ಮೋರೆ ವಿರುದ್ಧ ಅಪಪ್ರಚಾರ--ತೇಜ್ಯೋವದೆ ಖಂಡಿಸಿ ಬೃಹತ್ ಪ್ರತಿಭಟನೆ

ಮೋರೆ ವಿರುದ್ಧ ಅಪಪ್ರಚಾರ--ತೇಜ್ಯೋವದೆ ಖಂಡಿಸಿ ಬೃಹತ್ ಪ್ರತಿಭಟನೆ
   ಧಾರವಾಡ:--ನಗರದ  ಪ್ರತಿಷ್ಠಿತ  ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷರು  ಹಾಗೂ ಖ್ಯಾತ ಹೊಟೆಲ್  ಉದ್ದಿಮೆದಾರಾದ ಮನೋಹರ.ಎನ್. ಮೋರೆ  ಅವರ ಬಗ್ಗೆ ಅಪಪ್ರಚಾರ ಮಾಡುತ್ತೀರುವ ಮರಾಠಾ ವಿದ್ಯಾಪ್ರಸಾರಕ ಮಂಡಳ ( ರಿ ) ಹೋರಾಟ ಸಮಿತಿ , ಧಾರವಾಡ ಇದರಲ್ಲಿರುವ ಕೆಲ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಮರಾಠಾ ವಿದ್ಯಾಪ್ರಸಾರಕ ಮಂಡಳದ ಸದಸ್ಯರು ಹಾಗೂ ಸಮಸ್ತ ಮರಾಠಾ ಸಮಾಜ ಬಾಂಧವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಅಪಿ೯ಸಿದರು.

      ಎಮ್.ಎನ್ ಮೋರೆ ಅವರ ನೇತೃತ್ವದ ತಂಡದವರು ಸಮಾಜದಲ್ಲಿರುವ ಸದಸ್ಯರ ನೋವುಗಳಲ್ಲಿ ಪಾಲುದಾರರಾಗಿ , ಸಂಸ್ಥೆಯ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಯಾಗಿ , ಸಮಾಜದ ಒಳಿತನ್ನು ಬಯಸುವಂತಹ ತ್ಯಾಗ ಜೀವಿ  ಎಮ್ . ಎನ್ . ಮೋರೆ ಅವರ ನೇತೃತ್ವದ ತಂಡ ಬರಬೇಕೆಂದು ಸಮಸ್ತ ಮರಾಠಾ ಸಮಾಜ ಬಾಂಧವರು ನಿರ್ಧರಿಸಿ ಮತ್ತೊಮ್ಮೆ ಎಮ್ . ಎನ್ . ಮೋರೆ ಅವರನ್ನು ಚುನಾಯಿತಗೊಳಿಸಿ ಸಮಾಜದ ಸೇವೆಯನ್ನು ಸಲ್ಲಿಸಲು ಅವಕಾಶವನ್ನು ಮಾಡಿಕೊಟ್ಟಿರುತ್ತೇವೆ ಎಂದು ಹೇಳಿದ್ದಾರೆ.

ಪ್ರತಿಷ್ಠಿತ ಮರಾಠಾ ವಿದ್ಯಾಪ್ರಸಾರಕ ಮಂಡಳವು 130 ವರ್ಷಗಳನ್ನು ಪೂರೈಸಿ 131 ನೇ ವರ್ಷಕ್ಕೆ ಕಾಲಿಡುತ್ತಿದೆ . ಮಂಡಳವು ಅದ್ಭುತ ಇತಿಹಾಸವನ್ನು ಹೊಂದಿದೆ . ನಮ್ಮ ಪೂರ್ವಿಕರು ಕಟ್ಟಿ ಬೆಳೆಸಿದ ಮರಾಠಾ ವಿದ್ಯಾಪ್ರಸಾರಕ ಮಂಡಳವು ತನ್ನದೇ ಆದ ಕೀರ್ತಿಯನ್ನು ಹೊಂದಿರುತ್ತದೆ .  ಎಮ್ . ಎನ್ . ಮೋರೆ ಅವರ ನೇತೃತ್ವ ತಂಡದ ಆಡಳಿತಾವಧಿಯಲ್ಲಿ ಸಾಕಷ್ಟು  ಅಭಿವೃದ್ಧಿ ಕಾರ್ಯಗಳು ಜರುಗಿವೆ.

