ಸಮಾಜ ಸೇವೆ ಮಾಡಿ ಜೀವನದ ಬಂಡಿಯನ್ನು ಸುಗಮವಾಗಿ ಸಾಗಿಸಿ-ಡಾ ಬಸವರಾಜ ಹೂಂಗಲ್.

ಸಮಾಜ ಸೇವೆ ಮಾಡಿ ಜೀವನದ ಬಂಡಿಯನ್ನು ಸುಗಮವಾಗಿ ಸಾಗಿಸಿ-ಡಾ ಬಸವರಾಜ ಹೂಂಗಲ್.
ಧಾರವಾಡ : ಸದ್ವಿಚಾರದ
 ಮಾರ್ಗದತ್ತ ಸಾಗಿ ಸಾತ್ವಿಕ ಗುಣಗಳನ್ನು ಬೆಳೆಸಿಕೊಂಡು ಸಮಯದ ಸದ್ಬಳಕೆ ಮಾಡುವ ಮೂಲಕ ಸಮಾಜ ಸೇವೆ ಮಾಡಿ ಜೀವನದ ಬಂಡಿಯನ್ನು ಸುಗಮವಾಗಿ, ಸ್ವಾಸ್ಥವಾಗಿ ನಡೆಸಬೇಕು ಎಂದು ಪತ್ರಕರ್ತ ಡಾ.ಬಸವರಾಜ ಹೊಂಗಲ ಹೇಳಿದರು.
ಅವರು 
ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ಭವನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ ಸೇವಾ ಸಮಿತಿ ಉದ್ಘಾಟನೆ ಕಾರ್ಯಕ್ರಮ ಹಾಗೂ ಶಿವಾನಂದ ಲೋಲೆನವರ ಅಭಿನಂದನಾ ಸಮಾರಂಭದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದ ಬದುಕಿನ ಜಂಜಡದಲ್ಲಿ ಮನುಷ್ಯ ಚಿಂಥನ ಮಂಥನದಲ್ಲಿ ಪರಿಶುದ್ಧಗೊಂಡು ನಡೆದರೆ ಆತನ ದಾರಿ ದೀಪ ದೈವತ್ವದ ಬೆಳಕಿನಡೆ ಸಾಗುತ್ತದೆ. ನೈಸರ್ಗಿಕ, ವೈಚಾರಿಕತೆಯ ಅನುಭಾವವನ್ನು ನಮ್ಮ ಮನದಾಳದಲ್ಲಿ ತುಂಬಿಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಬೇಕು. ಸಮಾಜವೆಂಬುದು ಕೃಷಿ ಭೂಮಿಯಿದ್ದಂತೆ ಅದಕ್ಕೆ ಸಾವಯವ ಗೊಬ್ಬರ ನೀಡಿದರೆ ಅದು ಉತ್ತಮ ಆರೋಗ್ಯ ಕೊಡುತ್ತದೆ ಅದಕ್ಕೆ ಬದಲಾಗಿ ರಾಸಾಯನಿಕ ಗೊಬ್ಬರ ನೀಡಿದರೆ ಕೃಷಿ ಭೂಮಿ ಮತ್ತು ಆರೋಗ್ಯ ಎರಡು ಹದಗೆಡುತ್ತವೆ, ಈ ನಿಟ್ಟಿನಲ್ಲಿ ಅತ್ಯುತ್ತಮ ಮಾರ್ಗದತ್ತ ನಾವೆಲ್ಲ ಸಾಗಬೇಕು ಎಂದರು.
ಪವನ ಆಂಗ್ಲ ಮಾಧ್ಯಮ ಶಾಲೆ ಚೇರಮನ್ ಶ್ರೀಮತಿ ರತ್ನಾ ಪಾಟೀಲ ಮಾತನಾಡಿ, ಹಿಂದಿನ ದಿನದಲ್ಲಿ ಮಹಿಳೆಗೆ ತನ್ನ ಸ್ವನಿರ್ಧಾರ, ಹಕ್ಕುಗಳು ಮತ್ತು ಭೌದ್ಧಿಕತೆಯನ್ನು ಹತ್ತಿಕ್ಕುವುದು ಹೆಚ್ಚಾಗಿತ್ತು. ಮಹಿಳೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಅಂಶಗಳ ಆಧಾರದ ಮೇಲೆ ಅನೇಕ ಅಂಶಗಳನ್ನು ಕಾಣಿಕೆಯಾಗಿ ನೀಡಿದ್ದರೂ ಸಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತಿದ್ದಳು. ಇಂಥಹ ಸಮಸ್ಯೆಗಳನ್ನು ಮನಗಂಡ ಬಸವಾದಿ ಶರಣರು ಸ್ತ್ರೀಯರಿಗೆ ಸ್ವಾತಂತ್ರ ತಂದುಕೊಟ್ಟ ಕಾರಣ ನಮ್ಮಂತಹ ಸ್ತ್ರೀಯರು ಸಾಧನೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದರು.

ಶ್ರೀ ಬನಶಂಕರಿ ಭವನದ ಸಂಸ್ಥಾಪಕ ಶಿವಾನಂದ ಲೋಲೆನವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯ ಆಧ್ಯಾತ್ಮಿಕ ಚಿಂತನೆ, ಉಪನ್ಯಾಸ ಹಾಗೂ ಸತ್ಸಂಗ, ಪ್ರವಚನ, ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಠಾಧೀಶರ ಹಾಗೂ ಜ್ಞಾನಿಗಳಿಂದ ಅನುಭಾವ ಪಡೆದುಕೊಂಡರೆ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾದ್ಯ ಎಂದರು.

ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಶ್ರೀ ರಮೇಶ ಪಾತ್ರೋಟ ಗುರುಜಿ ಸಾನಿಧ್ಯವಹಿಸಿ ಮಾತನಾಡಿದರು. ಡಾ.ದಾಕ್ಷಾಯಿಣಿ ರಾಮನಗೌಡರ, ಶ್ರೀ ಬನಶಂಕರಿ ದೇವಸ್ಥಾನ ಸೇವಾ ಸಮಿತಿ ಮಹಿಳಾ ಘಟಕ ಅಧ್ಯಕ್ಷೆ ಗೌರಮ್ಮ ಬಲೋಗಿ ವೇದಿಕೆಯಲ್ಲಿದ್ದರು. ಪ್ರಭು ಹಂಚಿನಾಳ ನಿರೂಪಿಸಿದರು. ರವಿಕುಮಾರ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಸ್ವಾಗತಿಸಿದರು. ಮಂಜುನಾಥ ವಂದಿಸಿದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ : 9945564891
ನವೀನ ಹಳೆಯದು

نموذج الاتصال