ಧಾರವಾಡ ಜರ್ನಲಿಸ್ಟ್ ಗಿಲ್ಡ್‌ನ ಪದಾಧಿಕಾರಿಗಳ ಆಯ್ಕೆ
ಧಾರವಾಡ : ಧಾರವಾಡ ಜರ್ನಲಿಸ್ಟ್ ಗಿಲ್ಡ್‌ನ ೨೦೨೩-೨೪ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಜರ್ನಲಿಸ್ಟ್ ಗಿಲ್ಡ್‌ನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರ ಒಮ್ಮತದ ಮೇರೆಗೆ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಡಾ.ಬಸವರಾಜ್ ಹೊಂಗಲ್ ಎರಡನೇ ಬಾರಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹಿರಿಯ ಛಾಯಾಗ್ರಾಹಕ ಬಸವರಾಜ್ ಅಳಗವಾಡಿ ಪುನರಾಯ್ಕೆಯಾದರು. ಕಾರ್ಯದರ್ಶಿಯಾಗಿ ಹಿರಿಯ ಪತ್ರಕರ್ತ ನಿಜಗುಣಿ ದಿಂಡಲಕೊಪ್ಪ ಆಯ್ಕೆಯಾಗಿದ್ದು ಖಜಾಂಚಿಯಾಗಿ ಪತ್ರಕರ್ತ ವಿಕ್ರಮ್ ನಾಡಿಗೇರ ಪುನರಾಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ. ಮಿಲಿಂದ್ ಪಿಸೆ, ರಾಜು ಕರಣಿ, ಸದ್ದಾಂ ಮುಲ್ಲಾ, ಮಹಾಂತೇಶ ಕಣವಿ, ವಿಶ್ವನಾಥ ಕೋಟಿ, ಮಲ್ಲಿಕಾರ್ಜುನ್ ಹಿರೇಮಠ, ಶಿವಲಿಂಗಯ್ಯ ಪಾಟೀಲ್ ಅವರನ್ನು ಆಯ್ಕೆ ಮಾಡಲಾಯಿತು. ಇದಕ್ಕೂ ಮುನ್ನ ಹಿರಿಯ ಪತ್ರಕರ್ತ ಇ.ಎಸ್.ಸುಧೀಂದ್ರ ಪ್ರಸಾದ್ ಗಿಲ್ಡ್‌ನ್ ವಾರ್ಷಿಕ ಕಾರ್ಯಚಟುವಟಿಕೆ ವರದಿ ಮಂಡಿಸಿದರು. ಧಾರವಾಡ ಜರ್ನಲಿಸ್ಟ್ ಗಿಲ್ಡ್‌ನ ಸರ್ವಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ: 9945564891