ದಿ 10 ರಂದು ಶಾಲ್ಮಲೋತ್ಸವ
ಧಾರವಾಡ 08 :
ಸಂಸ್ಕೃತಿ ಟ್ರಸ್ಟ್, ಹುಬ್ಬಳ್ಳಿ ಶಾಖೆ ಧಾರವಾಡ ಶಾಲ್ಮಲೋತ್ಸವ ಕಾರ್ಯಕ್ರಮ ದಿ 10 ರಂದು
ಭಾನುವಾರ ಮಧ್ಯಾಹ್ನ 2 ಗಂಟೆಗೆ ಶಾಲ್ಮಲಾ ನದಿಯ ಉಗಮ ಸ್ಥಾನ" ಸೋಮೇಶ್ವರ ದೇವಸ್ಥಾನ ಹಿಂದುಗಡೆ, ನುಗ್ಗಿಕೇಲಿ ರಸ್ತೆ, ಧಾರವಾಡ
ಹಮ್ಮಿಕೊಂಡಿದೆ ಎಂದು
ಕಾರ್ಯದರ್ಶಿ ಸಂಸ್ಕೃತಿ ಟ್ರಸ್ಟ್ ಶ್ರೀಮತಿ ವೇದಾ ಕುಲಕರ್ಣಿ ತಿಳಸಿದರು ,
ಕಳೆದ ಮೂರು ದಿನಗಳಿಂದ ಶಾಲ್ಮಲೆಯ ಉಗಮಸ್ಥಾನ ಸ್ವಯಂಸೇವಕರು , ವಿವಿಧ ಸಂಘಟನೆ ಹಾಗೂ ಪಾಲಿಕೆಯವರು ಸ್ವಚ್ಛ ಗೊಳಿಸಲು ಶ್ರಮವಹಿಸಿದ್ದಾರೆ ಬನ್ನಿ ಪರಿಸರ ಉಳಿಸಿ ದೇಶ ರಕ್ಷಿಸಿ
ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಅಥಿತಿಗಳಾಗಿ ಸೌಭಾಗ್ಯಾ ಯಲಿಗಾರ (ಉದ್ಯಮಿಗಳು ಮತ್ತು ಪರಿಸರ ಪ್ರೀಮಿಗಳು ಧಾರವಾಡ) ಮುಖ್ಯ ವಕ್ತಾರರಾಗಿ ವಿನಾಯಕ ತಲಗೇರಿ (ವಿಭಾಗ ಕಾರ್ಯದರ್ಶಿಗಳು, ವಿಶ್ವ ಹಿಂದೂ ಪರಿಷತ್) ಆಗಮಿಸುವರು .ನಾಗರಿಕರು
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದರು.
ರಜನಿ ಕುಲಕರ್ಣಿ,ಪಲ್ಲವಿ ದೇಸಾಯಿ,ಗೀತಾ ಅಮ್ಮಿನಗಡ,ಶೈಲಜಾ ಹಿರೇಮಠ
ಪತ್ರಿಕಾಗೋಷ್ಟಿಯಲ್ಲಿ
ಇದ್ದರು.