ಬಿ ಎಲ್ ಓ ಆತ್ಮಹತ್ಯೆಗೆ ಯತ್ನ, ಚುನಾವಣಾ ಅಧಿಕಾರಿಯ ಅಮಾನವೀಯ ವರ್ತನೆಗೆ ಖಂಡನೆ, ಅಮಾನತ್ತಿಗೆ ಆಗ್ರಹ.

ಬಿ ಎಲ್ ಓ ಆತ್ಮಹತ್ಯೆಗೆ ಯತ್ನ, ಚುನಾವಣಾ ಅಧಿಕಾರಿಯ ಅಮಾನವೀಯ ವರ್ತನೆಗೆ ಖಂಡನೆ, ಅಮಾನತ್ತಿಗೆ ಆಗ್ರಹ.
ಧಾರವಾಡ 21 : 
ಬಿ ಎಲ್ ಓ ಆತ್ಮಹತ್ಯೆಗೆ ಯತ್ನ, ಚುನಾವಣಾ ಅಧಿಕಾರಿಯ ಅಮಾನವೀಯ ವರ್ತನೆಗೆ ಖಂಡನೆ, ಅಮಾನತ್ತಿಗೆ ಆಗ್ರಹಸಿದ ಕೆ ಪಿ ಸಿ ಸಿ ಸದಸ್ಯ ರಾಬರ್ಟ ದದ್ದಾಪುರಿ , ಪತ್ರಿಕಕಗೋಷ್ಟಿಯಲ್ಲಿ ಮಾತನಾಡಿದ ಅವರು 
ಮುಖ್ಯವಾಗಿ ಕವಿವಿ ಪಾವಟೆ ನಗರ ಧಾರವಾಡ ಇಲ್ಲಿಯ ಶಿಕ್ಷಕೇತರ ಸಿಬ್ಬಂದಿಯ ಕೊರತೆಯು ಇದ್ದು ಅವರನ್ನು ಬಿಎಲ್‌ಓ ಕಾರ್ಯಕ್ಕೆ ನಿಯೋಜನೆ ಮಾಡದಿರಲು ಕವಿವಿಯ ಮಾನ್ಯ ಕುಲಸಚಿವರು (ಆಡಳಿತ), ಮಾನ್ಯ ಜಿಲ್ಲಾಧಿಕಾರಿಗಳಿಗೆ ದಿನಾಂಕ 4-11-2020, 22-2-2021, 17-9-2021, 26-8-2021 ಹಾಗೂ 18-7-2022ರಂದು ಲಿಖಿತದಲ್ಲಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟದ್ದು  ಇದೆ. ಈ ಮನವಿಯನ್ನೂ ಸಹ ಮಾನ್ಯ ಧಾರವಾಡ ಜಿಲ್ಲಾಡಳಿತವು ಪರಿಗಣಿಸದಿರುವುದು ಜಿಲ್ಲಾಡಳಿತಕ್ಕೆ ವಿದ್ಯಾರ್ಥಿ ಸಮುದಾಯದ ಭವಿಷ್ಯದ ಕಾಳಜಿ ಇಲ್ಲದಿರುವುದು ಎದ್ದು ಕಾಣುತ್ತದೆ ಎಂದರು 
ಕವಿವಿಯ ಶಿಕ್ಷಕೇತರ ನಾವು 2022ರಿಂದಲೂ ಮನ್ಯ ಜಿಲ್ಲಾಧಿಕಾರಿಗಳಿಗೆ ಕವಿವಿಯ ಶಿಕ್ಷಕೇತರ ಕೊರತೆ ಸಿಬ್ಬಂದಿಯನ್ನು ಬಿಎಲ್‌ಓ ಕಾರ್ಯಕ್ಕೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಯೋಜನೆ ಮಾಡದಿರಲು ಪ್ರಾರ್ಥಿಸಿದ್ದು, ಮನವಿ ಮಾಡಿದ್ದು ಮತ್ತು ಆಮರಣ ಉಪವಾಸ ಕುಳಿತುಕೊಂಡು ಒತ್ತಾಸಿದ್ದೂ ಇದೆ. ಕವಿವಿಯ ಕುಲಸಚಿವರು (ಆಡಳಿತ) ಇವರೂ ಕವಿವಿಯ ಶಿಕ್ಷಕೇತರ ಕೊರತೆ ಸಿಬ್ಬಂದಿಯಿಂದ ಉಂಟಾಗುವ ಆಡಳಿತಾತ್ಮಕ ತೊಂದರೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ 2020ರಿಂದ ಮೊದಲುಗೊಂಡು 2022ರ ವರೆಗೂ ಲಿಖಿತದಲ್ಲಿ ತಿಳಿದ್ದರೂ ಸಹ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯದಿಂದ ನ್ಯಾಯವು ದೊರಕಿರುವುದಿಲ್ಲ. ವಿದ್ಯಾಕಾಶಿ ಎಂದು ಹೆಸರು ಪಡೆದ ವಿದ್ಯಾ ಮಂದಿರ ಧಾರವಾಡದ ಸ್ಥಿತಿ ಇಂದು ಶಿಕ್ಷಕೇತರರ ಕೊರತೆ ಸಿಬ್ಬಂದಿಯಿಂದಾಗಿ ಅಯೋಮಯವಾಗಿದೆ ಎಂದರು  ದಿ 18 ರ ಶನಿವಾರದಂದು ಚುನಾವಣಾ ಅಧಿಕಾರಿಗಳ ಮಾನಸಿಕ ಹಿಂಸೆ, ದಬ್ಬಾಳಿಕೆ, ನಿಂದನೆ, ಅಸಂಸ್ಕೃತಿಕ ನಡಾವಳಿಗಳು, ಮೈಮೇಲೆ ಏರಿಹೊಗುವ ಪ್ರವೃತ್ತಿ, ಸಸ್ಪೆಂಡ್ ಮಾಡುವ ಧಮಕಿ ಮತ್ತು ವಜಾ ಮಾಡುವ ಬೆದರಿಕೆ ಇವುಗಳಿಂದ ಮಾನಸಿಕ ಆಘಾತಕ್ಕೆ ಒಳಗಾದ ಕವಿವಿಯ ಘಟಕ ಮಹಾವಿದ್ಯಾಲಯವಾದ ಕರ್ನಾಟಕ ವಿಜ್ಞಾನ ಕಿರಿಯ ಸಹಾಯಕ ಸಹಾಯಕರಾದ ಆತ್ಮಾನಂದ ಬಡಿಗೇರ ಇವರು ವಿಷವನ್ನು ಸೆವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇದೆ,ಇಲ್ಲಿ ಗಮನಿಸಬೇಕಾದ ವಾಸ್ತವವೆಂದರೆ ಸದರಿ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿಯು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಂದು ವಿದ್ಯಾರ್ಥಿಗಳ ಪ್ರವೇಶಾತಿಯ ಪ್ರಕ್ರಿಯೆಯಲ್ಲಿ ಇದ್ದದ್ದು ,ಸದರಿ ಪ್ರವೇಶಾತಿಯ ಪ್ರಕ್ರಿಯೆಯನ್ನು ಅವರು ಮುಗಿಸಿಕೊಂಡು ನಂತರ ಹು-ಧಾ ಮಹಾನಗರ ಪಾಲಿಕೆಯ ಸಂಬಂಧಿತ ಚುನಾವಣಾ ಅಧಿಕಾರಿಗಳ ಕಚೇರಿಗೆ ಹಾಜರಾಗಿದ್ದು ಇದೆ. ಪ್ರಸಕ್ತ ಅವರು ಖಾಸಗಿ ಆಸ್ಪತ್ರೆ ಧಾರವಾಡದಲ್ಲಿ ಐಸಿಯುನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆಸ್ಪತ್ರೆಗೆ ರವಿವಾರ ಜಿಲ್ಲಾಧಿಕಾರಿಗಳು ಮತ್ತು ಅವರ ಅಧೀನ ಸಿಬ್ಬಂದಿ ಸದರಿ ಆಸ್ಪತ್ರೆಗೆ ಭೆಟ್ಟಿಯಾಗಿದ್ದೂ ಇದೆ.  