ಕರ್ನಾಟಕ ರಾಜ್ಯ ಸಾರಿಗೆ ಮಂತ್ರಿಗಳಿಗೆ ಮನವಿ.
ಧಾರವಾಡ ಲಾರಿ ಮಾಲೀಕರ ಹಾಗೂ ಸಾಗಾಣಿಕೆದಾರರ ಸಂಘದಿಂದ
ಕರ್ನಾಟಕ ರಾಜ್ಯ ಸಾರಿಗೆ ಮಂತ್ರಿಗಳು
ಮಾನ್ಯ ರಾಮಲಿಂಗ ರೆಡ್ಡಿಯವರಿಗೆ .ಮಾಜಿ ಮಹಾಪೌರರು ಹಾಗೂ ಧಾರವಾಡ ಲಾರಿ ಮಾಲೀಕರ ಹಾಗೂ ಸಾಗಾಣಿಕೆದಾರರ ಸಂಘದ ಅಧ್ಯಕ್ಷ
ಐ.ಎಂ. ಜವಳಿ. ತೆರಿಗೆಯನ್ನು ಪಾವತಿಸಲು ಕಂತಿನರೂಪದಲ್ಲಿ ನೀಡಲು ಅನುವು ಮಾಡಿಕೊಡಲು ಕೇಳಿಕೂಂಡರು,
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು
ಕರ್ನಾಟಕ ಮೋಟಾರ ವಾಹನ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ 2023 ಜಾರಿಗೊಳಿಸಲಾಗಿದೆ ಇದರಿಂದ ಸರಕು ವಾಹನಗಳು ಒಟ್ಟಾರೆ ತೂಕವು 9500 ರಿಂದ ಕೆಜಿ ರಿಂದ ಮಿರಿದ್ದರೆ ಮತ್ತು 1200ಕಿ.ಗ್ರಾಂ. ಮೀರಿದ ವಾಹನಗಳಿಗೆ ಪೂರ್ಣಾವಧಿ ತೆರಿಗೆ ವಿಧಿಸಲಾಗಿದೆ ಎಂದರು.
ಸರಕು ಸಾಗಾಣಿಕೆ ವ್ಯವಹಾರ ಸದ್ಯದ ಮಟ್ಟಿಗೆ ಬಹಳ ಸಂಕಷ್ಟದಲ್ಲಿದೆ. ಆದ್ದರಿಂದ ಲಾರಿ ಮಾಲಕರು ಗಾಡಿ ಕಂತು ಮರುಪಾವತಿ ಮಾಡುವಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ, ಈ ಸಮಯದಲ್ಲಿ ವಾಹನ ಮಾಲೀಕರಿಗೆ ಏಕಕಾಲಕ್ಕೆ ಇಷ್ಟೊಂದು ದೊಡ್ಡ ಮೊತ್ತ ಸಂದಾಯ ಮಾಡಲು ಸಾಧ್ಯವಿಲ್ಲಾ. ಆದ್ದರಿಂದ ನಾವು ಈ ಮೊತ್ತವನ್ನು 6 ತಿಂಗಳ ಕಾಲ ಕಂತಿನಲ್ಲಿ ಸಂದಾಯ ಮಾಡುವ ಬೇಡಿಕೆಯನ್ನು ನಾವು ನಮ್ಮ ರಾಜ್ಯಮಟ್ಟದ ವಾಹನ ಮಾಲಕರ ಸಂಘದಿಂದ ನಿಮ್ಮ ಮುಂದೆ ಇಟ್ಟಿದ್ದು ತಾವು ಲಾರಿ ಮಾಲಕರ ಆರ್ಥಿಕ ಸ್ಥಿತಿಯನ್ನು ಅರಿವು ಮಾಡಿಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸಲು ವಿನಂತಿಸಿಕೊಳ್ಳುತ್ತೇವೆ ಎಂದರು.
ಕೆಲವು ವಾಹನಗಳು ಫಿಟ್ಟನೆಸ್ ಸರ್ಟಿಫಿಕೇಟ್ ಪಡೆಯಬೇಕಾಗಿದೆ ,ಮತ್ತು ಕೆಲವು ವಾಹನಗಳ ವರ್ಗಾವಣೆ ಮಾಡಬೇಕಾಗಿದೆ,ಪೂರ್ಣಾವಧಿ ತೆರಿಗೆ ಸಂದಾಯದ ವಿಷಯಕ್ಕೆ ಪರಿಹಾರ ಕಂಡುಕೊಳ್ಳುವವರೆಗೆ ಈ ವಿಷಯ ಸಾಧ್ಯವಿಲ್ಲಾ. ಏಕೆಂದರೆ ಆರ್.ಟಿ.ಓ. ಆಫೀಸಿನಲ್ಲಿ ಕಂಪ್ಯೂಟರಗಳು ಇದಕ್ಕೆ ಒಪ್ಪಿಗೆ ಕೊಡುತ್ತಿಲ್ಲಾ. ವಾಹನಗಳು ಫಿಟ್ಟಿನಸ್ ಇಲ್ಲದೆ ಓಡಾಡಿಸುವುದು ದೊಡ್ಡ ಅಪಾಯ,ಇದರಿಂದ ತಾವು ಪೂರ್ಣಾವಧಿ ತೆರಿಗೆ ವಿಷಯ ಇತ್ಯರ್ಥವಾಗುವವರೆಗೆ ಸಂಬಂಧಪಟ್ಟ ಆರ್.ಟಿ.ಓ. ಅವರಿಗೆ ಟ್ಯಾಕ್ಸ್ ಚಾಲ್ತಿಯಲ್ಲಿದ್ದವರಿಗೆ ಫಿಟ್ಟೆನೆಸ್ ಮತ್ತು ವರ್ಗಾವಣೆ ಮಾಡಲು ಆದೇಶಿಸಲು ವಿನಂತಿಸಿದರು.
ಈರಪ್ಪ ಹೂಗಾರ,ಶಬ್ಬೀರ ತಡಕೋಡ, ಸಿದ್ದಲಿಂಗಪ್ಪ
ಉಳ್ಳಿಗೇರಿ, ಸದ್ದಾಂಮ್ ಖತೀಬ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ:9945564891