ವಿದ್ಯಾರ್ಥಿ ಸ್ನೇಹಿ ಶಿಕ್ಷಕ, ಪ್ಯಾರಾಮೆಡಿಕಲ್ ಯೂಟ್ಯೂಬರ್ ಶ್ರೀ ಇಸ್ಮಾಯಿಲ್ ತಹಶೀಲ್ದಾರ್ ಅವರಿಗೆ ಕರುನಾಡ ಸಾಧಕರು ಪ್ರಶಸ್ತಿ
ಧಾರವಾಡ: ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಹಾಗೂ ಮಹಿಳಾ ಧ್ವನಿ ಸಂಸ್ಥೆ ಕೊಪ್ಪಳ ವತಿಯಿಂದ ಧಾರವಾಡದ ರಂಗಾಯಣದಲ್ಲಿ ನಡೆದ ಕರುನಾಡ ಸಾಧಕರು ಪ್ರಶಸ್ತಿ ಪುರಸ್ಕಾರ ಸಂಭ್ರಮದಲ್ಲಿ, ಇಸ್ಮಾಯಿಲ್ ತಹಸೀಲ್ದಾರ್ ಅವರ ಶಿಕ್ಷಣ ಕ್ಷೇತ್ರದ ಅನುಪಮ ಸೇವೆಯನ್ನು ಗುರುತಿಸಿ ಹೈಬ್ರೀಡ್ ನ್ಯೂಸ್ ಕರ್ನಾಟಕ ಅಚಿವರ್ಸ್ ಅವಾರ್ಡ್-2023 ನೀಡಿ ಗೌರವಿಸಲಾಗಿದೆ.
ಧಾರವಾಡ ಮೂಲದವರಾದ Smile talk Paramedical ಚಾನೆಲ್ಲಿನ Youtuber ಶ್ರೀ ಇಸ್ಮಾಯಿಲ್ ತಹಸೀಲ್ದಾರ್ ಅವರು ಸದ್ಯ ಧಾರವಾಡ ಜಿಲ್ಲಾಸ್ಪತ್ರೆಯ ಪ್ಯಾರಾಮೆಡಿಕಲ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರ ಈ ನಿಸ್ವಾರ್ಥ ಶೈಕ್ಷಣಿಕ ಸೇವೆಗೆ ಸನ್ಮಾನಿಸಿ, ಗೌರವಿಸಲು ಹರ್ಷವೆನಿಸಿದೆ ಅವರಿಗೆ ಒಳಿತಾಗಲೆಂದು ಹೈಬ್ರೀಡ್ ನ್ಯೂಸ್ ಸಂಸ್ಥಾಪಕ, ನಿರ್ದೇಶಕರಾದ ಡಾ. ಬಿ. ಎನ್. ಹೊರಪೇಟೆ ತಿಳಿಸಿದರು.
Smile Talk Paramedical official ಎಂಬ ತಮ್ಮ ಯೂಟ್ಯೂಬ್ ಚಾನೆಲ್ ಮುಖಾಂತರ ಬಿಡುವಿಲ್ಲದೇ ಸರಣಿಯಾಗಿ ವಿದ್ಯಾರ್ಥಿ-ಪೋಷಕರಿಗೆ ಹಾಗೆಯೇ, SSLC-PUC ಮುಗಿಸಿದ ಬಡ ವಿದ್ಯಾರ್ಥಿಗಳಿಗೆ ಅರೆವೈದ್ಯಕೀಯ ಹಾಗೂ ನರ್ಸಿಂಗ್ ಶಿಕ್ಷಣ ಕಲಿಯುವಂತೆ ಪ್ರೇರೆಪಿಸುತ್ತಿದ್ದಾರೆ. ಬಡ ಮಕ್ಕಳು ಸಹ ವೈದ್ಯಕೀಯ ಸೇವೆಯನ್ನು ಮಾಡಲು ವೈದ್ಯಕೀಯ ಕ್ಷೇತ್ರಕ್ಕೆ ಬರಬೇಕೆನ್ನುವುದು ಅವರ ಕಾಳಜಿ. ಇದಕ್ಕಾಗಿ ಅವರು ಸರಕಾರಿ ಕೋಟಾದಡಿಯಲ್ಲಿ ಅದರಲ್ಲೂ ವಿಶೇಷವಾಗಿ ಖಾಸಗಿ ಕಾಲೇಜುಗಳಲ್ಲಿಯೂ ಕೂಡ ರಾಜ್ಯದಲ್ಲಿ ಸರ್ಕಾರಿ ಸೀಟ್‌ಗಳನ್ನು ಯಾವ ರೀತಿ ಪಡೆದುಕೊಳ್ಳಬೇಕೆಂದು ಮುತುವರ್ಜಿಯಿಂದ ನಿರಂತರವಾಗಿ ಮಾಹಿತಿ ನೀಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾಹಿತಿಯನ್ನು ವಿಡಿಯೋ ಮುಖಾಂತರ, ಅವಶ್ಯವೆನಿಸಿದಾಗ ಸರಣಿಯಾಗಿ ಬೆಂಬಿಡದೇ ಲೈವ್ ಮುಖಾಂತರವೂ ಕೂಡ ಮಾಹಿತಿ ನೀಡುವ ಕೆಲಸ ಪ್ರತಿನಿತ್ಯ ಚಾಚೂ ತಪ್ಪದೇ ಮಾಡುತ್ತಿದ್ದಾರೆ.
ಇವರು ನೀಡುವ ಮಾಹಿತಿಯಿಂದ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಷ್ಟೋ ಲೆಕ್ಕಕ್ಕೆ ಸಿಗದ ಬಡ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿಯಲ್ಲಿ ಅರೆ ವೈದ್ಯಕೀಯ ಹಾಗೂ ನರ್ಸಿಂಗ್ ಕೋರ್ಸ್‌ನ್ನು ಕಲಿಯುತ್ತಿದ್ದಾರೆ. “ಸರಕಾರದ ಅಧಿಕೃತ ವೆಬ್‌ಸೈಟ್‌ನ ಮಾಹಿತಿಯಲ್ಲಿ ಏನಾದರೂ ಲೋಪ ಕಾಣಸಿಗಬಹುದೇ, ವಿನಹ ಇವರಿಂದಲ್ಲ!” ಅಷ್ಟೊಂದು ಅಚ್ಚುಕಟ್ಟಾಗಿ ಪ್ರತಿಯೊಂದನ್ನು ಮನವರಿಕೆಯ ಜೊತೆಗೆ ಮಾಹಿತಿ ನೀಡುತ್ತಾರೆ, ವಿದ್ಯಾರ್ಥಿಗಳು ಇವರ ಚಾನಲ್ಲಿಗೆ ಸಬ್‌ಸ್ಕ್ರೈಬ್ ಆಗಿ ಮಾಹಿತಿ ಪಡೆಯಿರಿ ಎಂದು ಸಾಮಾಜಿಕ ಕಾರ್ಯಕರ್ತ ಶಿವರಾಜ್ ಮೋತಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಪ್ರಶಸ್ತಿ ಸಮಾರಂಭದಲ್ಲಿ ವೇದಿಕೆಯ ಮೇಲೆ ಡಾ. ಮಹೇಶ್ವರ ಮಹಾಸ್ವಾಮಿ ನಂದಿಪುರ ಕ್ಷೇತ್ರ, ಗಾಡಿತಾತ ಶಿವಶರಣರು ಚೌಕಿಮಠ, ಮೃತ್ಯುಂಜಯ ವಸ್ತ್ರದ್, ದೇವೆಂದ್ರಪ್ಪ ಸಿಂಧೋಗಿ, ಪ್ರಿಯದರ್ಶಿನಿ ಮುಂಡರಗಿಮಠ, ಅರ್ಜುನ್ ಸಾಗರ್, ಸಂಜಯ್‌ಕುಮಾರ್ ಬಿರಾದಾರ ಮುಂತಾದವರು ಹಾಜರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ : 9945564891