ಜಿಲ್ಲಾ ಆಸ್ಪತ್ರೆ ಸ್ಥಳಾಂತರಿಸಲು ಪರಿಶೀಲನೆ -- ಜಿಲ್ಲಾಧಿಕಾರಿಗಳು ಗುರುದತ್ತ ಹೆಗಡೆ

ಜಿಲ್ಲಾ ಆಸ್ಪತ್ರೆ ಸ್ಥಳಾಂತರಿಸಲು ಪರಿಶೀಲನೆ -- ಜಿಲ್ಲಾಧಿಕಾರಿಗಳ ಗುರುದತ್ತ ಹೆಗಡೆ
   
     ಧಾರವಾಡ 29 :
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಾವ೯ಜನಿಕರ ಒತ್ತಡ ಹೆಚ್ಚಾಗುತ್ತದೆ, ಸುಗಮ ಸಂಚಾರಕ್ಕೂ ತೊಂದರೆ ಉಂಟಾಗುತ್ತದೆ ಈ ಜಿಲ್ಲಾ ಆಸ್ಪತ್ರೆಯನ್ನು ಬೇರೆ ಕಡೆ ಸ್ಥಳಾತರಿಸಲು ಪರಿಶೀಲನೆ ನಡೆಸಿದ್ದೆವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
   ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಿರುವ ಆಸ್ಪತ್ರೆಯ ಕಟ್ಟಡ ಚಿಕ್ಕದಾಗಿದೆ, ಪ್ರತಿದಿನ ಸಾವಿರಾರು ಜನರು ವಿವಿಧ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಿದ್ದಾರೆ ಜನದೊತ್ತಡ ಹೆಚ್ಚಾಗುತ್ತಿದೆ ಎಂದರು.
     ಈ ಎಲ್ಲಾ ಕಾರಣಗಳಿಂದ ಸರಕಾರದ ನಿಧೇ೯ಶನದಂತೆ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಶಹರಮಟ್ಟದಲ್ಲಿಯೇ 15 ರಿಂದ 20 ಎಕರೆ ಸರಕಾರಿ ಜಾಗೆ ಗುರುತಿಸುವ ನಿಟ್ಟಿನಲ್ಲಿ ಸರಕಾರ ಕಾಯ೯ನಿರತವಾಗಿದೆ ಎಂದರು.
     ರಾಜ್ಯದ ಆರೋಗ್ಯ ಸಚಿವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದಭ೯ದಲ್ಲಿ ಈ ಕುರಿತು ನಿದೇ೯ಶನ ನೀಡಿದ್ದಾರೆ ಎಂದರು.
     ಕಂದಾಯ ಇಲಾಖೆಯಲ್ಲಿ ರಾಜ್ಯದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೆಗೌಡ ಅವರ ಆದೇಶದಂತೆ ಮೂಟೆಶನ್, ನ್ಯಾಯಾಲಯ ಪ್ರಕರಣ, ಭೂಮಿ ತತ್ರಾಂಶ, ಪೊಡಿ ಪ್ರಕರಣ, ಈ ಕಚೇರಿ, ಭೂ ಸವೆ೯ ಮುಂತಾದ ಸಾಕಷ್ಟು ಬದಲಾವಣೆಗಳನ್ನು ಕಳೆದ ಆರು ತಿಂಗಳಲ್ಲಿ ಜಾರಿಗೆ ತರಲಾಗಿದೆ ಎಂದರು.

