ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮನವಿ .

ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮನವಿ .
ಧಾರವಾಡ 16 : 
 ಬೆಂಗಳೂರಿನಲ್ಲಿ ಪಾಲಿಕೆ ಮಾಜಿ ಸದಸ್ಯೆ ಪತಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಯಲ್ಲಿ ಇತ್ತಿಚಿಗೆ 42 ಕೋಟಿ ನಗದು ಹಣ ಐ ಟಿ ದಾಳಿಯಲ್ಲಿ ಸಿಕ್ಕಿದ್ದು ರಾಜ್ಯದ ಜನರಿಗೆ ಗೊತ್ತಿರುವ ವಿಷಯ. ಈ ಹಣ ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ದಟ್ಟವಾದ ಸುದ್ದಿಯಾಗಿದೆ. ಕಾಂಗ್ರೆಸ್ ಸರ್ಕಾರ ಕಂಟ್ರಾಕ್ಟರ್‌ಗಳಿಗೆಂದು ನೀಡಿದ ಬಾಕಿ ಹಣ 650 ಕೋಟಿಗೆ ಪ್ರತಿಯಾಗಿ ಗುತ್ತಿಗೆದಾರರು ನೀಡಿದ ಕಮಿಷನ್ ರೂ. 42 ಕೋಟಿ ಎಂಬುದು ನಿರ್ವಿವಾದ ಸುದ್ದಿಯಾಗಿದೆ. ಇದಲ್ಲದೆ ಇನ್ನೂ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ಪಂಚ ರಾಜ್ಯಗಳ ಚುನಾವಣೆಯ ಸಲುವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಖರ್ಚಿಗೆ ಕಲೆಕ್ಷನ್ ಮಾಡುತ್ತಿದಾರೆ ಎಂಬುವ ವಿಷಯ ಭಾರಿ ಚರ್ಚೆಯಲ್ಲಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿದೆ, ಹಾಗೂ ಕಲೆಕ್ಷನ್ ಕೇಂದ್ರವಾಗಿದೆ, ರಾಜ್ಯದಲ್ಲಿ ಮಳೆ ಇಲ್ಲದೆ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ, ವಿದ್ಯುತ್ ಕಡಿತ ವಿಪರೀತವಾಗಿದೆ, ವರ್ಗಾವಣೆ ದಂಧೆ ನಡೆಯುತ್ತಿದೆ, ತುಷ್ಟಿಕರಣದಲ್ಲಿ ಸರ್ಕಾರ ಮುಳುಗಿದೆ, ರಾಜ್ಯದಲ್ಲಿ ಗಲಭೆಗಳು ಆಗುತ್ತಿವೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಮತ್ತು ಲೂಟಿ ಸರ್ಕಾರದ ವಿರುದ್ದ ಭಾರತೀಯ ಜನತಾ ಪಕ್ಷವು ಇಂದಿನ ದಿವಸ್ ರಾಜ್ಯದಾದ್ಯಂತ ಜಿಲ್ಲಾ ಘಟಕದಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಎಟಿಎಂ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಧಾರವಾಡದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಯವರ ಉಪಸ್ಥಿತಿಯಲ್ಲಿ ಪ್ರತಿಭಟನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಘನವೇತ್ತ ರಾಜ್ಯಪಾಲರಿಗೆ ಈ ಮೂಲಕ ಮನವಿ ಮಾಡಿದರು.
ಮಹೇಶ ಟೆಂಗಿನಕಾಯಿ, ಶಾಸಕರು,ದತ್ತಮೂರ್ತಿ ಕುಲಕರ್ಣಿ,ವಿಜಯಾನಂದ ಶೆಟ್ಟಿ
, ರವಿ ನಾಯಕ ,ಮೋಹನ ರಾಮದುರ್ಗ, ಬಸವರಾಜ ಗರಗ
,ಸುನೀಲ ಮೊರೆ,ಸಂತೋಷ ಚವ್ಹಾಣ ,ಪ್ರಭು ನವಲಗುಂದಮಠ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891.
ನವೀನ ಹಳೆಯದು

نموذج الاتصال