ಸುವರ್ಣ ಸಾಂಸ್ಕೃತಿಕ ಸಮುಚ್ಚಯ ರಂಗಾಯಣ ಧಾರವಾಡ, ಇಲ್ಲಿ 2 ದಿನ ಪ್ರತಿದಿನ ಸಂಜೆ 7 ಗಂಟೆಗೆ ತೊಗಲು ಗೊಂಬೆಯಾಟಗಳ ಪ್ರದರ್ಶನ,

ಸುವರ್ಣ ಸಾಂಸ್ಕೃತಿಕ ಸಮುಚ್ಚಯ ರಂಗಾಯಣ ಧಾರವಾಡ, ಇಲ್ಲಿ 2 ದಿನ ಪ್ರತಿದಿನ ಸಂಜೆ 7 ಗಂಟೆಗೆ ತೊಗಲು ಗೊಂಬೆಯಾಟಗಳ ಪ್ರದರ್ಶನ,
ಛಾಯಾಚಲನೆ ಎಂಬ ಶೀರ್ಷಿಕೆಯಡಿ ಅಳಿವಿನ ಅಂಚಿನಲ್ಲಿರುವ ತೊಗಲುಗೊಂಬೆಯಾಟ ಕುರಿತ 12,13,14/09/2023 3 ದಿನ ಗೊಂಬೆಯಾಟ ಕಾರ್ಯಾಗಾರ ದಿ 15 ರಿಂದ 17 ವರೆಗೆ ತೊಗಲು ಗೊಂಬೆಗಳ ಪ್ರದರ್ಶನ 3ದಿನ ಮತ್ತು 16, 17 ರಂದು 2 ದಿನ ತೊಗಲುಗೊಂಬೆಯಾಟ ಹಾಗೂ ಈ ಮೂರು ನೆಲೆಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಧಾರವಾಡದಲ್ಲೇ ಗೊಂಬೆಯಾಟ ಕುರಿತಾದ ಇಂತಹದೊಂದು ಕಾರ್ಯಕ್ರಮ ಇದೇ ಮೊಟ್ಟ ಮೊದಲನೆಯದಾಗಿದೆ. ಎಂದು ಪ್ರಕಾಶ ಗರುಡ ತಿಳಸಿದರು .
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 
ಇದನ್ನು ಪಪೆಟ್ ಹೌಸ್ (ಗೊಂಬೆಮನೆ) ಧಾರವಾಡ ಆಯೋಜಿಸಿದ್ದು 
ಈ ಕಾರ್ಯಕ್ರಮಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ರಂಗಾಯಣ ಧಾರವಾಡ, ಕೆಂದ್ರ ಸಾಂಸ್ಕೃತಿಕ ಇಲಾಖೆ ಭಾರತ ಸರ್ಕಾರ ನವದೆಹಲಿ ಇವರ ಸಹಕಾರದಲ್ಲಿ ನಡೆಯುತ್ತದೆ.
ಸುವರ್ಣ ಸಾಂಸ್ಕೃತಿಕ ಸಮುಚ್ಚಯ ರಂಗಾಯಣ ಧಾರವಾಡ, ಇಲ್ಲಿ 2 ದಿನ ಪ್ರತಿದಿನ ಸಂಜೆ 7 ಗಂಟೆಗೆ ತೊಗಲು ಗೊಂಬೆಯಾಟಗಳ ಪ್ರದರ್ಶನ, ಪಂಡಿತ್ ಬಸವರಾಜ ರಾಜಗುರು ರಂಗಮಂದಿರದಲ್ಲಿ ಗೊಂಬೆಗಳ ಪ್ರದರ್ಶನ. (ಬೆಳಿಗ್ಗೆ 11 ರಿಂದ 1.30 ಮತ್ತು ಸಂಜೆ 4ರಿಂದ 6 ರವರೆಗೆ) ನಡೆಯುತ್ತದೆ.

- ದಿನಾಂಕ 12 ರಿಂದ 14 ರ ವರೆಗೆ 3 ದಿನ ರಂಗಾಯಣ ಧಾರವಾಡ ರೆಪರ್ಟರಿ ಕಲಾವಿದರಿಗೆ ಮತ್ತು ಆಸಕ್ತ ಆಯ್ದ 10 ಜನ ಯುವಕರಿಗೆ ಗೊಂಬೆಯಾಟದ ಪ್ರಾಥಮಿಕ ಕಾರ್ಯಾಗಾರವನ್ನು ರಂಗ ನಿರ್ದೇಶಕಿ ರಜನಿ ಗರುಡ ಇವರು ನಡೆಸಿಕೊಡುತ್ತಾರೆ(ಬೆಳಿಗ್ಗೆ 11 ರಿಂದ 1 ಗಂಟೆ, ಸಾಯಂಕಾಲ 4 ರಿಂದ 6 ಗಂಟೆಯ ವರೆಗೆ). ಈ ಕಾರ್ಯಾಗಾರವನ್ನು ಖ್ಯಾತ ರಂಗಕರ್ಮಿ, ಆಕಾಶವಾಣಿ ಧಾರವಾಡ ಡಾ. ಶಶಿಧರ ನರೇಂದ್ರ ಇವರು 12 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸುತ್ತಾರೆ.
ಗೊಂಬೆ ಪ್ರದರ್ಶನವನ್ನು ಖ್ಯಾತ ಚಿತ್ರ ಕಲಾವಿದೆ ಮತ್ತು ಕರ್ನಾಟಕ ಲಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ, ಗಾಯತ್ರಿ ದೇಸಾಯಿ ಇವರು ದಿ 15 ರ  ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸುತ್ತಾರೆ.
ಗೊಂಬೆಯಾಟಗಳ ಪ್ರದರ್ಶನವನ್ನು ದಿ 16  ಶನಿವಾರ ರಂದು ಸಂಜೆ 7 ಗಂಟೆಗೆ ಖ್ಯಾತ ಹಿಂದುಸ್ತಾನಿ ಗಾಯಕರಾದ ಪದ್ಮಶ್ರೀ ಪಂಡಿತ್ ಎಮ್. ವೆಂಕಟೇಶ್ ಕುಮಾರ್ ಇವರು ಉದ್ಘಾಟಿಸುತ್ತಾರೆ. ಅಂದೇ ಸಂಜೆ 7.15 ಕ್ಕೆ ಮನುಕುಲ ಆಶ್ರಮ ಟ್ರಸ್ಟ ತಂಡ ಬಳ್ಳಾರಿ ಇವರಿಂದ 16ನೇಯ ಶತಮಾನದ ಕವಿ ಶ್ರೇಷ್ಠ ಕನಕದಾಸರ ಜೀವನ ಕುರಿತ “ಮುತ್ತು ಬಂದಿದೆ ಕೇರಿಗೆ ತೊಗಲು ಗೊಂಬೆಯಾಟದ ಪ್ರದರ್ಶನವಿರುತ್ತದೆ. ಇದನ್ನು ಗೊಂಬೆಯಾಟದ
ತಜ್ಞರಾದ ದಿ. ಬೆಳಗಲ್‌ ವೀರಣ್ಣ ಇವರ ಮಕ್ಕಳಾದ ಶ್ರೀ ಮಲ್ಲಿಕಾರ್ಜುನ ಇವರು ನಿರ್ದೇಶಿಸಿದ್ದಾರೆ. ದಿ 17 ಭಾನುವಾರ, ಪಪೆಟ್ ಹೌಸ್ (ಗೊಂಬೆಮನೆ) ಧಾರವಾಡ ಇವರಿಂದ ಅದ್ಭುತ ರಾಮಾಯಣ ಎಂಬ ಕಥಾ ಪ್ರಸಂಗದ ತೊಗಲು ಗೊಂಬೆಯಾಟವನ್ನು ಸಂಜೆ 7 ಗಂಟೆಗೆ ಪ್ರದರ್ಶಿಸುತ್ತಾರೆ. ಈ ಕಥೆ ಕನ್ನಡದ ಕಂಪನಿ ರಂಗಭೂಮಿಯ ಖ್ಯಾತ ನಾಟಕಕಾರರಾದ ಕಂದಗಲ್ ಹನಮಂತರಾರಯರ ನಾಟಕ ಕೃತಿ ಆಧಾರಿಸಿದ್ದು, ಇದನ್ನು ಡಾ. ಪ್ರಕಾಶ ಗರುಡ ಇವರು ಗೊಂಬೆಯಾಟಕ್ಕೆ ಅಳವಡಿಸಿದ್ದಾರೆ. ರಜನಿ ಗರುಡ ಮತ್ತು ಶ್ರೀನಿವಾಸಲು (ಧರ್ಮಾವರಂ) ಇವರೀರ್ವರು ಗೊಂಬೆಗಳ ವಿನ್ಯಾಸ ಮಾಡಿದ್ದಾರೆ. ರಾಘವ ಕಮ್ಮಾರ ಸಂಗೀತ ನೀಡಿದ್ದಾರೆ. ರಜನಿ ಗರುಡ ಈ ಆಟವನ್ನು ನಿರ್ದೇಶಿಸಿದ್ದು
 ಈ ಎಲ್ಲ ಕಾರ್ಯಕ್ರಮಗಳನ್ನು ಇತ್ತೀಚೆಗೆ ಆಕಸ್ಮಿಕವಾಗಿ ನಮ್ಮನ್ನಗಲಿದ ಗೊಂಬೆಯಾಟ ಖ್ಯಾತ ತಜ್ಞರಾದ ಶ್ರೀ ಬೆಳಗಲ್‌ ವೀರಣ್ಣ ( 1930-2023) ಇವರ ಸ್ಮರಣಾರ್ಥಕ್ಕೆ ಸಮರ್ಪಿಸಲಾಗಿದೆ ಎಂದು ತಿಳಿಸಿದರು . 
 ಪತ್ರಿಕಾಗೋಷ್ಟಿಯಲ್ಲಿ   ಟ್ರಸ್ಟಿಗಳಾದ ಶಿವರಾಮ ಭಟ್, ರವಿ ಹೆಗಡೆ, ಡಾ. ಪರಾಗ್ ಮೆಳವಂಕಿ, ರಜನಿ  ಗರುಡ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂರ್ಪಕಿಸಿರಿ : 9945564891
ನವೀನ ಹಳೆಯದು

نموذج الاتصال