ಪ್ರಗತಿ ಶೀಲ ಸಾಹಿತ್ಯ ಕ್ಕೆ ದಿ. ಬಸವರಾಜ ಕಟ್ಟೀಮನಿ ಅವರ ಕೊಡುಗೆ ಅಪಾರ.
---- ಡಾ. ಕೆ ಎಸ್ ಶರ್ಮಾ.
ಧಾರವಾಡ : ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಗತಿ ಶೀಲ ಸಾಹಿತ್ಯ ಚಳುವಳಿ ಹೊಸ ಮಾರ್ಗವನ್ನೇ ನಿರ್ಮಿಸಿತು. ಸಾಹಿತ್ಯ ಲೋಕದಲ್ಲಿ ಜನ ಸಾಮಾನ್ಯರ ಬದುಕು, ವಸ್ತು ನಿಷ್ಠತೆ ಬರಹದಲ್ಲಿ ಕಾಣಿಸಿಕೊಂಡಿತು. ಬಸವರಾಜ ಕಟ್ಟೀಮನಿ ಅವರು ತಮ್ಮ ಸಾಹಿತ್ಯದಲ್ಲಿ ಸಮಾಜವಾದ ಸಮತಾವಾದ ವನ್ನು ಕುರಿತು ಸಂವೇದನೆ ಯನ್ನು ಹುಟ್ಟು ಹಾಕಿದರೆಂದು ಡಾ. ಕೆ ಎಸ್ ಶರ್ಮಾ ಜಿಲ್ಲಾ ಕಸಾಪ ಹಾಗೂ ಹೊಂಬೆಳಕು ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಬಸವರಾಜ ಕಟ್ಟೀಮನಿ ಬದುಕು ಬರಹ ಉಪನ್ಯಾಸ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಅರವಿಂದ್ ಯಾಳಗಿ, ಹಿರಿಯ ಸಾಹಿತಿಗಳು ಇವರು ದಿ.ಬಸವರಾಜ ಕಟ್ಟೀಮನಿ ಅವರ ಜೊತೆಗಿನ ಒಡನಾಟವನ್ನು ಅವರು ರಚಿಸಿದ ಕಾದಂಬರಿ, ಕಥೆ ಪ್ರಬಂಧಳನ್ನು ಸಮೀಕ್ಷೆ ಮಾಡುತ್ತಾ ಮಾಡಿ ಮಾಡಿದವರು, ಜ್ವಾಲಾಮುಖಿ ಮೇಲೆ, ಜರತಾರಿ ಜಗದ್ಗುರು, ಪೌರುಷ ಪರೀಕ್ಷೆ ಮೊದಲಾದ ಕಾದಂಬರಿಗಳು ಜನಪ್ರಿಯತೆ ಗಳಿಸಿದ್ದ ಅಲ್ಲದೇ ಭ್ರಷ್ಠಾಚಾರ, ದೌರ್ಜನ್ಯ , ಡಾಂಬಿಕತೆ , ಸ್ವಾತಂತ್ರ್ಯ ಹೋರಾಟದ ಸಂದರ್ಭಗಳನ್ನು ವಿವರಿಸಿದರು. ಬಸವರಾಜ ಕಟ್ಟೀಮನಿ ಅವರು ಸಾಹಿತ್ಯ ಬರೆದು ಬದುಕಬಹುದು ಎಂಬುವುದನ್ನು ಸಾಧಿಸಿ ತೋರಿಸಿದರು ಪತ್ರಕರ್ತನಾಗಿ, ಬರಹಗಾರನಾಗಿ, ರಾಜಕಾರಣಿಯಾಗಿ, ವಿಮರ್ಶಕನಾಗಿ ಮತ್ತು ಸಾಹಿತಿಯಾಗಿ ಬದುಕಿದ್ದರು. ಬದುಕಿನುದ್ದಕ್ಕೂ ಕಷ್ಟ-ನಷ್ಟಗಳನ್ನು ಕಾಣುವುದರೊಂದಿಗೆ ಇತರರಿಗೆ ಮಾದರಿಯಾದ ಛಲಗಾರ ಮಾತ್ರವಲ್ಲದೆ, ಹೆಚ್ಚು ಹೆಚ್ಚು ಓದುಗರನ್ನು ಸೃಷ್ಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ನುಡಿದರು.
ಧಾರವಾಡ ವಕೀಲ ಸಂಘ ಅಧ್ಯಕ್ಷರಾದ ಸಿ.ಎಸ್. ಪೋಲಿಸ್ ಪಾಟೀಲ್ ಇವರು ಮಾತನಾಡಿ, ಕಟ್ಟೀಮನಿ ಅವರ ಹೆಸರು ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿದೆ. ಬೆಳಗಾವಿ ಜಿಲ್ಲೆಯ ಮಲಾಮರಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ, ದೇಶದಾದ್ಯಂತ ಎಲ್ಲರೂ ಅವರ ಬಗ್ಗೆ ತಿಳಿಯುವ ಹಾಗೆ ಮಾಡಿದ ಅತ್ಯುತ್ತಮ ಬರಹಗಾರ ಎಂದರು.
