ಜಿಲ್ಲಾ ವಾತಾ೯ ಇಲಾಖೆ:
ಗ್ಯಾರಂಟಿ ಯೋಜನೆಗಳ ಅರಿವು -- ಬಿದಿ ನಾಟಕ
ಧಾರವಾಡ 12 : ರಾಜ್ಯ ಸರಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳನ್ನು ಬಿದಿ ನಾಟಕಗಳ ಮೂಲಕ ಸಾಮಾನ್ಯ ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ನಗರದ ವಾತ೯ ಮತ್ತು ಸಾವ೯ಜನಿಕ ಸಂಪಕ೯ ಇಲಾಖೆ ಇಂದು ಆಯೋಜಿಸಲಾಗಿದ್ದ ಪರೀಕ್ಷಾಥಿ೯ ಪ್ರಯೋಗದಲ್ಲಿ ಕಲಾತಂಡಗಳು ನಾಟಕಗಳ ಪ್ರಾತ್ಯಕ್ಷಿಕೆಗಳನ್ನು ಪ್ರದಶಿ೯ಸಿದರು.
ಗೃಹ ಜ್ಯೋತಿ, ಗೃಹ ಲಕ್ಷ್ಮೀ ಹಾಗೂ ಶಕ್ತಿ ಯೋಜನೆ, ಯುವ ನಿಧಿ ಎನ್ನುವ ಗ್ಯಾರಂಟಿ ಯೋಜನೆಗಳ ಕುರಿತು ನಾಟಕ, ಗೀಗೀ ಪದ ಗಳ ಮೂಲಕ. ಪ್ರದಶಿ೯ಸಿ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಡಿ ಅರಿವು ಮೂಡಿಸಿದರು.
ಯುವ ಜನ ಹಾಗೂ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಹರ್ಲಾಪುರ್ ಕಲಾತಂಡದ ಮುಖ್ಯಸ್ಥ ನಾಗರಾಜ್ ಗೌಡನ್ನವರ್ ಹಾಗೂ ಸಹ ಕಲಾವಿದರು ಮತ್ತು ಹುಲಕುಂದ ಶಿವಲಿಂಗ ಗಿಗಿಮೇಳ ಬೆಳವಟಗಿ ಕಲಾತಂಡ ಮುಖ್ಯಸ್ಥ ಶೇಖಪ್ಪ ಬೆಳವಟಗಿ ಹಾಗೂ ಸಹ ಕಲಾವಿದರು ಗ್ಯಾರಂಟಿ ಯೋಜನೆಗಳ ಕುರಿತು ನಾಟಕ ಹಾಗೂ ಗೀಗೀ ಪದಗಳ ಮೂಲಕ ಪ್ರದಶ೯ನ ನೀಡಿದರು.
ಈ ಸಂದಭ೯ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್.ಪಾತ್ರೋಟ ಮತ್ತು ವಾತ೯ ಮತ್ತು ಸಾವ೯ಜನಿಕ ಸಂಪಕ೯ ಇಲಾಖೆಯ ಹಿರಿಯ ಸಹಾಯಕ ನಿದೇ೯ಶಕರಾದ ಮಂಜುನಾಥ ಸುಳ್ಳೊಳ್ಳಿ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ : 9945564891.