ರೋಟರಿ ಕ್ಲಬ್ ಧಾರವಾಡ ಸೆಂಟ್ರಲನ ರೋಟರ್ಯಾಕ್ಟ ಕ್ಲಬ್ ಗಳ ಪದಗ್ರಹಣ ಕಾರ್ಯಕ್ರಮ
ಧಾರವಾಡ :
ಧಾರವಾಡದ ಎಸ್ ಡಿ ಎಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಟರಿ ಕ್ಲಬ್ ಧಾರವಾಡ ಸೆಂಟ್ರಲನ ರೋಟರ್ಯಾಕ್ಟ ಕ್ಲಬ್ ಗಳ ಪದಗ್ರಹಣ ಕಾರ್ಯಕ್ರಮ
ನಡೆಯಿತು.
ಮುಖ್ಯ ಅತಿಥಿಯಾಗಿ ಶಾಸಕ ಅರವಿಂದ ಬೆಲ್ಲದ ಅವರು ಮಾತನಾಡಿ,ರೋಟರ್ಯಾಕ್ಟ ಕ್ಲಬ್ ಮೂಲಕ ಹೇಗೆ ತಮ್ಮ ಭವಿಷ್ಯವನ್ನು ರೂಪಿಸಿ ಮತ್ತು ಸಮಾಜ ಸೇವೆ ಮಾಡಬಹುದು ಎಂದು ಕಾಲೇಜಿನ ನೂತನ ಸದಸ್ಯರಿಗೆ ಹೇಳಿದರು. ಕ್ಲಬಿನ ಅಧ್ಯಕ್ಷರಾದ ಸುನಿಲ ಬಾಗೇವಾಡಿ ಪ್ರಾಸ್ತಾವಿಕವಾಗಿ ಎಲ್ಲರನ್ನು ಸ್ವಾಗತಿಸಿದರು. ಅತಿಥಿಯಾಗಿ ಕಾಲೇಜಿನ ಪ್ರಾಂಶುಪಾಲರಾದ ಗೋಪಿನಾಥ್ ಸರ್ ಎಸ್ ಡಿ ಎಮ್ ಕಾಲೇಜಿನಲ್ಲಿ ಹೇಗೆ ಈ ಸಂಸ್ಥೆ ಕೆಲಸ ಮಾಡಬಹುದು ಎಂದು ವಿವರಿಸಿದರು. ಬೆಳಗಾವಿಯ ರೋ ಶರದ ಪ್ಯೆ ಅವರು ಪದಗ್ರಹಣ ಕಾರ್ಯಕ್ರಮ ನಡೆಸಿದರು. ಕೊಲ್ಲಾಪುರದ ರೋ. ಸಾಹಿಲ್ ಗಾಂಧಿಯವರ ನೂತನ ಸದಸ್ಯರಿಗೆ ಕ್ಲಬಿನ ಮಹತ್ವದ ಬಗ್ಗೆ ತಿಳಿಸಿದರು. ರೋಟರಿ ಕ್ಲಬ್ ಸದಸ್ಯರಾದ,ವಿರೇಶ ಕೆಲಗೇರಿ, ಕರಣ ದೊಡ್ಡವಾಡ,ಡಾ ಸತೀಶ್ ಇರಕಲ್,ಸೋಮಾಪುರ,ವಾಮನ ಮಂತ್ರಿ, ಶ್ರೀಮತಿ ನಂದಾ ಹಂಪಿಹೊಳ್ಳಿ,ಆನಂದ ನಾಯಕ, ಶಿನೊದ ಮತ್ತು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೊಫೆಸರ್ ವಾಸುದೇವ ಪರ್ವತಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಕೊನೆಯಲ್ಲಿ ಕ್ಲಬಿನ ಕಾರ್ಯದರ್ಶಿ ಶ್ರೀಮತಿ ಶರಯು ನಾಯಕ ವಂದನಾರ್ಪಣೆ ಮಾಡಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891