ರಮೇಶ್ ಪಾಟೀಲ್‌ಗೆ 2023 ನೇ ಸಾಲಿನ
"ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್" ಗರಿ.
ಧಾರವಾಡ : ಪ್ರತಿಭಾವಂತ ನೃತ್ಯ ಕಲಾವಿದ, ಯುವ ಡಾನ್ಸ್ ಅಕಾಡೆಮಿಯ ನಿರ್ದೇಶಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಧಾರವಾಡದ ರಮೇಶ್ ಪಾಟೀಲ್‌ಗೆ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ವತಿಯಿಂದ "ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್-2023" ನೀಡಿ ಗೌರವಿಸಲಾಯಿತು.
ಇತ್ತೀಚಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಾನಸೊಲ್ಲಾಸ ಆವರಣದಲ್ಲಿ ಜರುಗಿದ GWR ಕಾರ್ಯಕ್ರಮದಲ್ಲಿ ಕ.ವಿ.ವಿ. ಕುಲಸಚಿವರಾದ ಪ್ರೊ. ಚಂದ್ರಮ್ಮಾ ಎಂ, ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕ್ಲಾಸಿಕ್ ಸಮೂಹ ಸಂಸ್ಥೆಗಳು ನಿರ್ದೇಶಕ ಲಕ್ಷ್ಮಣ್ ಉಪ್ಪಾರ, ಜಿ. ಡಬ್ಲ್ಯೂ.ಆರ್ ನ ನಿರ್ದೇಶಕಿ ಪರಿಣಿತಾ ಲಿಂಗo. , ರಾಜೇಶ್ ಉಪಸ್ಥಿತರಿದ್ದು, ರಮೇಶ ಪಾಟೀಲ ಸಾಂಸ್ಕೃತಿಕ ನೃತ್ಯಕ್ಷೇತ್ರ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳ ಮುಖಾಂತರ ಯುವಕರಿಗೆ ಮಾದರಿಯಾಗಿದ್ದಾರೆ. ಇವರ ಈ ಕಾರ್ಯ ಅಭಿನಂದನೀಯ ಎಂದು ಶುಭಹಾರೈಸಿದರು.
ರತ್ನಮ್ಮ ದಿ. ಶಿವನಗೌಡ ಪಾಟೀಲ ದಂಪತಿಗಳ ಪುತ್ರ ರಮೇಶ ಪಾಟೀಲ ಕಳೆದ ಹದಿನೈದು ವರ್ಷಗಳಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ಯುವಕರಿಗೆ ನೃತ್ಯ ತರಬೇತಿಯನ್ನು ನೀಡುತ್ತಾ, ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸುತ್ತಿರುವವರು.
ಜೊತೆಗೆ ಸಾವಿರಾರು ಸಸಿ ನೆಡುವ ಕಾರ್ಯಕ್ರಮ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಧನಸಹಾಯ, ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಅರಿವು ಮೂಡಿಸುವದು. ಅನಾಥ ಮಕ್ಕಳಿಗೆ ಬಟ್ಟೆ ವಿತರಣೆ, ಕೋವಿಡ್-೧೯ ಕುರಿತು ಜಾಗೃತಿ, ಅಂಗವಿಕಲ ಹಾಗೂ ವಿಶೇಷಚೇತನ ಮಕ್ಕಳಿಗೆ ನೃತ್ಯ ತರಬೇತಿ ಹಾಗೂ ಪುಸ್ತಕ ವಿತರಣೆ, ಪರಿಸರ ಜನಜಾಗೃತಿ ಕಾರ್ಯಕ್ರಮ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನೃತ್ಯ ಕಾರ್ಯಕ್ರಮ ಆಯೋಜನೆ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳ ಮುಖಾಂತರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸ್ವಸ್ಥಸಮಾಜ ನಿರ್ಮಾಣದಲ್ಲಿ ತೊಡಗಿಕೊಂಡಿರುವುದು ಅನುಕರಣೀಯ ಎಂದರು.
ಪ್ರಶಸ್ತಿ ದೊರೆತ ಈ ಶುಭ ಸಂದರ್ಭದಲ್ಲಿ ಯುವ ಡಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು, ಪಾಲಕರು, ಗೆಳೆಯ ಬಳಗ ಹಾಗೂ ಹಿರಿಯರು ಶುಭಾಶಯಗಳನ್ನು ಕೋರಿದ್ದಾರೆ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891