ರಾಜ್ಯ ಗ್ರಾಮ ಪಂಚಾಯತ ನೌಕರರ ಪ್ರಮುಖ ಬೇಡಿಕೆಗಳ ಇತ್ಯರ್ಥಕ್ಕಾಗಿ ಜಿಲ್ಲಾ ಪಂಚಾಯತ ಎದುರಿಗೆ 06 ರಂದು ಮುಷ್ಕರ್ .
ಧಾರವಾಡ 04 :
ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘವು ದಿ 06. ಮುಂಜಾನೆ 11.00 ಗಂಟೆಗೆ. ಜಿಲ್ಲಾ ಪಂಚಾಯತ ಎದುರಿಗೆ ಪ್ರತಿಭಟನೆಯನ್ನುಕೈಗೊಳ್ಳಲಿದೆ ಎಂದು ಬಿ.ಐ.ಈಳಿಗೇರ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಕೆಳಗಿನ ಪ್ರಮುಖ ಬೇಡಿಕೆಗಳ ಇತ್ಯರ್ಥಕ್ಕಾಗಿ ಮುಷ್ಕರ್ ಹಮ್ಮಿಕೊಳ್ಳಲು ತೀರ್ಮಾನಿಸಿದೆ.
ಎಂದರು
ಧಾರವಾಡ ಜಿಲ್ಲೆಯ
ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 6 ವರ್ಷ ಸೇವೆ ಸಲ್ಲಿಸಿದ ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪಾಸಾದ ಬಿಲ್‌ಕ್ಲರ್ಕ, ಕ್ಲರ್ಕ ಹಾಗೂ ಕರ್ಕ ಕಮ್ ಕಂಪ್ಯೂಟರ್ ಆಪರೇಟರ್ ಅರ್ಹ ನೌಕರರು ಅನುಕ್ರಮವಾಗಿ ಗ್ರೇಡ್-2 ಹಾಗೂ ಲೆಖ್ಯಸಹಾಯಕರ ಹುದ್ದೆಗಳಿಗೆ 22ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತಿಯಲ್ಲಿ ಜೇಷ್ಠತಾ ಪಟ್ಟಿ ತಯಾರಿಸಿ ಸರಕಾರದ ಆದೇಶದಂತೆ ಮುಂಬಡ್ತಿ (ನೇರ ನೇಮಕಾತಿ) ನೀಡಬೇಕಾಗಿತ್ತು. ಕೆಲ ನೌಕರರು ಈ ವಿಳಂಬನೀತಿಗೆ ಆಹುತಿಯಾಗಿ ನೌಕರಯಿಂದ ನಿವೃತ್ತರಾಗಿದ್ದಾರೆ. ಆದರು ಜಿಲ್ಲಾ ಪಂಚಾಯತ ಅಧಿಕಾರಿಗಳು ಸರಕಾರದ ಸೂಕ್ತ ಆದೇಶಗಳಿದ್ದರೂ ಇಲ್ಲಿಯವರೆಗೆ ಮುಂಬಡ್ತಿ ನೀಡದೇ ಅರ್ಹ ನೌಕರರಿಗೆ ಅನ್ಯಾಯ ಮಾಡಿದ್ದಾರೆ. ಈ ಪ್ರಕ್ರಿಯೆ ಪ್ರಾರಂಭ ಮಾಡಿ ನಿಯಮಾನುಸಾರವಾಗಿ ಸರಕಾರದ ಆದೇಶಗಳನ್ನು ಅಭ್ಯಾಸ ಮಾಡದೇ ಇಲ್ಲದ ನೆಪ ಹೇಳಿ ನೌಕರರ ಮುಂಬಡ್ತಿಗೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ ವಿಳಂಬ ನೀತಿಯನ್ನು ಖಂಡಿಸುತ್ತದೆ ಹಾಗೂ ನಿಯಮಾವಳಿಗಳನ್ನು