ರಾಜೀವ್ ದೀಕ್ಷಿತ್ ವಿಚಾರ ವೇದಿಕೆಯಿಂದ ರಾಷ್ಟ್ರ ಬಂಧು ರಾಜೀವ್ ದೀಕ್ಷಿತರ ಜಯಂತಿ ನಿಮಿತ್ತ ರಾಷ್ಟ್ರೀಯ ಸ್ವದೇಶಿ ದಿನಾಚರಣೆ ಕಾರ್ಯಕ್ರಮ 30 ರಂದು .
ಧಾರವಾಡ 28 :
ರಾಜೀವ್ ದೀಕ್ಷಿತರ 56ನೆಯ ಜಯಂತ್ಯೋತ್ಸವ ಮತ್ತು 13ನೆಯ ಪುಣ್ಯ ಸ್ಮರಣೆ ನಿಮಿತ್ತ ರಾಷ್ಟ್ರೀಯ ಸ್ವದೇಶಿ ದಿನಾಚರಣೆಯನ್ನು ಧಾರವಾಡದ ಸರಕಾರಿ ನೌಕರರ ಭವನದಲ್ಲಿ ರಚನಾತ್ಮಕವಾಗಿ ಮತ್ತು ಸಮಾಜಮುಖಿಯಾಗಿ ಆಚರಿಸಲು ರಾಜೀವ್ ದೀಕ್ಷಿತ್ ವಿಚಾರ ವೇದಿಕೆ ಹಲವು ಕಾರ್ಯಕ್ರಮಗಳನ್ನು 30 ರಂದು
ಗುರುವಾರ ಬೆಳಗಿನ 9.30 ಗಂಟೆಯಿಂದ ಹಮ್ಮಿಕೊಂಡಿದೆ.
ಎಂದು ಎಂ ಡಿ ಪಾಟೀಲ ತಿಳಸಿದರು , ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಕರ್ನಾಟಕದ ಮನ ಮಾತಾಗಿರುವ ಮತ್ತು ಖ್ಯಾತ ಪಾರಂಪರಿಕ ವೈದ್ಯರೂ ಆಗಿರುವ ಹಾಗೂ ಸಾವಿರಾರು ರೋಗಿಗಳ ಆಶಾಕಿರಣವಾಗಿರುವ ಮತ್ತು ಯಾವುದೇ ಪ್ರಬಲ ಕಾಯಿಲೆಗಳನ್ನು ಪಾರಂಪರಿಕ ವೈದ್ಯ ಪದ್ಧತಿ, ಆಯುರ್ವೇದ ಮತ್ತು ಭಾರತೀಯ ಗೋ ಆಧಾರಿತ ಚಿಕಿತ್ಸಾ ಕ್ರಮದಿಂದ ದೂರ ಮಾಡಿ ಉತ್ತಮ ಆರೋಗ್ಯ ನೀಡುತ್ತಿರುವ ಹನುಮಂತ ಮಳಲಿ ಇವರು "ಪ್ರತಿ ಮನೆಗೂ ಆಯುರ್ವೇದ ಜ್ಞಾನ ಮತ್ತು ಪುತಿಯೊಬ್ಬರಿಗೂ ಆರೋಗ್ಯ ಭಾಗ್ಯ' ಎಂಬ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.
ಎಂದರು.
ಇಂದು ಪ್ರತಿಯೊಬ್ಬರೂ ಒಂದಿಲ್ಲೊಂದು ಕ್ಷುಲ್ಲಕ ಕಾರಣಗಳಿಂದಾಗಿ ತಮ್ಮ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ ಅದಕ್ಕಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ ಅದರಿಂದ ಮಾನಸಿಕ ಮತ್ತು ಕೌಟುಂಬಿಕ ನಮ್ಮದಿ ಕಳೆದುಕೊಳ್ಳುತ್ತಿದ್ದಾರೆ ಉತ್ತಮ ಆರೋಗ್ಯ ಒಂದೇ ಇದಕ್ಕೆ ತಕ್ಕ ಉತ್ತರ ಹಾಗೂ ಪ್ರತಿಯೊಬ್ಬರೂ ಆಯುರ್ವೇದ ವಿಜ್ಞಾನ ಮತ್ತು ತಂತ್ರಗಳನ್ನು ತಿಳಿದುಕೊಳ್ಳುವುದೇ ಒಂದು ಅತ್ಯುತ್ತಮ ಮಾರ್ಗ, ಆ ನಿಟ್ಟಿನಲ್ಲಿ ರಾಜೀವ್ ದೀಕ್ಷಿತ್ ವಿಚಾರ ವೇದಿಕೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆಸಕ್ತ ಎಲ್ಲಾ ಸ್ವದೇಶಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಮೂಲಕ ವಿನಂತಿಸಲಾಗಿದೆ. ಗಾಣದ ಎಣ್ಣೆ ತಯಾರಿಕೆ, ಸಾವಯವ ಕೃಷಿ ವಸ್ತುಗಳ ಉತ್ಪಾದನೆ, ಸ್ವದೇಶಿ ಮತ್ತು ಗೃಹ ಕೈಗಾರಿಕ ವಸ್ತುಗಳ ಉತ್ಪಾದನೆ ಮತ್ತು ಅವುಗಳ ಗುಣಮಟ್ಟ ಹೆಚ್ಚಿಸಿ ಅವುಗಳ ಮಾರಾಟ, ಪ್ಲಾಸ್ಟಿಕ್ ಬಳಕೆಗೆ ಪರ್ಯಾಯ ಪ್ರತಿಯೊಂದು ಮನೆಗೆ ಯೋಗ ಆಯುರ್ವೇದ, ನೆಲ ಜಲ ವಾಯುಗಳ ರಕ್ಷಣೆಗೆ ಆದ್ಯತೆ, ಗುರುಕುಲ ಶಿಕ್ಷಣ ಪದ್ಧತಿ ಮರುಸ್ಮಾಪನ ಮುಂತಾದ ವಿಷಯಗಳನ್ನು ತೆಗೆದುಕೊಂಡು ರಾಜೀವ್ ದೀಕ್ಷಿತ್ ವಿಚಾರ ವೇದಿಕೆ ಕೆಲಸ ಮಾಡುತ್ತಿದೆ. ಈ ಯಾವುದೇ ವಿಷಯದಲ್ಲಿ ಆಸಕ್ತರು ಕೈಜೋಡಿಸಲು ಸಂಘಟನೆಯ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು. ಮುಖ್ಯ ಅತಿಥಿಗಳಾಗಿ ಭವರಲಾಲ್ ಆರ್ಯ ಮತ್ತು .ಮಂಜುನಾಥ ಬಗಾಡ ಇವರು ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ
ದ್ಯಾಮಣ್ಣ ಚವ್ಹಾಣ, ಮಂಜುನಾಥ ಎಡಳ್ಳಿ, ಶಿವಾನಂದ ಕುಂಭಾರ, ರಾಜೀವ ಮಾಡಿಕರ ಪತ್ರಿಕಾಗೋಷ್ಟಿಯಲ್ಲಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891