ವಿಜ್ಞಾನಿಗಳ ನಿಜ ಜೀವನ ಆಧಾರಿತ ನಾಟಕೋತ್ಸವ 16 ರಿಂದ 19 ರ ವರೆಗೆ.

ವಿಜ್ಞಾನಿಗಳ ನಿಜ ಜೀವನ ಆಧಾರಿತ ನಾಟಕೋತ್ಸವ 16 ರಿಂದ 19 ರ ವರೆಗೆ.
ಧಾರವಾಡ 10 : 
ಧಾರವಾಡ ರೋಟರಿ  ಧಾರವಾಡ  ಸೆಂಟ್ರಲ್  ಮತ್ತು  ಪ್ರಸಿದ್ಧ ಹವ್ಯಾಸಿ ರಂಗ ಸಂಸ್ಥೆಯಾದ  ಅಭಿನಯ ಭಾರತಿ  30 ವರ್ಷಗಳ  ನಂತರ  ಜಂಟಿಯಾಗಿ ನಾಲ್ಕು ದಿನಗಳ  ವಿಶೇಷ  ವಿಜ್ಞಾನ ನಾಟಕೋತ್ಸವ ಇದೇ ನವೆಂಬರ್ ತಿಂಗಳು 16,17, 18 ಮತ್ತು 19 ರಂದು  ಸಂಜೆ 5.30ಕ್ಕೆ ಕೆ. ಸಿ. ಡಿ ಆವರಣದಲ್ಲಿ ಇರುವ ಸ್ರಜನಾ  ರಂಗ ಮಂದಿರದಲ್ಲಿ  ಸಂಘಟಿಸುತ್ತಿವೆ ಎಂದು
 ರೋಟರಿ ಅಧ್ಯಕ್ಷ ಸುನೀಲ ಬಾಗೇವಾಡಿ  ತಿಳಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 
 ಈ ಉತ್ಸವದ  ವಿಶೇಷ ವೆಂದರೆ  ವಿಜ್ಞಾನಿಗಳ ನಿಜ ಜೀವನ, ಅವರ ಕಷ್ಟಗಳು, ವೈಯಕ್ತಿಕ ಬದುಕುಗಳ  ವೈರುಧ್ಯಗಳಲ್ಲಿ ಸಹ ಅವರು  ಮನುಕುಲದ ಉಳಿವಿಗಾಗಿ, ಅಭ್ಯಾದಯಕ್ಕಾಗಿ ಅವರು ತಮ್ಮ ಸಂಶೋಧನೆಯ ಪ್ರಯತ್ನಗಳು  ಎಲ್ಲವನ್ನು ಬಯೋಪಿಕ್ ಚೌಕಟ್ಟಿನಲ್ಲಿ ಶೈಕ್ಷಣಿಕ ಮನೋರಂಜನೆ  ಮತ್ತು ಪ್ರೇಮ ರೋಗರುಜಿನ ಸಂಘರ್ಷಗಳ  ಯಥಾವತ್ತಾದ ನಿರೂಪಣೆ ತೋರಿಸುತ್ತ ಸ್ಫೂರ್ತಿ ಪ್ರೇರಣೆಗಳ ಬುನಾದಿಯನ್ನು ಪಾಲಕರಲ್ಲಿ ಯುವ ಸಮುದಾಯದಲ್ಲಿ  ತುಂಬುವದು ರಂಗಭೂಮಿ  ಉದ್ದೇಶ. ಜ್ಞಾನ ಪ್ರಸಾರ, ಅರಿವು ಮೂಡಿಸುವದು, ಮನೋರಂಜನೆ ಮತ್ತು ಮನ ಮುಟ್ಟುವ ಕಾರ್ಯ ಮಾಡವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆವೆ ಎಂದರು. 