ಗಾಳಿಗೆ ತೂರಿ ನೇರ ನೇಮಕಾತಿಗಳನ್ನು ಮಾಡದೇ ಇದ್ದದ್ದು ಅನ್ಯಾಯವನ್ನು ತಿಳಿದು ಅಕ್ಟೋಬರ್ 05 ರ ಒಳಗಾಗಿ ಮುಂಬಡ್ತಿ ಆದೇಶ ಮಾಡದೇ ಇದ್ದಲ್ಲಿ ದಿನಾಂಕ:06 ರಂದು ಧಾರವಾಡ ಜಿಲ್ಲೆಯ ಎಲ್ಲಾ ನೌಕರರು ತಮ್ಮ ಕರ್ತವ್ಯವನ್ನು ಬಿಟ್ಟು ಜಿಲ್ಲಾ ಪಂಚಾಯತ ಎದುರಿಗೆ ಮುಷ್ಕರ್ ಮಾಡಲಿದ್ದಾರೆ. ಅದಕ್ಕೆ ಹೊಣೆ ಜಿಲ್ಲಾ ಪಂಚಾಯತಿನೇ ಜವಾಬ್ದಾರಿ. ಕೂಡಲೇ ಆದೇಶ ಮಾಡಿ ನ್ಯಾಯ ವದಗಿಸಿ. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ನೌಕರರಿಗೆ ಸೇವೆ ಸಲ್ಲಿಸಿ ಪಡೆಯುತ್ತಿರುವ ವೇತನಕ್ಕೆ
ನಿವೃತ್ತರಾದ ನಂತರ ಸರಕಾರದ ಆದೇಶದಂತೆ (29.09.2020) .ಆದೇಶದ ಸುತ್ತೋಲೆಯಂತೆ ಕನಿಷ್ಠ 20 ತಿಂಗಳು ಅವರು ಅನುಗುಣವಾಗಿ ನಿವೃತ್ತರಾದ ದಿನ ಅವರಿಗೆ ಗ್ರಾಚ್ಯುಟಿ ನೀಡಿ ಗೌರವಿಸಬೇಕು ಆದರೆ ನಮ್ಮ ಜಿಲ್ಲೆಯಲ್ಲಿ ನಿವೃತ್ತರಾದಾಗ ಅವರಿಗೆ ಗ್ರಾಚ್ಯುಟಿ ಹಣ ನೀಡದೇ ಗೌರವಿಸುವ ಕೆಲಸ ಕೂಡ ಆಗುತ್ತಿಲ್ಲ. ಇದು ಗ್ರಾಮ ಪಂಚಾಯತ ನೌಕರರಿಗೆ ಮಾಡುವ ಅನ್ಯಾಯಹಾಗೂ ಅಸಮಾಧಾನ ತುಂಬಿದೆ. ಆದ್ದರಿಂದ ನಿವೃತ್ತರಾಗುವ 03 ತಿಂಗಳು ಮೊದಲೆ ಅವರ ಫೈಲ್‌ನ್ನು ತರಿಸಿ ಸೂಕ್ತ ಕ್ರಮ ತೆಗೆದುಕೊಂಡು ಗ್ರಾಚ್ಯಟಿ ನೀಡಬೇಕು. ಈಗ ಬಾಕಿ ಇದ್ದ ಎಲ್ಲ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಸಂಘ ವತ್ತಾಯಿಸುತ್ತದೆ.
ಸರಕಾರದ ಸುತ್ತೋಲೆಯಂತೆ ಗ್ರಾಮ ಪಂಚಾಯತ ನೌಕರರು ಸೇವೆಯಲ್ಲಿ ದುಡಿದು ಮಡಿದ ನೌಕರರ ಸಂಬಂಧಿಕರಿಗೆ ಕಂಪ್ಯಾಸ್‌ನೇಂಟ್ ಗೌಂಡ್ (ಅನುಕಂಪದ ಆಧಾರದ ಮೇಲೆ, ಅವರ ಶಿಕ್ಷಣಕ್ಕೆ ತಕ್ಕಂತೆ ಸೂಕ್ತ ಉದ್ಯೋಗ ನೀಡಬೇಕು) ಆದ್ದರಿಮದ ಜಿಲ್ಲಾ ಪಂಚಾಯತಿ ಅಧಿಕಾರಿಗಳು -
ಧಾರವಾಡ ಜಿಲ್ಲೆಯ ಶಿರೂರ ಹಾಗೂ ಶಿವಳ್ಳಿ ಪಂಚಾಯತಿಯಲ್ಲಿ ಸರಿಯಾಗಿ ಆದೇಶ ಆಗದೇ ನೌಕರರಿಗೆ ಅನ್ಯಾಯ ಆಗಿದೆ.
