ದೀಪಾವಳಿ ಉತ್ಸವ
ಸರಸ್ವತಿ ಜ್ಞಾನ ಮಹಿಳಾ ಮಂಡಳ ಉದ್ಘಾಟನೆ
ಧಾರವಾಡ : ಸಮಾಜದಲ್ಲಿ ಮಹಿಳೆಯರ ಸೇವೆ ಅನನ್ಯವಾಗಿದ್ದು, ಪ್ರೀತಿ, ಒಗ್ಗಟ್ಟೇ ಮಹಿಳೆಯರ ಶಕ್ತಿ ಎಂದು ಕರ್ನಾಟಕ ಚಲನಚಿತ್ರೋದ್ಯಮ ಕ್ಷೇಮಾಭಿವೃದ್ದಿ ಸಂಸ್ಥೆಯ ಅಧ್ಯಕ್ಷರಾದ ನಟ, ನಿರ್ಮಾಪಕ ಡಾ.ಕಲ್ಮೇಶ ಹಾವೇರಿಪೇಟ್ ಹೇಳಿದರು.
ಇಲ್ಲಿಯ ಮುರುಘಾಮಠದ ಹೊಸ ಎಪಿಎಂಸಿ ಬಳಿಯ ಮಟ್ಟಿಪ್ಲಾಟ್‌ನಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಉತ್ಸವ ಹಾಗೂ ಸರಸ್ವತಿ ಜ್ಞಾನ ಮಹಿಳಾ ಮಂಡಳವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ತೊಟ್ಟಿಲು ತೂಗುವ ಕೈ ಜಗತ್ತೇ ತೂಗಬಹುದು. ಈಗಂತೂ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತೊಡಗಿಕೊಂಡಿದಲ್ಲದೇ ಆ ಕ್ಷೇತ್ರಗಳಲ್ಲಿ ಸೈ ಅನ್ನಿಸಿಕೊಂಡಿದ್ದಾರೆ. ಜೀವನದಲ್ಲಿ ಸಾಽಸಬೇಕಾದರೆ ಕಷ್ಟಪಡಲೇಬೇಕು. ಬದುಕಿನಲ್ಲಿ ಬರುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಮಹಿಳೆಯರು ಒಗ್ಗಟ್ಟಿನಿಂದ ಪರಸ್ಪರ ಏಳ್ಗೆಗೆ ಕೈ ಜೋಡಿಸಬೇಕು. ಮಹಿಳೆಯರ ಏಳ್ಗೆಗಾಗಿ ಅಸ್ತಿತ್ವಕ್ಕೆ ಬಂದಿರುವ ಮಹಿಳಾ ಮಂಡಳಕ್ಕೆ ಬೇಕಾದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಹಿಳಾ ಮಂಡಳದ ಹೆಸರು ಅನಾವರಣಗೊಳಿಸಿದ ಕಲಾಸಂಗಮ ಸಂಸ್ಥೆಯ ಅಧ್ಯಕ್ಷ ಪ್ರಭು ಹಂಚಿನಾಳ ಮಾನಾಡಿ, ಮಹಿಳೆಯರ ಒಗ್ಗಟ್ಟಿನಲ್ಲಿಯೇ ಬಲವಿದೆ. ಕೂಡಿ ಬಾಳಿದರೇ ಸ್ವರ್ಗ ಸುಖ ಎಂಬ ಸತ್ಯ ಅರಿತು ಮಹಿಳೆಯರ ಉನ್ನತಿಗಾಗಿ ಮಹಿಳಾ ಮಂಡಳ ಅಸ್ತಿತ್ವಕ್ಕೆ ಬಂದಿರುವುದು ಖುಷಿ ಕೊಟ್ಟಿದೆ. ಮಹಿಳೆಯರು ಬರೀ ಅಡುಗೆ ಮನೆಗೆ ಅಷ್ಟೇ ಸೀಮಿತಗೊಳ್ಳದೇ ಸಮಾಜದ ಉನ್ನತಿಗೆ ಕೊಡುಗೆ
ನೀಡಬೇಕು ಎಂದರು.
ಮಟ್ಟಿ ಪ್ಲಾಟ್‌ನ ಹಿರಿಯರಾದ ಶರಣಪ್ಪ ಮಡಿವಾಳರ, ಯೋಧ ರಮೇಶ ಜಟ್ಟೆನ್ನವರ ಮಾತನಾಡಿದರು. ನೇಹಾ ನಾಗರಾಜ ಬುದ್ನಿ ಅಧ್ಯಕ್ಷತೆವಹಿಸಿದ್ದರು. ಇದೇ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ದೀಪಾವಳಿ ಉತ್ಸವದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ದ್ರಾಕ್ಷಾಯಣಿ ಬುದ್ನಿ ಹಾಗೂ ರತ್ನಾ ಕಲಾಲ ಅವರು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಸುನಂದಾ ಹಿರೇಮಠ, ಶಿವಗಂಗವ್ವ ಬುದ್ನಿ, ಕಸ್ತೂರಿ ಮಲ್ಲಿಗವಾಡ, ವಿಜಯಲಕ್ಷ್ಮೀ ಕುದರಿ, ವಿದ್ಯಾ ಮಟ್ಟಿ ಸೇರಿದಂತೆ ಮಂಡಳದ ಸದಸ್ಯೆಯರು ಪಾಲ್ಗೊಂಡಿದ್ದರು. ಜ್ಯೋತಿ ತಿಮ್ಮಾಪೂರ ಪ್ರಾರ್ಥಿಸಿದರು. ದೀಪಾ ಬುದ್ನಿ ಸ್ವಾಗತಿಸಿದರು. ಸರೋಜಾ ಮಡಿವಾಳರ ನಿರೂಪಿಸಿದರು. ಸಹನಾ ದಂಡಿದಾಸ ಹಾಗೂ ಕಾದಂಬರಿ ಕಲಾಲ ಅತಿಥಿಗಳನ್ನು ಪರಿಚಯಿಸಿದರು. ಸಹನಾ ದಂಡಿದಾಸ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891