ಅನೀಲ ಕೃಷ್ಣಾ ಮೇತ್ರಿ ರವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸಂಗೀತ ವಿಷಯದಲ್ಲಿ ಪಿಹೆಚ್.ಡಿ ಪದವಿ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದಲ್ಲಿ ಸಹಾಯಕ ಬೋಧಕರೆಂದು ಕಾರ್ಯನಿರ್ವಹಿಸುತ್ತಿರುವ ಮೇತ್ರಿ ಅನೀಲ ಕೃಷ್ಣಾ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡವು “ಭಾರತೀಯ ಸಂಗೀತ ಕ್ಷೇತ್ರದಲ್ಲಿ ಚರ್ಮವಾದ್ಯಗಳ ಪಾತ್ರ” : ಒಂದು ಅಧ್ಯಯನ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್.ಡಿ ಪದವಿಯನ್ನು ನೀಡಿದೆ. ಇವರಿಗೆ ಡಾ. ಶ್ರೀಮತಿ ಮೀರಾ ಶಿವಶಂಕರ ಗುಂಡಿ ರವರು ಸಂಶೋಧನಾ ಮಾರ್ಗದರ್ಶಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಗಾಂಧಿ ಭವನದಲ್ಲಿ ನಡೆದ ೭೩ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಪದವಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ, ಇಂಡೋ ಫ್ರೆಂಚ್ ಸೆಂಟರ್ ಫಾರ್ ಪ್ರಮೋಷನ್ ಆಫ್ ಅಡ್ವಾನ್ಸ ರಿಸರ್ಚ, ನವದೆಹಲಿಯ ನಿರ್ದೇಶಕರಾದ ಪ್ರೊ. ನಿತೀನ ಶೇಠ್, ಕುಲಪತಿಗಳಾದ ಪ್ರೊ ಕೆ.ಜಿ. ಗುಡಸಿ, ಕುಲಸಚಿವರಾದ ಪ್ರೊ. ಎಮ್. ಚಂದ್ರಮ್ಮ. ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ, ಸಿ, ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಅನೀಲ ಕೃಷ್ಣಾ ಮೇತ್ರಿ ರವರು ಸಂಗೀತ ಕ್ಷೇತ್ರದಲ್ಲಿ ತಬಲಾವಾದಕರಾಗಿ, ಸಂಘಟಕರಾಗಿ ರಾಜ್ಯ, ಹೊರರಾಜ್ಯ, ದೇಶ- ವಿದೇಶಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಇವರು ಆಕಾಶವಾಣಿ ಹಾಗೂ ದೂರದರ್ಶನದ “ಬಿ-ಹೈ” ಗ್ರೇಡ್ ಕಲಾವಿದರಾಗಿ ತಮ್ಮ ಸಂಗೀತ ಹಾಗೂ ವಾದನದ ಸೇವೆಯನ್ನು ಮುಂದುವರೆಸಿದ್ದಾರೆ.