ಮಲಪ್ರಭಾ ಕಾಲುವೆ ನವೀಕರಣದಲ್ಲಿ ಕೋಟಿ ಕೋಟಿ ಲೂಟಿ. 114 ಕಿ ಮಿ ಕಾಲುವೆಗೆ 2 ಸಾವಿರದಾ 1 ನೂರಾ 78 ಕೋಟಿ 39 ಲಕ್ಷ ವೆಚ್ಚ.
ಧಾರವಾಡ 22 : ಮಲಪ್ರಭಾ ಕಾಲುವೆ ನವೀಕರಣದಲ್ಲಿ ಕೋಟಿ ಕೋಟಿ ಲೂಟಿ. 114 ಕಿ ಮಿ ಕಾಲುವೆಗೆ 2 ಸಾವಿರದಾ 1 ನೂರಾ 78 ಕೋಟಿ 39 ಲಕ್ಷ ವೆಚ್ಚ. ಧಾರವಾಡ 22 : ಮಲಪ್ರಭಾ ಕಾಲುವೆಯ ನವೀಕರಣ ಕಾಮಗಾರಿಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದರ ಬಗ್ಗೆ ಒಂದೊಂದೆ ಧಾಖಲೆಗಳು ಹೊರಬರುತ್ತಿವೆ. ರೈತ ಸೇನಾ ಕರ್ನಾಟಕದ ಅಧ್ಯಕ್ಷ ಮತ್ತು ಮಹಾದಾಯಿ ಹೋರಾಟಗಾರ ವಿರೇಶ ಸೊಬರದಮಠ ಸ್ವಾಮೀಜಿ, ಹಗರಣ ಬಯಲಿಗೆ ಎಳೆದು ತನಿಖೆಗೆ ಆಗ್ರಹಿಸಿದ್ದಾರೆ. ಈಗಾಗಲೇ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು
ಧಾಖಲು ಮಾಡಿರುವ ಸೊಬರದಮಠ 114 ಕಿಮಿ ಕಾಲುವೆ ನವೀಕರಣ ಕಾಮಗಾರಿಗೆ 2 ಸಾವಿರದಾ 1 ನೂರಾ 78 ಕೋಟಿ ಲೋಕಾಯುಕ್ತ ಕಟ್ಟೆ ಹತ್ತಿದ್ದಾರೆ.
39 ಲಕ್ಷ ರೂಪಾಯಿಗೆ ಡಿ ಪಿ ಆರ್ ಮಾಡಿಕೊಂಡು, ಕಾಮಗಾರಿ ಸಂಪೂರ್ಣ ಮುಗಿಸದೆ ಹಣ ಪಡೆದುಕೊಂಡಿದ್ದಾರೆಂದು ಆರೋಪಿಸಿದ್ದಾರೆ. ಈಗಾಗಲೇ ಗುತ್ತಿಗೆದಾರ ಡಿ ವೈ ಉಪ್ಪಾರ,, ಬ್ಯಾಹಟ್ಟಿ ಉಪವಿಭಾಗದಿಂದ 1 ಸಾವಿರದಾ 43 ಕೋಟಿ ಬಿಲ್ ಪಡೆದುಕೊಂಡಿದ್ದು, ಈ ಕುರಿತು ತನಿಖೆ ನಡೆಸುವಂತೆ. ಲೋಕಾಯುಕ್ತ ಕಟ್ಟೆ ಹತ್ತಿದ್ದಾರೆ.
1120 ಕೋಟಿಯಲ್ಲಿ, ಬ್ರಿಡ್ಜ್, ಸರ್ವಿಸ್ ರಸ್ತೆ, ಜಂಗಲ್ ಕ್ಲಿಯರೆನ್ಸ್ ಎಲ್ಲವೂ ಮುಗಿಯುತ್ತವೆ ಎಂದಿರುವ ಸೊಬರದಮಠ, ಉಳಿದ 1038 ಕೋಟಿ ಹಣ ಯಾರ ಜೇಬಿಗೆ ಹೋಗಿದೆ ಎಂದು ಪ್ರಶ್ನಿಸಿದ್ದಾರೆ. ಮಲಪ್ರಭಾ ಕಾಲುವೆ ನವೀಕರಣ ಕಾಮಗಾರಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದುಕೆಲವು ಕಡೆ ಕೆಲಸ ಮಾಡದೆ ದುಡ್ಡು ತೆಗೆಯಲಾಗಿದ್ದು, ಕೆಲ ಅಧಿಕಾರಿಗಳು ಹಾಗೂ ಶಾಸಕರು ಇದರಲ್ಲಿ ಪಾಲ್ಗೊಂಡಿದ್ದಾರೆ
ಎಂಬ ಶಂಕೆ ವ್ಯಕ್ತವಾಗಿದೆ. ದುಡ್ಡು ಹೊಡೆಯುವ ದುರುದ್ದೇಶದಿಂದಲೇ ಡಿ ಪಿ ಆರ್ ಮೊತ್ತವನ್ನು ಅವೈಜ್ಞಾನಿಕವಾಗಿ ಹೆಚ್ಚಿಗೆ ಮಾಡಿ, ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಲಾಗಿದೆ ಎನ್ನಲಾಗಿದೆ. ಸಧ್ಯ ಲೋಕಾಯುಕ್ತ ಮೆಟ್ಟಲು ಹತ್ತಿರುವ ಈ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈ ಪ್ರಕರಣ ಕೆಲ ಹಾಲಿ ಶಾಸಕರ ಬುಡಕ್ಕೆ ಬರುವ ಸಾಧ್ಯತೆ ಗೋಚರವಾಗುತ್ತಿದ್ದು, ಹೈಕೋರ್ಟ ನಲ್ಲಿ ದಾವೆ ಹೂಡಿ, ಅಲ್ಲಿಂದ ಅನುಮತಿ ಪಡೆದು ಈ ಪ್ರಕರಣವನ್ನು ಸಿ ಬಿ ಐ ಗೆ ಕೊಡುವ ನಿರ್ಧಾರ ಮಾಡಲಾಗಿದೆ ಎಂದು ವಿರೇಶ ಸೊಬರದಮಠ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891