  ಅವರ ನೇತೃತ್ವದ ತಂಡ ಮ.ವಿ.ಪ್ರ ಮಂಡಳದಲ್ಲಿ ಶೈಕ್ಷಣಿಕವಾಗಿ , ಸಾಮಾಜಿಕವಾಗಿ ಮತ್ತು ಕಟ್ಟಡಗಳು ಕಾಮಗಾರಿಗಳ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಜರುಗಿರುತ್ತದೆ . ವಿದ್ಯಾರ್ಥಿಗಳ ಶೌಚಾಲಯ , ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯ , ಮ.ವಿ.ಪ್ರಮಂಡಳದ ಹಾಗೂ ದೇವಸ್ಥಾನದ ಮುಖ್ಯದ್ವಾರ , ಪದವಿ ಮಹಾವಿದ್ಯಾಲಯದ ಕಟ್ಟಡ , ಶಾಲಾವಾಹನ & ಶವವಾಹನ ನಿಲುಗಡೆಯ ಹಾಗೂ ವಿದ್ಯಾರ್ಥಿಗಳ ಊಟದ ಆಸನಕ್ಕೆ ಶೆಡ್ ನಿರ್ಮಾಣ , ಮತ್ತು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆವರೆಗೂ ಮರಾಠಾ ವಿದ್ಯಾರ್ಥಿಗಳ ಸಂಪೂರ್ಣ ಉಚಿತ ಶಿಕ್ಷಣ ಒದಗಿಸುವುದು . ಪದವಿ & ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮರಾಠಾ ವಿದ್ಯಾರ್ಥಿಗಳಿಗೆ ಶೇ 50  ರಷ್ಟು ಫೀ ನಿಗದಿ ಪಡಿಸಿ ಶೈಕ್ಷಣಿಕವಾಗಿ ಮುಂದುವರೆಯಲೂ ಕಾರಣಿಭೂತರಾಗಿರುತ್ತಾರೆ . ಹೀಗೆ ಹತ್ತು - ಹಲವಾರು ಅಭಿವೃದ್ಧಿ ಕಾರ್ಯಗಳು ನಮ್ಮ ಕಣ್ಣಮುಂದೆಯೆ ಜರುಗಿರುತ್ತವೆ ಎಂದು ಸಮಾಜ ಬಾಂಧವರು ಹೇಳಿದ್ದಾರೆ.

     ಎಮ್.ಎನ್ ಮೋರೆ ಅವರ 3 ವರ್ಷದ ಅವಧಿಯಲ್ಲಿ ಕೈಗೊಂಡ ಕಾರ್ಯಗಳಿಗೆ ಖರ್ಚಾಗಿರುವ ಸಂಪೂರ್ಣ ಲೆಕ್ಕ - ಪತ್ರಗಳನ್ನು  ಸರ್ವಸಾಧಾರಣ ಸಭೆ ನಡೆಸಿ ಸಭೆಯಲ್ಲಿ ಸಮಾಜ ಬಾಂಧವರ ಮುಂದೆ ಹಾಜರುಪಡಿಸಿದ್ದಾರೆ .  ಅವರ ನೇತೃತ್ವದ ತಂಡದ ಆಡಳಿತದ ಪ್ರಾಮಾಣಿಕತೆ ಹಾಗೂ ಕಾರ್ಯದಕ್ಷತೆಯಿಂದ ಕೆಲಸವನ್ನು ನಿರ್ವಹಿಸಿರುತ್ತಾರೆ .  3 ವರ್ಷದ ಸೇವೆಯ ನಂತರವೂ ಪುನಃ ಮತ್ತೊಮ್ಮೆ ಚುನಾಯಿತರಾಗಿತ್ತಾರೆ . ಇದನ್ನು ಸಹಿಸದ ಜನ ಅಪಪ್ರಚಾರ ಮಾಡಿ ಎಮ್.ಎನ್ ಮೊರೆ ಹಾಗೂ ಅವರ ತಂಡಕ್ಕೆ ಅಪಪ್ರಚಾರ  ಮಾಡಿ ತೇಜ್ಯೋವದೆಯನ್ನು ಉಂಟುಮಾಡಿರುತ್ತಾರೆ . 

    ಆದ್ದರಿಂದ ಸಮಾಜದ ಅಭಿವೃದ್ಧಿಯನ್ನು ಬಯಸುವಂತಹ ನಮಗೆ ಎಮ್.ಎನ್.ಮೋರೆ ಅವರ ಬಗ್ಗೆ ಅಪಪ್ರಚಾರ ಮಾಡುತ್ತೀರುವ ಮರಾಠಾ ವಿದ್ಯಾಪ್ರಸಾರಕ ಮಂಡಳ ( ರಿ ) ಹೋರಾ ಸಮಿತಿ , ಧಾರವಾಡ ಇದರಲ್ಲಿರುವ ಕೇಲ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳ ಅವರನ್ನು ಮರಾಠಾ ವಿದ್ಯಾಪ್ರಸಾರಕ ಮಂಡಳದ ಸದಸ್ಯರು ಹಾಗೂ ಸಮಸ್ತ ಮರಾಠಾ ಸಮಾಜ  ಬಾಂಧವರು ಆಗ್ರಹಿಸಿದ್ದಾರೆ.

    ಪ್ರತಿಭಟನೆಯಲ್ಲಿ ಶಿವಾಜಿ ಘಾಟಗೆ, ವಿಜಯ ಲಾಡ್, ಜೆ.ಜಿ.ಕ್ಷೀರಸಾಗರ್, ಅನೀಲ್ ಶಿಂಧೆ, ಸುನೀಲ್ ಘೋಪಡೆ,  ಕೃಷ್ಣಾ ಕಾಳೆ, ಬಾಬು ಜಾಧವ, ಶಿವಾಜಿ ಇಂಗಳೆ, ಅಶೋಕ ಬಾಬರ್, ಗಂಗಾರಾಮ್ ಪವಾರ, ಯಲ್ಲಪ್ಪ ಮಾನೆ  ಸೇರಿದಂತೆ ಸಾವಿರಾರು ಸಮಾಜಬಾಂಧವರು ಭಾಗವಹಿಸಿದ್ದರು.


ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ : 9945564891
ನವೀನ ಹಳೆಯದು

نموذج الاتصال