ಸೆ 5 ರಿಂದ ಶಿಕ್ಷಣದ -- ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಭಾರತ ಯಾತ್ರೆ-ಬಸವರಾಜ ಗುರಿಕಾರ
ಧರವಾಡ 01 : ಅಖಿಲ ಭಾರತ ಶಿಕ್ಷಕರ ಪೆಡರೇಷನ್ ನವದೆಹಲಿ ವತಿಯಿಂದ ಶಿಕ್ಷಣದ ಹಾಗೂ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸಪ್ಟೆಂಬರ 5 ರಿಂದ ಅಕ್ಟೋಬರ 5 ರ ವರೆಗೆ “ಭಾರತ ಯಾತ್ರೆ” ಆರಂಭವಾಗಲಿದೆ. ನಾಲ್ಕು ತಂಡಗಳಲ್ಲಿ ಭಾರತ ಯಾತ್ರೆ ಆರಂಭವಾಗಲಿದ್ದು, ಮೊದಲ ತಂಡ ಸಪ್ಟೆಂಬರ 5 ರಂದು ಕನ್ಯಾಕುಮಾರಿಯಿಂದ ಆರಂಭಗೊಳ್ಳಲಿದೆ ಎಂದು ಅಖಿಲ ಭಾರತ ಶಿಕ್ಷಕರ ಪೆಡರೇಷನ್ ನವದೆಹಲಿಯ ಕಾರಾಧ್ಯಕ್ಷರಾದ ಬಸವರಾಜ ಗುರಿಕಾರ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ಯಾಕುಮಾರಿ, ಕೇರಳ, ತಮಿಳುನಾಡು, ತೆಲಂಗಾಣ, ಆಂದ್ರ ಪ್ರದೇಶ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಮದ್ಯ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮುಖಾಂತರ ಸಂಚರಿಸಿ ಅಕ್ಟೋಬರ 5ರಂದು ನವದೆಹಲಿ ತಲುಪಲಿದೆ.ಸೆ. 21 ಕ್ಕೆ ಧಾರವಾಡ ಕ್ಕೆ ಆಗಮಿಸುತ್ತದೆ ಎಂದರು.
ಅಖಿಲ ಭಾರತ ಶಿಕ್ಷಕರ ಪೆಡರೇಷನ್( AIPTF) ದ ಕಾರಾಧ್ಯಕ್ಷರಾದ ಬಸವರಾಜ ಗುರಿಕಾರ ನೇತೃತ್ವ ವಹಿಸಲಿದ್ದು, ಖಜಾಂಚಿ ಹರಿಗೋವಿಂದನ್, ಉಪ-ಮಹಾ ಪ್ರದಾನ ಕಾವ್ಯದರ್ಶಿ ರಂಗರಾಜನ್ ಭಾಗವಹಿಸಲಿದ್ದಾರೆ. ಉಳಿದೆಲ್ಲಾ ಭಾರತ ಯಾತ್ರೆಗಳಿಗಿಂತ ಈ ಯಾತ್ರೆ ಬಹಳಷ್ಟು ಪ್ರದೇಶಗಳಲ್ಲಿ ಸಂಚರಿಸಲಿದೆ ಎಂದರು.
ಎರಡನೇಯ ಯಾತ್ರೆ ಅಸ್ಸಾಂದ ಗುವಾಹಟಿಯಿಂದ ಆರಂಭವಾಗಿ ಅಸ್ಸಾಂ, ಪಶ್ಚಿಮ ಬಂಗಾಲ, ಓಡಿಸ್ಸಾ, ಜಾರ್ಖಂಡ, ಬಿಹಾರ, ಉತ್ತರ ಪ್ರದೇಶದ ಮುಖಾಂತರ ನವದೆಹಲಿ ತಲುಪಲಿದೆ. 3 ನೇ ಯಾತ್ರೆ ಗುಜರಾತದ ಸೋಮನಾಥ ಪುರದಿಂದ ಆರಂಭವಾಗಿ ಗುಜರಾತ, ಮಹಾರಾಷ್ಟ್ರ, ಮದ್ಯಪ್ರದೇಶ, ರಾಜಸ್ತಾನ, ಹರಿಯಾಣ, ಮುಖಾಂತರ, ನವದೆಹಲಿ ತಲುಪಲಿದೆ. 4ನೇ ಯಾತ್ರೆ ಪಂಜಾಬ ರಾಜ್ಯದಿಂದ ಆರಂಭವಾಗಿ ಪಂಜಾಬ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶದ ಮುಖಾಂತರ ನವದೆಹಲಿ ತಲುಪಲಿದೆ ಎಂದರು.
ಎಲ್ಲಾ ರಾಜ್ಯಗಳಲ್ಲಿ ಬಹಿರಂಗ ಸಭೆಗಳು, ಕ್ಯಾಲಿಗಳು ಜರುಗಲಿವೆ. ಪ್ರಮುಖವಾಗಿ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆಗೊಳಿಸುವುದು, ನೂತನ ಶಿಕ್ಷಣ ನೀತಿಯಲ್ಲಿಯ ಲೋಪದೋಷಗಳು ಹಾಗೂ ಶಿಕ್ಷಕ ವಿರೋಧಿ ನೀತಿಗಳನ್ನು ಕೈಬಿಡುವುದು, ಶಿಕ್ಷಕರುಗಳಿಗೆ ಏಕರೂಪ ವೇತನ ಶ್ರೇಣಿ ನಿಗದಿಗೊಳಿಸುವುದು, ಅತಿಥಿ ಶಿಕ್ಷಕರುಗಳನ್ನು ಖಾಯಂಗೊಳಿಸುವುದು. ಈ ಬೇಡಿಕೆಗಳ ಈಡೇರಿಕೆಗಾಗಿ ಭಾರತ ಯಾತ್ರೆ ಜರುಗಲಿದೆ. ಅಖಿಲ ಭಾರತ ಶಿಕ್ಷಕರ ಪೆಡರೇಷನ್ ಅಧ್ಯಕ್ಷ ರಾಮಪಾಲ ಸಿಂಗ, ಕಾರಾಧ್ಯಕ್ಷ ಬಸವರಾಜ ಗುರಿಕಾರ, ಮಹಾ ಪ್ರದಾನ ಕಾರಾಧ್ಯಕ್ಷ ಕಮಲಕಾಂತ ತ್ರಿಪಾಠಿ, ಹರಿಗೋವಿಂದನ್ ಖಜಾಂಚಿ ಇವರ ನಾಯಕತ್ವದಲ್ಲಿ ಯಾತ್ರೆ ಜರುಗಲಿದ್ದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಬಾಗವಹಿಸಬೇಕೆಂದು ಕಾರಾಧ್ಯಕ್ಷ ಬಸವರಾಜ ಗುರಿಕಾರ ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ವಾಯ್ ಎಚ್ ಬಣವಿ , ವಿ ಎಪ್ ಚುಳಕಿ, ರಾಜಶೇಖರ ಹಾಲಪ್ಪನವರ,ರಮೇಶ ಲಿಂಗದಾಳ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ: 9945564891