     ಕಂದಾಯ ಇಲಾಖೆಗೆ ಸಂಬಂಧಿಸಿದ   ನ್ಯಾಯಾಲಯಗಳ ಪ್ರಕರಣ ಶೀಘ್ರವೇ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಮೂರು ತಿಂಗಳಲ್ಲಿ ಪ್ರಕರಣ ವಿಲೇವಾರಿ  ಮಾಡಲಾಗುತ್ತಿದ್ದೆವೆ ಹಾಗೂ ಪ್ರಕರಣ 
ಯಾವ ಸ್ಟಜ್ ನಲ್ಲಿದೆ ಎನ್ನುವದಕ್ಕೊಸಂಬಂಧಿಸಿದವರಿಗೆ ಎಸ್.ಎಮ್.ಎಸ್ ಮೆಸೇಜ್ ಹೋಗುತ್ತಿದೆ.
   ಭೂಮಿ ತಂತ್ರಾಂಶ ಅಳವಡಿಸಿದ್ದೆವೆ.ಸರಕಾರಿ ಜಾಗ ಗುರುತ್ತಿಸಲು ಅನುಕೂಲ.ವಾಗುತ್ತಿದೆ.ಪಿ.ಟಿ.ಸಿ ಬೂಮಿ ಗುರುತಿಸುವ ಕೆಲಸ ಆರಂಭಿಸಲಾಗಿದೆ.
   ಇ - ಆಫೀಸ್ ತಂತ್ರಾಂಶ  ಸರ್ಕಾರದ ಮಾರ್ಗಸೂಚಿಯನ್ವಯ ಧಾರವಾಡ ಜಿಲ್ಲೆಯ ಕಂದಾಯ ಇಲಾಖೆಯ ಎಲ್ಲ ಅಧೀನ ಕಛೇರಿಗಳಲ್ಲಿ ಇ - ಆಫೀಸ್ ತಂತ್ರಾಂಶವನ್ನು ಅಳವಡಿಸಿಕೊಂಡು ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲು ನಿರ್ದೇಶನ ಮಾಡಲಾಗಿದೆ ಅದರಂತೆ ಧಾರವಾಡ ಜಿಲ್ಲೆಯ ಕಂದಾಯ ಇಲಾಖೆಯ ಅಧೀನ ಕಛೇರಿಗಳಲ್ಲಿ ಇ ಆಫೀಸ್ ತಂತ್ರಾಂಶದಲ್ಲಿ ಅರ್ಜಿಗಳ ವಿಲೇವಾರಿಯನ್ನು ಮಾಡುತ್ತಿರುತ್ತದೆ .  ಪುತಿಯೊಂದು ಕಛೇರಿಯಲ್ಲಿ 2 ಜನ ಮಾಸ್ಟರ್ ಟ್ರೆನರ್ ಅಂತಾ ನೇಮಕಗೊಳಿಸಿದ ಅವರಿಗೆ ಅವಶ್ಯಕ ತರಬೇತಿ ನೀಡಿ ಅವರಿಂದೆ ಇ - ಆಫೀಸ್ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
   ಕಳೆದ 6 ತಿಂಗಳಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ 27 ಸಾವಿರ ಕಡತಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಲಾಗಿರುತ್ತದೆ . ಅದರಂತೆ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಕಳೆದ 3 ತಿಂಗಳಿಂದ ಕಡತಗಳನ್ನು ವಿಲೇವಾರಿ ಮಾಡಿರುತ್ತದೆ . 
  ಅದರಂತೆ ಜಿಲ್ಲೆಯ ಎಲ್ಲ 8 ತಹಶೀಲದಾರ ಕಾರ್ಯಾಲಯಗಳಲ್ಲಿ  ಅರ್ಜಿಗಳನ್ನು ವಿಲೇವಾರಿ ಮಾಡಿ ಜಿಲ್ಲೆಯಲ್ಲಿ ಒಟ್ಟು 29,713 ಕಡತಗಳನ್ನು ವಿಲೇವಾರಿ ಮಾಡಿರುತ್ತದೆ ಎಂದ ಅವರು   ಇ - ಆಫೀಸ್ ತಂತ್ರಾಂಶದಿಂದ ಸಾವ೯ಜನಿಕರು ತಮ್ಮ ಕಡತ ಯಾವ ಹಂತದಲ್ಲದೆ ಎನ್ನುವದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದರು.          ಪೊಡಿ ಪ್ರಕರಣದಲ್ಲಿ ಮೂರು ಸಾವಿರ ಅಜಿ೯ಗಳನ್ನು ಮೂರೆ ತಿಂಗಳಲ್ಲಿ ವಿಲೇವಾರಿ   ಮಾಡಲಾಗಿದೆ.  ಸವೆ೯ ಕಾಯ೯ ಕೇವಲ ಎರಡೇ ತಿಂಗಳಲ್ಲಿ ಮಾಡಿದ್ಸೆವೆ,ಜಿಲ್ಲೆಯಲ್ಲಿ ಒಟ್ಟು 18 ಹೊಸ ಕಂದಾಯ ಗ್ರಾಮಗಳಿದ್ದು ಅವುಗಳಲ್ಲಿ 10 ಗ್ರಾಮಗಳಿಗೆ ಅಂತಿಮ ಆಧಿಸೂಚನೆ ಹೊರಡಿಸಿದ್ದೆವೆ   ಒಟ್ಟು 18 ನೂರಕ್ಕು ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು

        ಮಧ್ಯತರ ಬೆಳೆ ವಿಮೆ 31 ಕೋಟಿ ರೂ.ಗಳು ಬಿಡುಗಡೆಯಾಗಿದ್ದು ಇದನ್ನು ರೈತರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

   ಗ್ರಹ ಲಕ್ಷ್ಮಿ, ಅನ್ನ ಭಾಗ್ಯದ  ಹಣ ಬರದೆ ಇದ್ದವರು ತಾಲೂಕ ಕಚೇರಿಯಲ್ಲಿ ಸಂಪಕಿ೯ಸಲು ಕೊರಿದರು.


ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891
ನವೀನ ಹಳೆಯದು

نموذج الاتصال