ಕಟ್ಟಡ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು-ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ವ್ಯಾಪಿ ಪ್ರತಿಭಟನಾ ದಿನದ ಅಂಗವಾಗಿ ಕಲಾಭಾವನದಿಂದ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ.

ಕಟ್ಟಡ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು-ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ವ್ಯಾಪಿ ಪ್ರತಿಭಟನಾ ದಿನದ ಅಂಗವಾಗಿ ಕಲಾಭಾವನದಿಂದ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ.          
      ಧಾರವಾಡ 29 : 
ಕಟ್ಟಡ ಕಾರ್ಮಿಕರಿಗೆ ನ್ಯಾಯಯುತ ಹಕ್ಕುಗಳನ್ನು ಒದಗಿಸಲು, ಹೋರಾಟದ ಒತ್ತಡದಿಂದ ಕಲ್ಯಾಣ ಮಂಡಳಿಯು ಅಸ್ತಿತ್ವಕ್ಕೆ ಬಂದಿದ್ದು, ಈ ಮಂಡಳಿಯು ಕಟ್ಟಡ ಕಾರ್ಮಿಕರಿಗೆ ಎಲ್ಲಾ ಘೋಷಿತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕಿತ್ತು. ಆದರೆ ಸಕಾಲದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೇ ಮಂಡಳಿಯು ವಿಳಂಬ ನೀತಿಯನ್ನು ಅನುಸರಿಸಿ, ಕಾರ್ಮಿಕರನ್ನು ಹಕ್ಕುಗಳಿಂದ ವಂಚಿತರನ್ನಾಗಿಸುತ್ತಿರುವುದು ಅತ್ಯಂತ ನೋವಿನ ವಿಚಾರ,

ನೊಂದಾಯಿತ ಕಾರ್ಮಿಕನ ಇಡೀ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ. ಕಳೆದ 2 ವರ್ಷಗಳಿಂದ ಬರಬೇಕಾದ ಶೈಕ್ಷಣಿಕ ಸಹಾಯಧನ ಇನ್ನೂ ಬಂದಿಲ್ಲ. ಎಲ್ಲರಿಗೂ ಸೂರು ಕಟ್ಟುವ ಈ ಕಟ್ಟಡ ಕಾರ್ಮಿಕರು ತಮಗೊಂದು ಗೂಡು ಕಟ್ಟಿಕೊಳ್ಳಲು ಆಗುತ್ತಿಲ್ಲ. ಇಂದಿಗೂ ಬಹುತೇಕ ನೈಜ ಕಟ್ಟಡ ಕಾರ್ಮಿಕರು ನೊಂದಾವಣೆಯಾಗದೆ ಹೊರಗೂಳಿಯುವುದು ಒಂದೆಡೆಯಾದರೆ, ಮತ್ತೊಂದೆಡೆ ಕಟ್ಟಡ ಕಾರ್ಮಿಕರಲ್ಲದವರ ನೋಂದಣಿ ಅವ್ಯಾಹತವಾಗಿ ಸಾಗಿದೆ.ಮಂಡಳಿಯ ಹಣ ಅನವಶ್ಯಕವಾಗಿ ಪೋಲಾಗುತ್ತಿದೆ.

ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಸಮಿತಿಯು ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕು, ಅವರಿಗೆ ಎಲ್ಲಾ ಘೋಷಿತ ಸೌಲಭ್ಯಗಳು ದೊರಕುವಂತಾಗಬೇಕು ಎಂದು ಆಗ್ರಹಿಸಿ ಅ 29 ರಂದು ರಾಜ್ಯ ವ್ಯಾಪಿ ಪ್ರತಿಭಟನಾ ದಿನವನ್ನು ಆಚರಿಸಲು ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರ ಕೆಳಗಿನ ನ್ಯಾಯ ಸಮ್ಮತ ಬೇಡಿಕೆಗಳನ್ನು ನಿಗದಿತ ಸಮಯದೊಳಗೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘವು ಆಗ್ರಹಿಸುತ್ತದೆ.
ಬೇಡಿಕೆಗಳು

ಕಳೆದ 2 ವರ್ಷಗಳಿಂದ ಬಾಕಿಯಿರುವ ಶೈಕ್ಷಣಿಕ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಿ. ಪ್ರಸಕ್ತ 2023-24ನೇ ವರ್ಷದ ಶೈಕ್ಷಣಿಕ ಸಹಾಯಧನದ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಿ.

ಅರ್ಹ ಕಾರ್ಮಿಕನಿಗೆ ಪಿಂಚಣಿಗಾಗಿ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕೆಂಬ ನಿಯಮವನ್ನು ತೆಗೆದುಹಾಕಿ. ಹಾಗೂ ಮೊದಲ ಬಾರಿಗೆ ಕಂದಾಯ ಅಧಿಕಾರಿಗಳು 'ಜೀವಿತ ಪ್ರಮಾಣ' ಪತ್ರವನ್ನು ನೀಡಿದ ನಂತರ, ಮುಂದಿನ ವರ್ಷಗಳಲ್ಲಿ ಕಾರ್ಮಿಕ
ಇಲಾಖೆಯಿಂದಲೇ ಜೀವಿ ಪ್ರಮಾಣ ಪತ್ರ ನೀಡಬೇಕು ಮತ್ತು ಬೇರೆ ಯಾವುದೇ ಪಿಂಚಣಿ ಪಡೆದರೂ ಪಿಂಚಣಿಯನ್ನು ನಿಲ್ಲಿಸಬಾರದು.

ರೂ.5 ಲಕ್ಷ ರೂಪಾಯಿಗಳ 'ನಗದು ರಹಿತ ಆರೋಗ್ಯ ಸೇವೆ'ಯನ್ನು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಕೂಡಲೇ ಜಾರಿಗೊಳಿಸಿ.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಾಣಕ್ಕೆ ಮಂಡಳಿಯು ರೂ. 5 ಲಕ್ಷ ಸಹಾಯಧನ ಒದಗಿಸಬೇಕು.

ಮಂಡಳಿಯ ಸದಸ್ಯತ್ವದ ನವೀಕರಣ ಅವಧಿಯನ್ನು ಕೇವಲ 1 ವರ್ಷಕ್ಕೆ ಇಳಿಸಿರುವ ಮಂಡಳಿಯ ನಿರ್ಧಾರವನ್ನು ಕೈಬಿಡಿ. ಹಾಗೂ ಈ ಬಗ್ಗೆ ಹಿಂದಿನ ವಿಧಾನವನ್ನು ಮುಂದುವರಿಸಿ.

ಸ್ಲಂ ಬೋರ್ಡ್ ಗೆ ನೀಡಿದ 518 ಕೋಟಿ ರೂಪಾಯಿ ಮಂಡಳಿಯ ಹಣವನ್ನು ಕೂಡಲೇ ವಾಪಸ್ ಪಡೆಯಿರಿ.

ಮಂಡಳಿಯ ಹಣ ಪೋಲು ಮಾಡುವ ಶಿಶುವಿಹಾರ,ಅಂಗನವಾಡಿ,ಮೊಬೈಲ್ ಕ್ಲಿನಿಕ್ ಇತ್ಯಾದಿ ಯೋಜನೆಗಳನ್ನು ನಿಲ್ಲಿಸಿ.
          ಅವಶ್ಯಕತೆ ಇರುವ ಮಕ್ಕಳಿಗೆ ಮಾತ್ರ ಲ್ಯಾಪ್ ಟಾಪ್-ಟ್ಯಾಬ್ ಖರೀದಿಸಲು ಡಿಬಿಟಿ ಮೂಲಕ ಸಹಾಯಧನ ನೀಡಿ, ಹಾಗೆ ಅವಶ್ಯಕತೆ ಇರುವ ಕಟ್ಟಡ ಕಾರ್ಮಿಕರಿಗೆ ಮಾತ್ರ ಟೂಲ್ ಕಿಟ್ ಖರೀದಿಸಲು ಡಿಬಿಟಿ ಮೂಲಕ ಸಹಾಯಧನ ನೀಡಿ.

ಮಂಡಳಿಯ ಆದಾಯ ಹೆಚ್ಚಿಸಲು ಬಾಕಿಯಿರುವ ಸೆಸ್ ಕೂಡಲೇ ವಸೂಲು ಮಾಡಲು ಕ್ರಮ ಕೈಗೊಳ್ಳಿ, ಸರ್ಕಾರಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ 2% ವರೆಗೆ ಸೆಸ್ ಹೆಚ್ಚಿಸಿ.

 ಈವರೆಗೆ ವಿವಿಧ ಕಿಟ್‌ಗಳು,ಲ್ಯಾಪ್ ಟಾಪ್ ಖರೀದಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ.

ಬೋಗಸ್ ಕಾರ್ಡಗಳನ್ನು ಪತ್ತೆಹಚ್ಚಿ ರದ್ದು ಮಾಡಿ, ನೋಂದಾವಣೆಯನ್ನು ಈ ಹಿಂದೆ ಇದ್ದಂತೆ ಕಾರ್ಮಿಕ ಸಂಘಟನೆಯ ಮೂಲಕ ಮತ್ತು ಕಾರ್ಮಿಕ ಇಲಾಖೆಯ ಮೂಲಕ ಮಾತ್ರ ಮಾಡುವ ಕ್ರಮ ಜಾರಿಗೆ ತನ್ನಿ. ಏಜಂಟರ ಶೋಷಣೆ ತಪ್ಪಿಸಿ.

ಅಪಘಾತದಲ್ಲಿ ಜೀವ ಕಳೆದುಕೊಂಡ ಕಾರ್ಮಿಕರಿಗ ಕುಟುಂಬಗಳಿಗೆ 10 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿ, ಅಪಘಾತದಲ್ಲಿ ದುಡಿಯುವ ಸಾಮರ್ಥ್ಯವನ್ನು ಕಳೆದುಕೊಂಡ ಕಾರ್ಮಿಕರಿಗೆ 10 ಲಕ್ಷ ರೂಪಾಯಿಗಳ ಪರಿಹಾರ ಹಾಗೂ ಜೀವನ ಯೋಗ್ಯ ಪಿಂಚಣಿ ನೀಡಿ.
ಅಧ್ಯಕ್ಷರು
ಗಂಗಾಧರ ಬಡಿಗೇರ ಜಿಲ್ಲಾ 
ಜಿಲ್ಲಾ ಕಾರ್ಯದರ್ಶಿಗಳು
ಯೋಗಪ್ಪ ಜ್ಯೋತೆಪ್ಪನವರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ : 9945564891
ನವೀನ ಹಳೆಯದು

نموذج الاتصال