ದಿ. ಬಸವರಾಜ ಕಟ್ಟೀಮನಿ ಅವರ ಅಳಿಯಂದಿರು ಆದ ನಿವೃತ್ತ ಪ್ರಾಚಾರ್ಯ ಪ್ರೊ ಬಿ.ಸಿ. ಬಿರಾದಾರ, ನಿವೃತ್ತ ಪ್ರಾಚಾರ್ಯರಾದ ಅವರು ಬಸವರಾಜ ಕಟ್ಟೀಮನಿ ಅವರೊಂದಿಗಿನ ಬಾಂಧವ್ಯ, ಒಡನಾಟ, ಅವರ ವ್ಯಕ್ತಿತ್ವದ ಗಾಂಭೀರ್ಯದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಅವರು 25 000 ರೂಪಾಯಿ ದತ್ತಿ ನಿಧಿ ನೀಡಿ ಪ್ರತಿ ವರ್ಷ ಅಕ್ಟೋಬರ್ 5 ಅಥವಾ 23 ರಂದು ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಲು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪಿ .ಎಲ್. ಪಾಟೀಲ್, ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರು ಮಾತನಾಡಿ, ಕಟ್ಟೀಮನಿ ಅವರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರ ನೇರ ನುಡಿ, ಶೋಷಿತರ ಪರವಾದ ಅವರ ನಿಲುವುಗಳು ಮತ್ತು ಹರಿತವಾದ ಬರಹ ಎಂತವರಲ್ಲಿಯೂ ಸೆಳೆತವನ್ನು ಉಂಟುಮಾಡುತ್ತವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಬೆಳಗಾವಿ ಕಟ್ಟೀಮನಿ ಅವರ ಜನ್ಮಭೂಮಿಯಾಗಿದೆ ಹೀಗಾಗಿ ಕರ್ನಾಟಕ ಸರ್ಕಾರವು ಅವರಿಗೆ ಸಕಲ ಗೌರವಗಳನ್ನು ನೀಡಿ, ಬೆಳಗಾವಿಯಲ್ಲಿ ಅವರ ಹೆಸರಿನಲ್ಲಿ ಟ್ರಸ್ಟ್ ಅನ್ನು ಸ್ಥಾಪಿಸಿದೆ. ಧಾರವಾಡ ಅವರ ಕರ್ಮಭೂಮಿಯಾಗಿದೆ, ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡದಲ್ಲಿ, ಕಟ್ಟೀಮನಿ ಅವರ ಹೆಸರಿನಲ್ಲಿ ದತ್ತಿಯನ್ನು ಸ್ಥಾಪಿಸಿ, ಪ್ರತಿ ವರ್ಷವೂ ಅವರ ಹೆಸರಿನಲ್ಲಿ ಒಂದು ದಿನ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
ದಿ. ಬಸವರಾಜ ಕಟ್ಟೀಮನಿ ಅವರ ಮೊಮ್ಮಗಳು, ಶ್ರೀ ಸಾಯಿ ಪಿ.ಯು. ಕಾಲೇಜಿನ ಮತ್ತು ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವೀಣಾ ಬಿರಾದಾರ ಇವರು ಪ್ರಾಸ್ತಾವಿಕ ಮಾತನಾಡಿ, ಬಾಲ್ಯದಲ್ಲಿ ಅವರ ಅಜ್ಜನವರೊಂದಿಗಿನ ಅವಿಸ್ಮರಣೀಯ ಕ್ಷಣಗಳನ್ನು, ಓದುವ ಹವ್ಯಾಸ ಬೆಳೆಸಿದುದನ್ನು ನೆನೆದರು. ಇದು ಕೇವಲ ಕುಟುಂಬದ ಕಾರ್ಯಕ್ರಮವಾಗಿರದೇ, ಎಲ್ಲರೂ ಸೇರಿ ಆಚರಣೆ ಮಾಡುವ ಸಾಹಿತ್ಯ ದಿಗ್ಗಜನ ಕಾರ್ಯಕ್ರಮವಾಗಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಸಾಹಿತಿಗಳು ಹಾಗೂ ಪತ್ರಕರ್ತರಾದ ಬೆಳಗಾವಿಯ ಶಎಲ್.ಎಸ್. ಶಾಸ್ತ್ರಿ ಮತ್ತು ಪತ್ರಕರ್ತ ಪ್ರೊ ಗುರುರಾಜ್ ಜಮಖಂಡಿ ಅವರಿಗೆ "ಸಾಹಿತ್ಯ ಶ್ರೀ" ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಂಜುಳಾ ಕಟ್ಟೀಮನಿ, ಕೆ.ಎಸ್. ಕೌಜಲಗಿ, ಮಹಾಂತೇಶ ನರೇಗಲ್ , ಪ್ರೊ . ಜಿ ಜಿ ನೆಹಲಾನಿ, ಮಲ್ಲಿಕಾರ್ಜುನ ಚಿಕ್ಕಮಠ, ಸೋಮಶೇಖರ್ ಇಟಗಿ ಕ.ಸಾ.ಪ ಪದಾಧಿಕಾರಿಗಳು, ಡಾ. ಎಸ್.ಬಿ. ಗಾಡಿ ಮತ್ತು ಕಟ್ಟೀಮನಿ ಹಾಗೂ ಬಿರಾದಾರ ಕುಟುಂಬದ ಎಲ್ಲಾ ಸದಸ್ಯರು, ಹಿರಿಯ ಸಾಹಿತಿಗಳು, ಕಟ್ಟೀಮನಿ ಅಭಿಮಾನಿಗಳು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಲ್ಪತರು ಮಹಿಳಾ ಸಂಘದ ಸಹೋದರಿಯರು ಶರಣ ರೂಪಕ ಮತ್ತು ಗೀತಾ ಗಾಯನವನ್ನು ಪ್ರಸ್ತುತ ಪಡಿಸಿದರು.
ಪ್ರೊ.. ಕೆ ಎಸ್ ಕೌಜಲಗಿ ಸ್ವಾಗತಿಸಿದರು. ಡಾ. ವೀಣಾ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ ಮೌನೇಶ್ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.
ಮಂಜುಳಾ ಬಿರಾದಾರ ವಂದನಾಪ೯ಣಿ ಮಾಡಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891