ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಪ್ರತಿಭಾ ಕಾರಂಜಿ ಸಹಕಾರಿ
ಧಾರವಾಡ 21 : ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ್ ಬಮಕ್ಕನವರ ಹೇಳಿದರು
ಹು-ಧಾ ವಾಡ್೯ ನಂ 26 ರ ಸುತಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನವನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟನೆಯನ್ನು
ಸಸಿಗೆ ನೀರುಹಾಕಿ ಜಗ್ಗಲಿಗೆ ಬಾರಿಸುವ ಮೂಲಕ ನೇರವೇರಿಸಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಹಿರಿಯರಾದ ಕಲ್ಲಯ್ಯ ಗ ಮೂಕಶಿವಯ್ಯನವರ, ಸೋಮಯ್ಯ ಸಂ ಮೂಕಶಿವಯ್ಯನವರ, ಚನ್ನಬಸಪ್ಪ ಬ ಹಳವೂರ , ಎಸ ಡಿ ಎಮ ಸಿ ಅದ್ಯಕ್ಷರಾದ ಸಿದ್ದಪ್ಪ ಕೆಂ ಕುಂಬಾರ ಅದ್ಯಕ್ಷತೆವಹಿಸಿದ್ದರು
ಸದಸ್ಯರಾದ ಅರ್ಜುನ್ ಗೊರವಿ , ಶೇಖರ್ ಗೊರವಿ, ಸೋಮಯ್ಯ ಮೂಕಶಿವಯ್ಯನವರ ,ಸಿದ್ದಪ್ಪ ವಾಲಿಕಾರ ಕರೆಪ್ಪ ಗುರಣವರ ನಿಂಗಪ್ಪ ಕೆ ಮಾದರ ಅತಿಥಿಗಳಾಗಿ ಆಗಮಿಸಿದ್ದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು ಶಾಲಾ ಪ್ರಧಾನ ಗುರುಗಳಾದ ಲಿಂಗರಾಜ ಬೆಟಗೇರಿ ಸ್ವಾಗತಿಸಿದರು ಶ್ರೀ ಮತಿ ಆಶಾ ಮುನವಳ್ಳಿ ಕಾರ್ಯಕ್ರಮ ನಿರೂಪಿಸಿದರು ಶ್ರೀ ಮತಿ ವಿದ್ಯಾ ಕುಲಕರ್ಣಿ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂರ್ಪಕಿಸಿರಿ:9945564891