15 ರಂದು ಏಕತಾ ಸಮಿತಿ ದಶಮಾನೋತ್ಸವ -- ಲಿಂಗಾಯತ ಸಮಾವೇಶ : ಸ್ಮರಣ ಸಂಚಿಕೆ ಬಿಡುಗಡೆ

15 ರಂದು ಏಕತಾ ಸಮಿತಿ ದಶಮಾನೋತ್ಸವ -- ಲಿಂಗಾಯತ ಸಮಾವೇಶ : ಸ್ಮರಣ ಸಂಚಿಕೆ ಬಿಡುಗಡೆ
   ಧಾರವಾಡ 13 :  ಅಖಿಲ ಕರ್ನಾಟಕ ಒಳಪಂಗಡಗಳ ಏಕತಾ ಸಮಿತಿ ದಶಮಾನೋತ್ಸವ ಹಾಗೂ ಲಿಂಗಾಯತ ಸಮಾವೇಶ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಅ.15 ರಂದು ಬೆಳಗ್ಗೆ 10 : 30  ಕ್ಕೆ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಶ್ರೀ ವೀರಭದ್ರ ದೇವಸ್ಥಾನ ಸಭಾ ಭವನದಲ್ಲಿ ಏರ್ಪಡಿಸಿದೆ ಎಂದು ಸಮಿತಿ ರಾಜ್ಯಾಧ್ಯಕ್ಷ ಜಿ ವಿ ಕೊಂಗವಾಡ ತಿಳಿಸಿದರು.
    ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು  ಸರ್ವ ಸಮಾನತೆ ಸರ್ವರೂ ಒಪ್ಪಿಕೊಳ್ಳುವ ವರ್ಗಬೇಧ, ವರ್ಣಬೇಧ, ಜಾತಿಬೇಧ, ಲಿಂಗಬೇಧ ತೊಡೆದು ಹಾಕಿದ ಧರ್ಮ ಲಿಂಗಾಯತ ಧರ್ಮವಾಗಿದೆ. 12 ನೇ ಶತಮಾನದಲ್ಲಿ ಕಾಯಕ ಆಧಾರಿತ ಶರಣರ ವೃತ್ತಿಯಲ್ಲಿ ಮುಂದುವರೆದ ಜನಾಂಗವು ಮುಂದಿನ ದಿನಮಾನದಲ್ಲಿ ಜಾತಿ, ಉಪಜಾತಿಯಾಗಿ ಪರಿಣಮಿಸಿದವು ಅವುಗಳನ್ನು ಒಗ್ಗೂಡಿಸಿ ಲಿಂಗಾಯತ ಧರ್ಮದಡಿ ಸೇರಿಸಲಾಗಿದೆ. ಇಂತಹ ಧರ್ಮದಲ್ಲಿ ಒಳಪಂಗಡಗಳು ಇರುವುದರಿಂದ ಇವೆಲ್ಲವೂ ಒಂದೆ ಧರ್ಮಕ್ಕೆ ಸೇರಿವೆ ಎಂಬುದು ಬಿಂಬಿತವಾಗಿದ್ದು ಇದನ್ನು ರಾಜ್ಯ ವ್ಯಾಪಿ ಸಂಘಟಿಸಿದೆ ಎಂದರು.
ಅಖಿಲ ಕರ್ನಾಟಕ ಒಳಪಂಗಡಗಳ ಏಕತಾ ಸಮಿತಿ ಕಳೆದ 10 ವರ್ಷದಲ್ಲಿ ಪಂಗಡಗಳನ್ನು ಒಗ್ಗೂಡಿಸಿ ಸಮಾಜ ಕೆಲಸ ಮಾಡುತ್ತಿದೆ. ಈ ಧರ್ಮಕ್ಕೆ ಮಾನ್ಯತೆ ಸಿಗಬೇಕು ಎಂದು ಹೋರಾಟ ಕೂಡಾ ಮಾಡುತ್ತಿದೆ. ಜಿಲ್ಲೆ, ತಾಲೂಕು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಲಿಂಗಾಯತ ಜನ ಜಾಗೃತಿ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಮುಂದಿನ ದಿನದಲ್ಲಿ ಮತ್ತಷ್ಟು ಕಾರ್ಯಕ್ರಮ ಆಯೋಜಿಸಿ ಸಮಾಜವನ್ನು ಸದೃಢ ಮಾಡುವ ನಿಟ್ಟಿನಲ್ಲಿ ಲಿಂಗಾಯತ ಸಮಾವೇಶ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಹೊರ ತರಲಿದ್ದು ಅಂದಿನ ಸಮಾವೇಶವು ಡಾ.ತೋಂಟದ ಸಿದ್ದರಾಮ ಸ್ವಾಮಿಜಿ ನೇತ್ರತ್ವದಲ್ಲಿ ಜರುಗಲಿದೆ.
    ಶ್ರೀ ಗುರು ಮಹಾಂತ ಸ್ವಾಮಿಜಿ, ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ, ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಜಿ, ಶ್ರೀ ಪಂಚಾಕ್ಷರಿ ಸ್ವಾಮಿಜಿ ನೇತೃತ್ವವಹಿಸುವರು. ಸಮಿತಿ ರಾಜ್ಯಾಧ್ಯಕ್ಷ ಜಿ.ವಿ.ಕೊಂಗವಾಡ ಅಧ್ಯಕ್ಷತೆವಹಿಸಲಿದ್ದು ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಸಮಿತಿ ಮಹಿಳಾ ಘಟಕ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಿಲಾಧ್ಯಕ್ಷ ಮಲ್ಲಿಕಾರ್ಜುನ ಪಳೋಟಿ, ಬಸವರಾಜ ರೊಟ್ಟಿ, ಸುನಂದಾ ಎಮ್ಮಿ ಅತಿಥಿಯಾಗಿ ಆಗಮಿಸುವರು. ಸಮಾವೇಶಕ್ಕೆ  ಲಿಂಗಾಯತ ಒಳ ಪಂಗಡಗಳ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಬೇಕು ಎಂದರು.
     ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಶೆಟ್ಟನ್ನವರ  ಪ್ರಭು ನಡಕಟ್ಟಿ ಪಕ್ಕೀಗೌಡ್ರ್ ನಾಗನಗೌಡ್ರ್   ಸುಭಾಸ್ ಸಜ್ಜನ  ಎಫ್ ಎಸ್ ಕೊತಂಬರಿ ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564892
ನವೀನ ಹಳೆಯದು

نموذج الاتصال