ಆತ್ಮಾನಂದ ಬಡಿಗೇರ ಅವರಿಗೆ ಈ ರೀತಿ ಅಸಂವಿಧಾನಾತ್ಮಕ ರೀತಿಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣಾ ಸಂಬಂಧಿತ ಅಧಿಕಾರಿಯು ಅಪರಿಮಿತ ತೊಂದರೆಯನ್ನು ನೀಡಿದ್ದು ಇದ್ದು, ಈ ಕೂಡಲೆ ಸದರಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಮತ್ತು ಆತ್ಮಾನಂದ ಬಡಿಗೇರ ಅವರ ಆಸ್ಪತ್ರೆಯ ಖರ್ಚನ್ನು ಜಿಲ್ಲಾಡಳಿತವು ಈ ಕೂಡಲೇ ಭರಿಸಬೇಕು. ಹಾಗೂ ಕವಿವಿಯ ಶಿಕ್ಷಕೇತರ ಕೊರತೆ ಸಿಬ್ಬಂದಿಯನ್ನು ಬಿಎಲ್‌ಓ ಕಾರ್ಯದಿಂದ ತಕ್ಷಣವೇ ಬಿಡುಗಡೆಗೊಳಿಸಬೇಕು. ಯಾವುದೇ ಕಾರಣಕ್ಕೂ ಜಿಲ್ಲಾಡಳಿತದ ವಿಳಂಬ ನೀತಿಯನ್ನು ಇನ್ನು ಮುಂದೆ ನಾವು ನಿರೀಕ್ಷಿಸುವುದಿಲ್ಲ. ನಮ್ಮ ನ್ಯಾಯುತ ಬೇಡಿಕೆಗಳನ್ನು ತಕ್ಷಣ ಜಿಲ್ಲಾಡಳಿತವು ಈಡೇರಿಸದಿದ್ದರೆ ನಮ್ಮ ಹೋರಾಟವು ನ್ಯಾಯಕ್ಕಾಗಿ ಮುಂದುವರೆಯುತ್ತದೆ. ಮತ್ತು ಆತ್ಮಹತ್ಯೆಗೆ ಯತ್ನಿಸಿದ ನೌಕರನ ಜೀವಕ್ಕೆ ಹಾನಿಯಾದರೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ. ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ ಎಂದು ಹೇಳಿದರು.

ಉಮೇಶ ಸವಣೂರ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಅಧಿಕಾರಿಯ  ಕಿರುಕಳಕ್ಕೆ ಬೇಸತ್ತು ನನ್ನ ಅಳಿಯ ವಿಷಪ್ರಾಶನ ಮಾಡಿ ಸಾವು ಬದುಕಿನ ನಡುವೆ ಇಂದಿಗೆ  ನಾಲ್ಕನೆಯ ದಿನ ಎಂದು 
ನಿಂಗಪ್ಪ ಪರಪ್ಪ ಎಲಿಗಾರ  ಅವರು ಹೇಳಿದರು.

ಕಾಂಗ್ರೆಸ ಪಕ್ಷದ ಜಿಲ್ಲಾ ಪರಿಶಿಷ್ಟ ಜಾತಿಯ ಪ್ರಧಾನ ಕಾರ್ಯದರ್ಶಿ
ಪ್ರಕಾಶ  ದೂಡವಾಡ 
ಪರಿಶಿಷ್ಟ ಜಾತಿಯ ಕಾರ್ಯದರ್ಶಿ
ಬಿ. ಏಚ್. ಪೂಜಾರ 
ಸತೀಶ ಗಿರಿಯಣ್ಣವರ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891
ನವೀನ ಹಳೆಯದು

نموذج الاتصال