ವಿಶ್ವ ಹಿಂದೂ ಮಹಾ ಸಂಘ ಉದ್ಘಾಟನೆ | ಪದಾಧಿಕಾರಿಗಳ ಪದಗ್ರಹಣ ಸಮಾರಂಭ |
*ಹಿಂದೂ ಧರ್ಮ ವಿಶ್ವ ಧರ್ಮ: ಗೋವಿಂದ ಕುಲಕರ್ಣಿ*
ಧಾರವಾಡ: ಹಿಂದೂ ಧರ್ಮ ವಿಶ್ವ ಧರ್ಮವಾಗಿದೆ. ಹಿಂದೂ ಧರ್ಮಕ್ಕೆ ಒಂದೇ ಪುಸ್ತಕವಿಲ್ಲ ಹಾಗೂ ಒಬ್ಬನೇ ಮನುಷ್ಯನಿಲ್ಲ. ಸನಾತನ ಹಿಂದೂ ಧರ್ಮಕ್ಕೆ ನಾಶವಾಗುವ ಗುಣವಿಲ್ಲ ಎಂದು ಕೆ.ಇ.ಬೋರ್ಡ್ ಜ್ಯೂನಿಯರ್ ಕಾಲೇಜಿನ ಉಪನ್ಯಾಸಕ ಗೋವಿಂದ ಕುಲಕರ್ಣಿ ಹೇಳಿದರು.
ಅವರು, ಧಾರವಾಡದ ರಂಗಾಯಣದಲ್ಲಿ ನಡೆದ ವಿಶ್ವ ಹಿಂದೂ ಮಹಾ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮ ೨೦ ಶತಮಾನದ ಹಳೆಯ ಧರ್ಮವಾಗಿದೆ. ವೇದಗಳು ಯಾವುದೇ ಧರ್ಮದಲ್ಲಿ ಇಲ್ಲ ಅದು ಕೇವಲ ಸನಾತ ಹಿಂದೂ ಧರ್ಮದಲ್ಲಿವೆ. ಪ್ರತಿಯೊಬ್ಬರ ಆತ್ಮದಲ್ಲಿ ಪರಮಾತ್ಮನ ಆತ್ಮ ಇದೆ. ಅದನ್ನು ಧರ್ಮದ ಉಳಿವಿಗಾಗಿ, ಬೆಳವಣಿಗಾಗಿ ಶ್ರಮಿಸಿ ಅಂತಾ ಹೇಳಿದರು.
ಮನಗುಂಡಿ ರೇವಣಸಿದ್ಧೇಶ್ವರ ಮಹಾಮಠದ ಪರಮಪೂಜ್ಯ ಶ್ರೀ ಬಸವರಾಜ ದೇವರು ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿ, ಆತ್ಮಕ್ಕೆ ಯಾವುದೇ ಜಾತಿ, ಮತ ಪಂಥ ಇಲ್ಲ. ಅದೊಂದು ದಿವ್ಯ ಶಕ್ತಿ. ಸಜ್ಜನರ ಸಂಘ ಇದ್ದರೇ ಮಾತ್ರ ಒಳ್ಳೆಯ ಬದುಕು. ಎಲ್ಲರನ್ನೂ ಒಳಗೊಂಡಂತಹ ಧರ್ಮ ಹಿಂದೂ ಧರ್ಮ ಅಂತಾ ಹೇಳಿದರು.
ಹಿಂದೂ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಹಲವಾರು ಸಂಘಟನೆಗಳಿಂದ ಕಾರ್ಯಕ್ರಮಗಳು ನಡೆಯಬೇಕು. ಇಂತಹ ಕಾರ್ಯಕ್ರಮದಿಂದ ಧರ್ಮದ ಜಾಗೃತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಡಿ ಅಂತಾ ಹೇಳಿದರು.
ಹಿಂದೂ ಮಹಾ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವದು ತುಂಬಾ ಒಳ್ಳೆಯದಾಗಿ. ಹಿಂದೂ ಮಹಾ ಸಂಘದಿಂದ ಜನಜಾಗೃತಿ ಮೂಡಲಿ ಎಂದು ಆಶೀಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ಹಿಂದೂ ಮಹಾ ಸಂಘ ಭಗವದ್ಗಿತೆಯನ್ನು ಮನೆ ಪಾಠ ಮಾಡಿ ಅದ್ಭುತವಾದ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸೋಣ. ಹಿಂದೂ ಅನ್ನುವದು ಅದು ಒಂದು ಜಾತಿ ಅಲ್ಲ. ಅದು ಒಂದು ವಿಶ್ವಧರ್ಮ ಅಂತಾ ಹೇಳಿದರು.
ಧರ್ಮ ರಕ್ಷಣೆಗಾಗಿ ನಾವೆಲ್ಲ ಎದ್ದು ನಿಲ್ಲಬೇಕು. ಸನಾತನ ಹಿಂದೂ ಧರ್ಮ ಪ್ರಕೃತಿದತ್ತವಾಗಿ ಬಂದಿದೆ. ಧರ್ಮದ ವಿಷಯ ಬಂದಾಗ ನಾನು ಕೂಡಾ ಶಿವಾಜಿಯಂತೆ ಖಡ್ಗವನ್ನು ಹಿಡಿದು ಹೋರಾಡಿ ಧರ್ಮ ರಕ್ಷಣೆ ಮಾಡುತ್ತೇನೆ ಅಂತಾ ಹೇಳಿದರು.
ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯ ಕಾರ್ಯಧ್ಯಕ್ಷ ಬಸವರಾಜ ಆನೆಗುಂದಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಹಿಂದೂ ಮಹಾ ಸಂಘ ಅಸ್ತಿತ್ವಕ್ಕೆ ಬಂದಿರುವದು ಸಂತೋಷದ ವಿಷಯ. ವಿಶಾಲ ಮನೋಭಾವನೆ, ಸಂಕಲ್ಪ ಇಟ್ಟುಕೊಂಡು ರಾಜ್ಯಾಧ್ಯಕ್ಷ ತುಕಾರಾಮ ಮಾಣಿಕನವರ ಮಾಡುತ್ತಿರುವ ಕಾರ್ಯಕ್ಕೆ ಶ್ಲಾಘಿಸಿದರು.
ವಿಶ್ವ ಹಿಂದೂ ಮಹಾ ಸಂಘದ ರಾಜ್ಯಾಧ್ಯಕ್ಷ ತುಕಾರಾಮ ಮಾಣಿಕನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘಟನೆ ಯಾವ ಜಾತಿಗೆ, ಯಾವುದೇ ಪಂಗಡಕ್ಕೆ ಸೀಮಿತವಿಲ್ಲ. ಹಿಂದೂ ಭೂಮಿಯಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಮುಕ್ತ ಅವಕಾಶವಿದೆ ಎಂದ ಅವರು, ಸಂಘಟನೆ ಉದ್ಘಾಟನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಕವಳಿ, ಡೋರ ಕಕ್ಕಯ್ಯ ಸಮಾಜದ ರಾಜ್ಯಾಧ್ಯಕ್ಷ ಸಂತೋಷ ಸವಣೂರ, ಶ್ರೀ ಶಿವಾನಂದ ಸ್ವಾಮಿ ಬೇತೂರಮಠ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮಹಾಂತೇಶ ಬೇತೂರಮಠ ಮಾತನಾಡಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳ ಪ್ರದಗ್ರಹಣ ಜರುಗಿತು. ಭೋವಿ ವಡ್ಡರ ಸಮಾಜದ ಉಪಾಧ್ಯಕ್ಷ ಮಂಜುನಾಥ ಹಿರೇಮನಿ, ಭೋವಿ ವಡ್ಡರ ಸಮಾಜದ ಅಧ್ಯಕ್ಷ ಬಸವರಾಜ ರುದ್ರಾಪೂರ, ಹಿಂದೂ ಮಹಾ ಸಂಘದ ಪದಾಧಿಕಾರಿಗಳಾದ ಪ್ರಕಾಶ ಶಿರಬಡಗಿ, ಮಹೇಶ ಮಂಕಣಿ, ಪ್ರಶಾಂತ ಸವಣೂರ, ಪ್ರಶಾಂತ ಪವಾರ, ವಿಶ್ವನಾಥ ಭಜಂತ್ರಿ, ಬಾಬು ಅಂಗಡಿ, ಕಮಲು ಪೂಲವಾಲೆ, ರಾಜು ಭಜ್ರಂತಿ, ಅಭಿಷೇಕ ಜಾಧವ, ಪ್ರಭಾಕರ ಜಾಧವ, ವಿನಾಯಕ ಕುಂದಗೋಳ, ಮಹೇಶ ಹುಬ್ಬಳ್ಳಿ, ಹುಲ್ಲಪ್ಪ ಶಿರಬಡಗಿ, ಅನಿಲ ವಾಂಬಳೆ, ಸಚಿನ್ ಲೋಕಾಪೂರ, ಮಹೇಶ ಅಂಬಿಗೇರ, ಈರಣ್ಣಾ ಹೂಗಾರ, ಪ್ರದೀಪ ಪವಾರ, ಮಹಾಂತೇಶ ಪಾಟೀಲ, ಡಾ. ಶಿವಾಜಿ ಕಡೆಪ್ಪನವರ, ಕರಿಬಸಪ್ಪ ರೇವಡಿಹಾಳ ಇದ್ದರು. ಬಸನಗೌಡ ಪೊಲೀಸಪಾಟೀಲ ನಿರೂಪಿಸಿ, ವಂದಿಸಿದರು.
---------------------
ಪೋಟೋ ಕ್ಯಾಪ್ಸನ್.......
ಧಾರವಾಡದ ರಂಗಾಯಣದಲ್ಲಿ ನಡೆದ ವಿಶ್ವ ಹಿಂದೂ ಮಹಾ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಕೆ.ಇ.ಬೋರ್ಡ್ ಜ್ಯೂನಿಯರ್ ಕಾಲೇಜಿನ ಉಪನ್ಯಾಸಕ ಗೋವಿಂದ ಕುಲಕರ್ಣಿ, ಮನಗುಂಡಿ ರೇವಣಸಿದ್ಧೇಶ್ವರ ಮಹಾಮಠದ ಪರಮಪೂಜ್ಯ ಶ್ರೀ ಬಸವರಾಜ ದೇವರು ಉದ್ಘಾಟಿಸಿದರು. ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯ ಕಾರ್ಯಧ್ಯಕ್ಷ ಬಸವರಾಜ ಆನೆಗುಂದಿ, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಕವಳಿ, ಡೋರ ಕಕ್ಕಯ್ಯ ಸಮಾಜದ ರಾಜ್ಯಾಧ್ಯಕ್ಷ ಸಂತೋಷ ಸವಣೂರ, ಶ್ರೀ ಶಿವಾನಂದ ಸ್ವಾಮಿ ಬೇತೂರಮಠ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮಹಾಂತೇಶ ಬೇತೂರಮಠ ಸೇರಿದಂತೆ ಇನ್ನಿತರರು ಇದ್ದರು.