ವಿಸ್ತಾರ ಸುದ್ದಿ ವಾಹಿನಿಯ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಎಲ್ ಐ ಲಕ್ಕಮ್ಮನವರ ಆಯ್ಕೆ*

*ವಿಸ್ತಾರ ಸುದ್ದಿ ವಾಹಿನಿಯ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ   ಎಲ್ ಐ ಲಕ್ಕಮ್ಮನವರ ಆಯ್ಕೆ*
      ಧಾರವಾಡ: ಬೆಂಗಳೂರಿನ ಸುದ್ದಿ ವಾಹಿನಿ ವಿಸ್ತಾರ ಅವರು ನೀಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಧಾರವಾಡ ತಾಲೂಕಿನ ಹೆಬ್ಬಳ್ಳಿಯ ಉರ್ದು ಶಾಲೆಯ ಕನ್ನಡ ಶಿಕ್ಷಕ ಎಲ್ ಐ ಲಕ್ಕಮ್ಮನವರ ಆಯ್ಕೆ ಯಾಗಿರುವರು. ಜನೇವರಿ 6 ರಂದು ಧಾರವಾಡ ದಲ್ಲಿ ಜರಗುವ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
ಇವರು ಮೂಲತಃ ಧಾರವಾಡ ಜಿಲ್ಲೆಯ ಹೆಬ್ಬಳ್ಳಿಯವರು. ಇವರು 7-3-1969 ರಂದು ಶರಣ ದಂಪತಿಗಳಾದ ಈರಪ್ಪ ಯಲ್ಲವ್ವ ಇವರ ಉದರದಲ್ಲಿ 8ನೇಯವರಾಗಿ ಜನಿಸಿದರು. ಇವರಿಗೆ 5 ಜನ ಸಹೋದರಿಯರು. ಇಬ್ಬರು ಸಹೋದರರು. ಓರ್ವ ಕಿರಿಯ ಸಹೋದರ ಇರುವರು. 
ಇವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹುಬ್ಬಳ್ಳಿಯಲ್ಲಿ ಪೂರೈಸಿ ನಂತರ ಮುನವಳ್ಳಿ ಯಲ್ಲಿ ಪಿ. ಯು. ಸಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಪೂರೈಸಿದರು. ಬಿ. ಎ ಕೆ. ಎಲ್. ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಮಹಾವಿದ್ಯಾಲಯ ಧಾರವಾಡ ದಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿ ಗೆ ಆಯ್ಕೆ ಆದರು. 
 17-8-1994 ರಿಂದ ಶಿಕ್ಷಕ ವೃತ್ತಿ ಕೈಗೊಳ್ಳುವ ಜೊತೆಗೆ
ಸಾಕ್ಷರೋತ್ತರ ಕಾರ್ಯಕ್ರಮದಲ್ಲಿ ಕ್ಲಸ್ಟರ್ ಸಂಯೋಜಕನಾಗಿ ಐದು ವರ್ಷಗಳ ಸೇವೆ,
ಸಾಕ್ಷರೋತ್ತರ ಹಾಗೂ ಮುಂದುವರಿಕೆ ಕಾರ್ಯಕ್ರಮದಲ್ಲಿ 7 ವರ್ಷಗಳ ಸೇವೆ
ಕನ್ನಡ ನಾಡು ಸಾಕ್ಷರ ನಾಡು  ಕಾರ್ಯಕ್ರಮದಲ್ಲಿ ಸಂಯೋಜಕನಾಗಿ ಸೇವೆ ಸಲ್ಲಿಸಿದರು. 

ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ದತ್ತಿದಾನಿ ನಿವೃತ್ತ ಶಿಕ್ಷಕಿ ಶ್ರೀಮತಿ ಲೂಸಿ ಸಾಲ್ಡಾನರವರ ಹೆಸರಿನಿಂದ ಆರಂಭವಾದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷನಾಗಿ ಕೆಲಸ ಮಾಡಿದ್ದು, ಅಪ್ಪ ನನ್ನ ಹೊಡಿಬ್ಯಾಡಪ್ಪ ಕಿರು ಶೈಕ್ಷಣಿಕ ಚಲನಚಿತ್ರದ ಕಥಾ ಲೇಖಕರಾಗಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿಯ ಸದಸ್ಯರಾಗಿ ಸದ್ಯ ಸೇವೆ ಮಾಡುತ್ತಿರುವ ಇವರು ಅಪ್ನಾದೇಶ ಬಳಗವನ್ನು ಅಂದಿನ ಜಿಲ್ಲಾಧಿಕಾರಿ ಭರತ್ ಲಾಲ್ ಮೀನಾ ಅವರೊಂದಿಗೆ ಕಟ್ಟಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಧಾರವಾಡ ಜಿಲ್ಲೆಯಾದ್ಯಂತ ಕೈಗೊಂಡರು. ನಂತರ ಭರತ್ ಲಾಲ್ ಮೀನಾ ನಿವೃತ್ತಿ ಯ ನಂತರ ತಮ್ಮ ಪ್ರಾಥಮಿಕ ಶಾಲಾ ಶಿಕ್ಷಕಿ ಲೂಸಿ ಸಾಲ್ಡಾನಾ ಅವರ ಬದುಕಿನ ಕಥೆಯಲ್ಲ ಜೀವನ ಕೃತಿ ಹೊರತರಲು ವೈ. ಬಿ. ಕಡಕೋಳ ಅವರಿಗೆ ನೆರವಾದುದಲ್ಲದೇ ಇದುವರೆಗೂ ಸಾಲ್ಡಾನಾ ಬದುಕಿನ 10 ಕೃತಿಗಳು ವೈ. ಬಿ. ಕಡಕೋಳ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಲು ಬೆನ್ನೆಲುಬಾಗಿ ನಿಂತಿರುವರು.
    ಹೆಬ್ಬಳ್ಳಿಯ ಖ್ಯಾತ ಭಜನಾ ಪದ ಹಾಡುಗಾರರೂ ಹಾಗೂ ಸೋದರ ಸಂಬಂಧಿ ಗುರಪ್ಪ ಲಕ್ಕಮ್ಮನವರ ಭಜನಾ ಪದಗಳ ಕರ್ತೃ ಚಂದ್ರಪ್ಪ ಚಲವಾದಿಯವರ ಹುಲಿಯು ಹುಟ್ಟಿತ್ತು ಕಿತ್ತೂರು ನಾಡಾಗ ಕೃತಿ ಪ್ರಕಟಣೆಗೆ ಕೈ ಜೋಡಿಸಿದರು. ಮಕ್ಕಳ ರಚನಾತ್ಮಕ ಚಟುವಟಿಕೆಗಳನ್ನು ಸಂಘಟಿಸುವ ಜೊತೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಇವರ ಕಾರ್ಯ ವೈಖರಿ ಗಮನಿಸಿ ವಿಸ್ತಾರ ವಾಹಿನಿಯವರು ಗುರುತಿಸಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಧಾರವಾಡ ದಲ್ಲಿ ಜನವರಿ 6 ರಂದು ಜರಗುವ ಕಾರ್ಯ ಕ್ರಮದಲ್ಲಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸವದತ್ತಿ ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾದ ಎಂ. ಎಸ್ ಹೊಂಗಲ್. ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಚರಂತಿಮಠ. ಗುರು ಮಾತೆ ಲೂಸಿ ಸಾಲ್ಡಾನಾ. ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಸೇರಿದಂತೆ ಅನೇಕರು ಇವರ ಸೇವೆ ಗೆ ಸಂದ ಈ ಪ್ರಶಸ್ತಿ ಗೆ ಅಭಿನಂದಿಸಿರುವರು.
ನವೀನ ಹಳೆಯದು

نموذج الاتصال