ರೋಟರಿ ಜಿಲ್ಲೆ 3170 ರಲ್ಲಿ ಇಂತಹ  ಜ್ಞಾನ ಪ್ರಸಾರ, ಹಲವಾರು  ಸಾಮಾಜಿಕ, ಶೈಕ್ಷಣಿಕ ಸಾಮೂದಾಯಿಕ  ಕಾರ್ಯಕ್ರಮ ಗಳನ್ನು  ರೋಟರಿ ಧಾರವಾಡ  ಸೆಂಟ್ರಲ್ ಮಾಡುತ್ತಾ ಬಂದಿದ್ದು  ಗ್ಲೋಬಲ್ ಗ್ರ್ಯಾಂಟ್ ಮುಖಾಂತರ ಹಲವಾರು ( ಆಂಬುಲೆನ್ಸ್ ಗಳು,ಸರ್ಕಾರಿ ಶಾಲೆ ಗಳಿಗೆ ಕಂಪ್ಯೂಟರ್ ಗಳು, ಶಿಕ್ಷಕ ರೀ ಗಾಗಿ  ನೆಷನ್ ಬಿಲ್ಡರ್ ಕಾರ್ಯಕ್ರಮ, ವಾಶ್ ಕಾರ್ಯಕ್ರಮ ಹೀಗೆ ಹತ್ತು ಹಲವು ಯೋಜನಾ ಬದ್ಧವಾದ ಚಟುವಟಿಕೆ ಮಾಡುತ್ತಾ ಸದಾ ಕ್ರಿಯಾಶೀಲವಾಗಿದೆ ಪ್ರಸಕ್ತ ವರ್ಷಾದಲ್ಲಿ ಅಧ್ಯಕ್ಷ ಸುನಿಲ್ ಬಾಗೇವಾಡಿ , ಕಾರ್ಯದರ್ಶಿ  ಶರಯೂ  ಮಿಶ್ರ  ಅವರು  ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಅಭಿನಯ  ಭಾರತಿ 1981 ರಿಂದ ಸಕ್ರಿಯವಾಗಿ ಹವ್ಯಾಸಿ ರಂಗ ಭೂಮಿ ಸೇವೆ ಸಲ್ಲಿಸುತ್ತದ್ದು ಎರಡು ಬಾರಿ ರಾಷ್ಟ್ರೀಯ ನಾಟಕೋತ್ಸವ, 18 ಬಾರಿ  ನಿನಾಸಂ ತಿರುಗಾಟ, 18 ಚಿಗುರು  ಮಕ್ಕಳ ರಂಗ ಶಿಬಿರ, 30 ದಿನ ಕಾಲ 11 ಭಾಷೆಗಳ  ಶಾಂತಿ ಮೈತ್ರಿ ನಾಟಕ ಉತ್ಸವ, 25 ಅಭಿನಯ  ಭಾರತಿ  ರಂಗ ಪ್ರಶಸ್ತಿ  ಪ್ರತಿ ಮಾರ್ಚ್ 27 ವಿಶ್ವ ರಂಗ ಭೂಮಿ ದಿನದ ದಂದು ನೀಡುತ್ತಲಿದೆ,
ಹಲವು ವಿಚಾರ ಸಂಕಿರಣ  ಸಂಘಟಿಸಿದೆ  ಕೊರೋನ  ಸಮಯದಲ್ಲಿ ಎಲ್ಲರೂ ಕೈಲಿ ಚೆಲ್ಲಿದಾಗ  ತನ್ನ ಫೇಸ್ಬುಕ್ ಮೂಲಕ ಸಾಂಸ್ಕೃತಿಕ ಚಟುವಟಿಕೆ  ಆರ0ಭಿಸಿ ಈಗಾಗಲೇ 500 ಕ್ಕೂ ಹೆಚ್ಚು ಅತ್ಯುತ್ತಮ ಉಪನ್ಯಾಸ ಗಳನ್ನು  ದೇಶ ವಿದೇಶದ ರಂಗ ತಜ್ಞರಿಂದ, 25 ಕ್ಕೂ ಹೆಚ್ಚು  ಲೈವ್ ಶೋ,  ಶ್ರೀರಂಗರ 78ಕ್ಕೂ ಹೆಚ್ಚು ಏಕಾಂಕ  ವಾಚಿಸಿದೆ  365 ದಿನ ಕಾಲ ರಂಗ ಭೂಮಿ ರಂಗು ಗಳು  ಅಂತ ನಿತ್ಯಕಾರ್ಯಕ್ರಮ  ರಂಗ ಚಾತುರಮಾಸ  ವನ್ನು ಭರತ ನ ನಾಟ್ಯ ಶಾಸ್ತ್ರ,, ಕ್ರಷ್ಣ  ಪಾರಿಜಾತ  ಹೊಸ ವಾಖ್ಯಾನ, 52 ವಾರ ಕಾಲ ಮಕ್ಕಳ ರಂಗಭೂಮಿ  ಹೀಗೆ ಯಾವ ವಿಶ್ವ ವಿದ್ಯಾಲಯ ಮಾಡಿ ರ್ಲಾರದಷ್ಟು  ಕೆಲಸ ತಜ್ಞರ  ಸಹಾಯ ದೊಂದಿಗೆ ಮಾಡಿದೆ ಎಂದರು.
 ಪ್ರತಿ ನಿತ್ಯ ಸಂಜೆ 5.30 ಕ್ಕೆ ನಾಟಕ ಪ್ರದರ್ಶನ. 

