ಭಾರತದಾದ್ಯಂತ ಪಾದಯಾತ್ರೆಯ ಗುರಿ
ಧಾರವಾಡ : ಅಯೋಧ್ಯಾ ದಿಂದ
ಅಶಿತೋಷ ಪಾಂಡೆ ಎಂಬ 26
ವಯಸ್ಸಿನ ಯುವಕ ಪಾದಯಾತ್ರೆಯ ಮೂಲಕ ಇಂದು ನಗರಕ್ಕೆ ಆಗಮಿಸಿದನು .ಇಲ್ಲಿಯವರೆಗೆ ಎಂಟು ಸಾವಿರ ಕಿಮೀ ಪಾದಯಾತ್ರೆಯುನ್ನು ಮುಗಿಸಿದ್ದು,ಇನ್ನೂ ಎಂಟು ಸಾವಿರ ಕಿಮೀ ಪಾದಯಾತ್ರೆಯ ಗುರಿ ಹೂಂದಿದ್ದು ಭಾರತದೇಶದ ಎಲ್ಲರಾಜ್ಯಗಳಿಗೆ ಭೇಟಿ ನೀಡಿ ಒಂದನೇ ವಗ೯ದ ಮಕ್ಕಳಿಂದ ಹಿಡಿದು ಸ್ನಾತಕೋತ್ತರ ವರೆಗಿನ ಕಲಿಯುವ ವಿದ್ಯಾರ್ಥಿಯರಿಗೆ, ಗಿಡಗಳನ್ನು ಹಚ್ಚುವ ಹಾಗೂ ಸಂರಕ್ಷಣೆಯ ಮಾಡುವವರಿಂದ ಆಗುವ ಪ್ರಯೋಜನೆ ಬಗ್ಗೆ ಹೇಳಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ನನ್ನದಾಗಿದೆ ಎಂದರು .ನನ್ನ ಪಾದಯಾತ್ರೆಯ ಮದ್ಯದಲ್ಲಿ ಬರುವ ಶಾಲಾ ಕಾಲೇಜಿಗೆ ಭೇಟಿ ನೀಡಿ ಪರಿಸರದ ಮಾಹಿತಿಯನ್ನು ಮಕ್ಕಳಿಂದ ಹಿಡಿದು ಯುವಕರವರೆಗೆ ನೀಡಿ ಶಾಲಾ ಕಾಲೇಜಿನ ಆವರಣದಲ್ಲಿ ಗಿಡನೆಟ್ಟು ಮುಂದೆ ಸಾಗುತ್ತಿದ್ದೇನೆ,ಕರ್ನಾಟಕದ ಜನತೆಯ ಪ್ರೀತಿಯನ್ನು ನಾನೆಂದು ಮರೆಯಲಾರೆ, ಧಾರವಾಡ ಮಾಗ೯ವಾಗಿ. ಮುಂದೆ ಗೋವಾ, ಮಹಾರಾಷ್ಟ್ರ , ಇನ್ನೂ ಹಲವು ರಾಜ್ಯಗಳ ಪಾದಯಾತ್ರೆಯಗೈಯುತ್ತ ರಾಷ್ಟ್ರಪತಿ ಹಾಗೂ ಪ್ರಧಾನಿಯವರನ್ನ ಭೇಟಿಯಾಗುವ ಅಭಿಲಾಷೆ ಇಟ್ಟುಕೊಂಡಿದ್ದೆನೆ ಎಂದರು.
ಪರಿಸರ ಸಂರಕ್ಷಣೆ,ರಾಷ್ಟ್ರೀಯ ಏಕತೆಯ ಕುರಿತು ಅಸ್ಖಲಿತವಾಗಿ ಮಾತನಾಡುವ ಸಾಮರ್ಥ್ಯ ಹೊಂದಿರುವನು. ಇವನಂಹ ಇನ್ನೂ ಹಲವಾರು ಯುವಕರು ಮುಂದೆ ಬಂದರೆ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ ಎಂಬುವದು ಸಂಶಯವಿಲ್ಲ ಇವರೂಂದಿಗೆ ದತ್ತಪಾದಯಾತ್ರೆಯ ಸಂಸ್ಥಾಪಕ ಅಧ್ಯಕ್ಷ ಆನಂದ ಕುಲಕರ್ಣಿ ಹಾಗೂ ಗೆಳೆಯರ ಬಳಗ ನುಗ್ಗಿಕೇರಿಯವರೆಗೆ
ಹೋಗಿ ಬೀಳಕೂಟ್ಟರು.
ಡಿ ಸಿ ಕಚೇರಿಯ ಎದುರು ಜಯಕರ್ನಾಟಕ ಸಂಘದ ಅಧ್ಯಕ್ಷ ಸುಧೀರ ಮುಧೂಳ, ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಮುತ್ತು ಬೆಳ್ಳಕ್ಕಿ ಸದಸ್ಯರು ಸನ್ಮಾನ ಮಾಡುವ ಮೂಲಕ ಗೌರವಿಸಿದರು, ಕಲಘಟಗಿ ರಸ್ತೆ ಎಸ್ ಡಿ ಎಮ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲ ಕೆ ಗೋಪಿನಾಥ, ರೂಟರಿ ಸಂಸ್ಥೆಯ ಅಧ್ಯಕ್ಷ ಸುನೀಲ ಬಾಗೇವಾಡಿ ಕಾಲೇಜಿನ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡಿ ಸನ್ಮಾನಿಸಿ ಪಾದಯಾತ್ರೆಗೆ ಶುಭ ಹಾರೈಸಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891