ಗ್ರಾಮ ಪಂಚಾಯತಗಳಲ್ಲಿ ಕೆಲಸ ಮಾಡುತ್ತಿರುವ ಪಂಪ ಆಪರೇಟರ್, ವಾಟರ್‌ಮನ್, ಶಿಪಾಯಿ, ಸಫಾಯಿಗಳು 5 ವರ್ಷ ಸೇವೆ ಸಲ್ಲಿಸಿ ಎಸ್.ಎಸ್.ಎಲ್.ಸಿ ಪಾಸಾಗಿದ್ದರೆ, ಬಿಲ್‌ಕ್ಲರ್ಕ ಹುದ್ದೆ ಪಂಚಾಯತಿಯಲ್ಲಿ ಖಾಲಿಯಾದಾಗ ಇವರಿಗೆ ಆದ್ಯತೆ ಕೊಟ್ಟು ಬಿಲ್ ಕರ್ಕ ಹುದ್ದೆ ನೇಮಿಸಬೇಕು. ಕೆಲ ಪಂಚಾಯತಿಗಳಲ್ಲಿ ಈ ಕ್ರಮ ತೆಗೆದುಕೊಳ್ಳದೇ ಹೊರಗಿನ ಅಭ್ಯರ್ಥಿಗಳನ್ನು ನೇಮಕ ಮಾಡುತ್ತಿದ್ದಾರೆ. ಇದು ನಿಲ್ಲಬೇಕು.
ಗ್ರಾಮ ಪಂಚಾಯತಗಳಲ್ಲಿ ಧ್ವಜಾರೋಹಣ ಮಾಡುವ ಮಾಡುವ ನೌಕರರಿಗೆ ಸರಕಾರದ ನೀಡಬೇಕು. ಆದರೆ ಕೆಲ
ಆದೇಶದಂತೆ ಪ್ರತಿ ದಿನ ಗೌರವ ಧನ ರೂ.30+30 ಎರಡು-ಮೂರು ವರ್ಷಗಳ ಪ೦ಚಾಯತಿಗಳಲ್ಲಿ ಗೌರವ ಧನವನ್ನು ಬಾಕಿ
ಉಳಿಸಿಕೊಂಡಿದ್ದಾರೆ. ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ರಾಜ್ಯ ಸಮಿತಿ ಈಗಾಗಲೇ ಸರಕಾರಕ್ಕೆ ಪಂಚಾಯತಿಯಲ್ಲಿ ಒಳಗಾಗಿ ಕೆಲಸ ಮಾಡುತ್ತಿರುವ ದಿನಾಂಕ:31.10.2017ರ ಅನುಮೋದನೆ ಆಗದ ನೌಕರರನ್ನು ಸರಳ ನೀಯಮಾವಳಿಗಳೊಂದಿಗೆ ಏಕಕಾಲಕ್ಕೆ ಅನುಮೋದನೆ ಮಾಡಲು ಒತ್ತಾಯಿಸಿದೆ ಹಾಗೂ ಸರಕಾರ ಒಪ್ಪಿಕೊಂಡಿದೆ. ತಾವು ಕೂಡ ಶಿಫಾರಸ್ಸು ಮಾಡಿ ಒತ್ತಾಯಿಸಬೇಕು. ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿರುವ ಅನುಮೋದನೆ ಆಗದ ನೌಕರರಿಗೆ ಕೂಡಲೇ ಅನುಮೋದನೆ ಆಗಬೇಕು
ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯದರ್ಶಿಗಳನ್ನು ಒತ್ತಾಯಿಸಿದರು.
ಎಫ್.ಜಿ. ನಧಾಪ್,ಎಂ.ಎನ್. ಪಾಟೀಲ,ಭೀಮಸೇನ ಕಾಗಿ, ಮನೋಜ ತೋರನಗಟ್ಟಿ, ಜೋಶಫ್ ಇದ್ದರು.