16 ನವೆಂಬರ್ ಸಂಜೆ 5.30 ಕ್ಕೆ ಧಾರವಾಡದ  ಅಭಿನಯ  ಭಾರತಿಯ  "ಪ್ರಭಾಸ್ "( ಮೇಡಂ ಕ್ಯೂರಿ ಜೀವನ ಆಧಾರಿತ )
17 ನವೆಂಬರ್ ಸಂಜೆ  5.0 ಕ್ಕೆ ಅರಿವು ಮೈಸೂರು ತಂಡ  ಪ್ರದರ್ಶಿಸುವ  "QED"(ರಿಚರ್ಡ್ ಪೈನ್ ಮ್ಯಾನ್ ಆಧಾರಿತ )

18 ನವೆಂಬರ್  ಸಂಜೆ 5.30ಕ್ಕೆ "ಸಿ ವಾರ್ಡ್” ( ಕ್ಯಾನ್ಸರ್ ರೋಗ  ಕುರಿತು )

19 ನವೆಂಬರ್ ಸಂಜೆ 5.30ಕ್ಕೆ "ಡಾ. ಸಲೀಮ್ ಅಲಿ”

 ಸಾಮಾನ್ಯ ಪ್ರವೇಶ ಪತ್ರಗಳನ್ನು  ರೋಟರಿ ಕ್ಲಬ್ ಧಾರವಾಡ  ಸೆಂಟ್ರಲ್  ಪದಾಧಿಕಾರಿಗಳು ಅವರಿಂದ  ಪಡೆಯಬಹುದು. ಅಧ್ಯಕ್ಷ  ಸುನೀಲ್ ಬಾಗೇವಾಡಿ (+91 94807 37338). ಅಭಿನಯ  ಭಾರತಿ  ಸದಸ್ಯರು ಮನೋಹರ್  ಗ್ರಂಥ  ಮಾಲೆ ಶುಭಾಸ್  ರಸ್ತೆ(+91 98454 47002) ಅವರಿಂದ  ಪಡೆಯಬಹುದು 
 ಹೊಸ ಸದಸ್ಯರು ಆಗುವರಿಗೆ 500ರೂ ವಾರ್ಷಿಕ  ಸದಸ್ಯತ್ವ ಕ್ಕೆ ಅಲ್ಲಿಯೇ  ನೀಡಲಾಗುವದು ಎಂದು ತಿಳಸಿದರು. 

ಅರವಿಂದ ಕುಲಕರ್ಣಿ , ಸಮೀರ ಜೋಷಿ, ಗೀರಿಶ ಬೆಟಗೇರಿ.,ಆನಂದ ಅಮರಶಟ್ಟಿ. ಪತ್ರಿಕಾಗೋಷ್ಟಿಯಲ್ಲಿ ಇದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال