಾಗಿ ನೂತನ ಸಂಘಟನೆಯೊಂದನ್ನು ಅಸ್ತಿತ್ವಕ್ಕೆ ತರಲು ಸೋಮವಾರ ಜರುಗಿದ ಸಮಾನ ಮನಸ್ಕರ ಸಭೆಯಲ್ಲಿ ತೀರ್ಮಾನಿಸಲಾಯಿತು.


ನಗರದ ಸರಕಾರಿ ನೌಕರರ ಸಭಾಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಹುಬ್ಬಳ್ಳಿ,-
ಧಾರವಾಡ ಅವಳಿ ನಗರದ ನಡುವಿನ ಬಿ.ಆರ್.ಟಿ.ಎಸ್. ಬಸ್ ಸಂಚಾರ ಅವ್ಯವಸ್ಥೆಯಿಂದ ಸರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲಾಯಿತು.
ಅಲ್ಲದೇ ಮುಂಬರುವ ದಿನಗಳಲ್ಲಿ ಇತರ ಸಮಸ್ಯೆಗಳ ನಿವಾರಣೆ, ಮೂಲಸೌಕರ್ಯಗಳ ಒದಗಿಸುವಂತೆ ಸರಕಾರದ ಗಮನಕ್ಕೆ ತರುವುದು ಸೇರಿದಂತೆ ಇತರ ಚಟುವಟಿಕೆಗಳನ್ನು  ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಾರ್ವಜನಿಕರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಹೋರಾಟ ಹಮ್ಮಿಕೊಳ್ಳುವ ಉದ್ದೇಶದಿಂದ ಸಂಘಟಿತವಾಗಬೇಕು. ಇದಕ್ಕೆ ವಿವಿಧ ಕ್ಷೇತ್ರಗಳಲ್ಲಿ ನಿರತರಾದವರನ್ನು  ಸೇರಿಸಿಕೊಂಡು
ಹೊಸ ಸಂಘಟನೆಯನ್ನು ನೊಂದಣಿ ಮಾಡಿಸಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು‌.

ಮುಂದಿನ ಚಟುವಟಿಕೆಗಳನ್ನು ಕೈಕೊಳ್ಳಲು ಸಮಾಜ ಸೇವಕ ಈಶ್ವರ ಶಿವಳ್ಳಿ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಯಿತು.
ಸಂಘಟನೆಯ ಸಂಚಾಲಕರಾಗಿ ಮಂಜುನಾಥ ನಡಟ್ಟಿ ನೇಮಕವಾದರು.
  ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ, ನ್ಯಾಯವಾದಿ ಸಂತೋಷ ಪಟ್ಟಣಶೆಟ್ಟಿ,  ಮುಖಂಡರಾದ ವೆಂಕಟೇಶ ರಾಯ್ಕರ್, 
ಪುಂಡಲೀಕ ತಳವಾರ, ಪರಮೇಶ್ವರ ಕಾಳೆ,ಬಸವರಾಜ ಪೊಮೋಜಿ,ಇಮ್ರಾನ 
ತಾಳಿಕೋಟಿ, ಮಂಜು ನೀರಲಕಟ್ಟಿ,ಮುತ್ತು ಬೆಳ್ಳಕ್ಕಿ, ಪರಮೇಶ್ವರ ಉಳವಣ್ಣವರ,
 ಪುಂಡಲೀಕ ಹಡಪದ, 
  ಬಿ.ಎಂ.ಕೇದಾರನಾಥ,
ಮಹೇಶ ಕಟ್ಟಿ, ಪ್ರಕಾಶ ಬೆಂಗೇರಿ, ಇಮ್ರಾನ ಪಾಟೀಲ, ನಾಗಯ್ಯ ಹಿರೇಮಠ ಇತರರು ಸಭೆಯಲ್ಲಿದ್ದರು.
ನವೀನ ಹಳೆಯದು

نموذج الاتصال